ಕಲಬುರಗಿ:ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ನಿವಾರಣೆ ಗೆ ಉನ್ನತ ಮಟ್ಟದ ಸಮಿತಿ ರಚಿಸಿ ಪಠ್ಯಪುಸ್ತಕಗಳನ್ನು ಮರು ಪರಿಶೀಲನೆಗೆ ಒಳಪಡಿಸಬೇಕು ಎಂದು ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸಾಹಿತಿ ಗಳಾದ ಬಿ ಎಚ್ ನಿರಗುಡಿ ಅವರು ಸರಕಾರಕ್ಕೆ ಆಗ್ರಹಿಸಿದ್ದಾರೆ.
ಪಠ್ಯ ಪುಸ್ತಕದ ಪರಿಷ್ಕರಣೆಗೆ ಸಂಬಂಧಿಸಿದಂತೆ ಪರ-ವಿರೋಧದ ನಿಲುವುಗಳು ತೀವ್ರತೆ ಪಡೆದುಕೊಳ್ಳುತ್ತಿವೆ. ಸಾಂಸ್ಕೃತಿಕ ಸಂಘಷ೯ಗಳಿಗೆ ನಾಂದಿಯಾಗುತ್ತಿವೆ. ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಸಿದ್ಧಪಡಿಸಿರುವ ಪಠ್ಯಪುಸ್ತಕಗಳನ್ನು ಮರು ಪರಿಶೀಲನೆ ನಡೆಸಲು ಶಿಕ್ಷಣ ತಜ್ಞರ ಉನ್ನತ ಮಟ್ಟದ ಸಮಿತಿ ನೇಮಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪಠ್ಯಗಳಲ್ಲಿ ಎಡ-ಬಲ ಮುಖ್ಯವಲ್ಲ. ಮಕ್ಕಳು ನಾಡನ್ನು ಪ್ರೀತಿಸುವ ಹಾಗೂ ದೇಶವನ್ನು ಗೌರವಿಸುವ, ಸಂಸ್ಕೃತಿ-ಸಂಸ್ಕಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮಾನವೀಯ ಮೌಲ್ಯಗಳನ್ನು ರೂಪಿಸಿಕೊಳ್ಳುವ ಪಠ್ಯಗಳು ಬೇಕಾಗಿವೆ. ಕುವೆಂಪು, ಲಂಕೇಶ್ ರ ಹಾಗೂ ಬಸವಣ್ಣನವರ ಕುರಿತ ಪಾಠಗಳು ಕೈಬಿಟ್ಟು. ವಿವಾದದ ಮಧ್ಯೆಯು ಪರಿಷ್ಕರಣೆ ಮಾಡಿ ಅನೇಕ ಪ್ರಮುಖ ಲೇಖಕರ ಹಾಗೂ ಮಹಿಳಾ ಲೇಖಕರ ಪಾಠಗಳನ್ನು ಕೈ ಬಿಟ್ಟು ವಿವಾದವಾಗುವ ಪಾಠಗಳನ್ನು ಸೇರಿಸಿದ್ದಾರೆ . ಮಕ್ಕಳಿಗೆ ಉತ್ತಮ ಪಠ್ಯ ನೀಡಿದರೆ ಉತ್ತಮ ಪ್ರಜೆಗಳಾಗಲು ಸಾದ್ಯ. ಹೀಗಾಗಿ ರಾಜ್ಯದ ಮುಖ್ಯಮಂತ್ರಿಗಳು ಆದಷ್ಟು ಬೇಗನೆ ಮುತವರಜಿ ವಹಿಸಿ ಈ ಸಮಸ್ಯೆ ಬಗೆಹರಿಸಬೇಕೆಂದು ನಿರಗುಡಿ ಆಗ್ರಹಿಸಿದ್ದಾರೆ.