ಕಾನೂನು ಪಾಲಿಸಿ ಮಾದರಿಯಾಗಲಿ: ಚಂದ್ರಶೇಖರ್

1
70

ಆನೇಕಲ್: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಹಾಗೂ ಕಾನೂನನ್ನು ಪರಿಪಾಲಿಸುವ ಮೂಲಕ ಸಮಾಜಕ್ಕೆ ಮಾದರಿ ಆಗಬೇಕೆಂದು ಆನೇಕಲ್ ತಾಲ್ಲೂಕು ನ್ಯಾಯಾಲಯದ ಸರಕಾರಿ ವಕೀಲ ಚಂದ್ರಶೇಖರ್ ತಿಳಿಸಿದ್ದಾರೆ.

ಬುಧವಾರ ತಾಲ್ಲೂಕಿನ ಶ್ರೀವಾಣಿ ಕಾಲೇಜಿನಲ್ಲಿ ಕೇಂದ್ರ ಸರಕಾರದ ಟೆಲಿ ಲಾ ವತಿಯಿಂದ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾನವೀಯ ಮೌಲ್ಯಗಳ ಮೊದಲ ಹಂತವೇ ಕಾನೂನು ಅರಿವನ್ನು ಪಾಲಿಸುವುದಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಇದನ್ನೂ ಓದಿ: ಕಲಬುರಗಿ: ಪೊಲೀಸರಿಂದ ನೊಂದವರ (Victim) ದಿನ ಆಚರಣೆ

ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ಜೀವನಾದರ್ಶಗಳನ್ನು ಅರ್ಥ ಮಾಡಿಕೊಳ್ಳಬೇಕು. ಹಾಗೂ ಅವರ ಹಾದಿಯಲ್ಲಿ ಮುನ್ನಡೆಯುವ ಮೂಲಕ ದೇಶದ ಐಕ್ಯತೆಯನ್ನು ಎತ್ತಿ ಹಿಡಿಯಬೇಕೆಂದು ಅವರು ಆಶಿಸಿದ್ದಾರೆ.

ಟೆಲಿ ಲಾ ವಕೀಲ ಪುರುಷೋತ್ತಮ್ ಚಿಕ್ಕಹಾಗಡೆ ಮಾತನಾಡಿ, ವಿದ್ಯಾರ್ಥಿಗಳು ಓದುವ ಹಂತದಲ್ಲಿ ಕಾನೂನನ್ನು ಅರ್ಥ ಮಾಡಿಕೊಂಡರೆ ಘನತೆಯ ಬದುಕು ನಮ್ಮದಾಗುತ್ತದೆ. ಈ ನಿಟ್ಟಿನಲ್ಲಿ ಟೆಲಿ ಲಾ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ನಿರಂತರವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆಂದು ತಿಳಿಸಿದರು‌.

ಇದನ್ನೂ ಓದಿ: ಸರ್ಕಾರಿ ಕಾಲೇಜಿನ ನೂತನ ಕಟ್ಟಗಳಿಗೆ ಶಾಸಕ ಪ್ರಿಯಾಂಕ್ ಖರ್ಗೆ ಲೋಕಾರ್ಪಣೆ

ಸರಕಾರದ ಹಲವು ಯೋಜನೆಗಳು ವಿದ್ಯಾರ್ಥಿ ಪರವಾಗಿದ್ದು, ಈ ಯೋಜನೆಗಳ ಮೂಲಕ ಸಿಗುವಂತಹ ಸಹಾಯಧನವನ್ನು ಸದ್ಬಳಕೆ ಮಾಡಿಕೊಂಡು ಉನ್ನತ ವಿದ್ಯಾಭ್ಯಾಸದ ಕಡೆಗೆ ಮುಖ ಮಾಡಬೇಕೆಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ವಾಣಿ ಶ್ರೀ ಕಾಲೇಜಿನ ಸಂಸ್ಥಾಪಕ ಕೆ.ವಿ.ಚಂದ್ರಶೇಖರ್, ಕಾಲೇಜಿನ ಪ್ರಾಂಶುಪಾಲ ಎ.ಪಿ.ತಿಮ್ಮರೆಡ್ಡಿ, ಪ್ರಾಧ್ಯಾಪಕಿ ನಾಗಮ್ಮ, ಗಾಯತ್ರಿ, ಚಂದ್ರಕಲಾ ಉಪಸ್ಥಿತರಿದ್ದರು.

ಇದನ್ನೂ ಓದಿ: ಹೊನಗುಂಟಾ ಗ್ರಾಮದಲ್ಲಿ ಜನಮನ ಸೆಳೆದ ಗ್ರಾಮೀಣ ಕ್ರೀಡಾಕೂಟ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here