ಕಾಟಾಚಾರಕ್ಕೆ ನೇಕಾರ ಒಕ್ಕೂಟದ ಸ್ಥಾಪನೆ ಅವಕಾಶ ಕೊಡುವುದಿಲ್ಲ: ನಾಗರಾಜ ಕುಸಮ

0
137

ಕಲಬುರಗಿ: ನೇಕಾರ ಅಸ್ಮಿತೆ ಜಾಗ್ರತಿ ಸಮಿತಿ ಮತ್ತು ನೇಕಾರ ಸಮುದಾಯಗಳ ಒಕ್ಕೂಟ ಹಾಗೂ ಮಹಾನಗರ ಸಪ್ತ ನೇಕಾರ ಸಮುದಾಯಗಳ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಗರದ ಪದ್ಮಸಾಲಿ ಸಮಾಜದ ಸಹಯೋಗದಲ್ಲಿ ಸಂಘಟನಾ ಸಭೆ ಜರುಗಿತು.

ಸಭೆಯಲ್ಲಿ ಶ್ರೀ ಮಾರ್ಕಂಡೇಯ ದೇವಸ್ಥಾನದಲ್ಲಿ ಸಾಮೂಹಿಕ ಪೂಜೆ ಸಲ್ಲಿಸುವ ಮೂಲಕ ಸಭೆ ಪ್ರಾರಂಭಿಸಲಾಯಿತು. ಜಾಗೃತಿ ಸಮಿತಿಯ ಮುಖ್ಯ ಸಂಚಾಲಕರು ಶಿವಲಿಂಗಪ್ಪಾ ಅಷ್ಟಗಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರತಿ ರವಿವಾರದಂಡು ಒಂದೊಂದು ಸಮಾಜದ ಸಂಘ ಕಚೇರಿಗಳಲ್ಲಿ  ಸಭೆ ಹಮ್ಮಿಕೊಳ್ಳಲಾಗಿದೆ. ನೇಕಾರ ಅಸ್ಮಿತೆಯನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಸಭೆತ ಉದ್ದೇಶ ಸ್ಪಸ್ಟಪಡಿಸಿದರು.

Contact Your\'s Advertisement; 9902492681

ಪದ್ಮಸಾಲಿ ಸಮಾಜದ ಉಪಾಧ್ಯಕ್ಷ  ನಾಗರಾಜ ಕುಸಮ ರವರು ಸ್ವಾಗತಿಸಿ ಜಿಲ್ಲೆಯಲ್ಲಿ ಕಳೆದ 40 ವರ್ಷಗಳ ನಮ್ಮ ಸಮಾಜದ ಸಭೆ ಸೇರಿದ್ದು ಹರ್ಷಉಂಟಾಗುತಿದೆ ಎಂದರು.  ಅಲ್ಲದೆ ಕಾಟಾಚಾರಕ್ಕೆ ನೇಕಾರ ಒಕ್ಕೂಟದ ಘಟಕದ ಸ್ಥಾಪನೆ ಮಾಡಲು ಅವಕಾಶ ಕೊಡುವುದಿಲ್ಲ ಸಪ್ತ ನೇಕಾರರಲ್ಲಿ ಜಿಲ್ಲೆಯಲ್ಲಿ ಹಟಗಾರ ಮತ್ತು ದೇವಾಂಗ ದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಆದರೂ ಸಾಮಾಜಿಕ ನ್ಯಾಯ ದೃಷ್ಟಿಯಿಂದ ಎಲ್ಲರಿಗೂ ಅವಕಾಶ ನೀಡಿ ನೇಕಾರರ ಸಂಘಟನೆ ನೈಜ ಕಾರ್ಯಕರ್ತರನ್ನು ಪರಿಗಣಿಸಿ ಹೆಸರುಗಳು ಸೂಚಿಸುವ ಕಾರ್ಯ ನಮ್ಮ ಸಮಾಜ ಸೂಕ್ತವಾಗಿ ಆಲೋಚಿಸಿ ತಿಳಿಸಲಾಗುವುದು ಎಂದು ತಿಳಿಸಿದರು.

ಪದ್ಮಸಾಲಿ ಸಮಾಜದ ಅಧ್ಯಕ್ಷ ರಂಗನಾಥ ಬಾಬು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಗೌರವ ಅಧ್ಯಕ್ಷ ವಿಷ್ಣು ಬಡಾಗ ಸಪ್ತ ನೇಕಾರರ ಸಭೆ ಆಯೋಜಿಸಿ ಹಿರಿಯ ಒಮ್ಮತದ ಮೇರೆಗೆ ಸಮಾಜ ಸೇವಕರ ಪರಿಗಣಿಸಿ ಅವರ ಯೋಗ್ಯತೆ ಅನುಸಾರ ಸಮಾಜ ಸೇವೆಯಲ್ಲಿ ತೊಡಗಿಸಬೇಕು ಎಂದು ಸಲಹೆ ನೀಡಿದರು.

ದೇವಸ್ಥಾನದ ಆಡಳಿತ ಮಂಡಳಿ ಯನ್ನು ಕಂಡು ಅತೀವ ಸಂತೋಷ್ ವಾಗಿದೆ ಮತ್ತು ಹೆಮ್ಮೆಯಾಗಿತಿದೆ ಎಂದರು  ನೇಕಾರ ಧರ್ಮ ಸ್ಥಾಪನೆಗೆ ಧ್ವನಿ ಗೂಡಿಸಿ ಎಂದು ನೇಕಾರ ಸಂಘಟನಕಾರ ಹಾಗೂ ರಾಜ್ಯ ಹಟಗಾರ ಸಮಾಜದ ರಾಜ್ಯ ಕಾರ್ಯದರ್ಶಿ ವಿನೋದ ಕುಮಾರ ಜೇನವೆರಿ ಸಭೆಯಲ್ಲಿ ಕರೆ ನೀಡಿದರು.

ಅಲ್ಲದೆ ಕಲ್ಯಾಣ ಕರ್ನಾಟಕ ದಲ್ಲಿ ನೇಕಾರರ ಬ್ರಹತ್ ಸಮಾವೇಶ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವತರಾಗೋಣ ಎಂದು ಸೂಚಿಸಿದರು.

ಸಭೆಯಲ್ಲಿ ಕುರಹಿನಶೆಟ್ಟಿ ಸಮಾಜದ ಕಾರ್ಯದರ್ಶಿ ಚಂದ್ರಶೇಖರ ಮ್ಯಾಳಗಿ, ಪ್ರಕಾಶ ಇಂಗಳಗಿ, ಅಣ್ಣರಾಯ ಸರಡಗಿ ಮತ್ತು ರಾಮಚಂದ್ರ ತ್ರಿವೇದಿ, ಪದ್ಮಸಾಲಿ ಸಮಾಜದ ಸಧ್ಯಸರು ಇತರರು ಉಪಸ್ಥಿತರಿದ್ದರು. ಮುಂದಿನ ಸಭೆ ಜಿಲ್ಲಾ ಸ್ವಕುಳ ಸಾಳಿ ಸಮಾಜದಲ್ಲಿ ಸೇರಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here