ಯೋಗ ಮಾಡಿ ರೋಗದಿಂದ ದೂರ ವಿರೋಣ: ಪ್ರಕಾಶ ಅಂಗಡಿ

0
19

ಸುರಪುರ: ನಗರದ ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ನೆಹರು ಯುವಕೇಂದ್ರ ಕಲಬುರಗಿ, ಸಗರನಾಡು ಯುವಕ ಸಂಘ ಕನ್ನೆಳ್ಳಿ, ಬಸವೇಶ್ವರಪದವಿ ಮಹಾವಿದ್ಯಾಲಯ ಸಹಯೋಗದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾ ಆಚರಸಿಲಾಯಿತು.

ಕಾರ್ಯಕ್ರಮದ ಉದ್ಘಾಟಿಸಿದ ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ಇಂದಿನ ಆಧುನಿಕ ದಿನಮಾನಗಳಲ್ಲಿ ಒತ್ತಡದ ಜಂಜಾಟದಲ್ಲಿ ಬದುಕುತ್ತಿರುವ ಮನುಷ್ಯ ನೆಮ್ಮದಿ ಮತ್ತು ಆರೋಗ್ಯ ಹಾಳು ಮಾಡಿಕೊಂಡಿದ್ದಾನೆ, ಆಹಾರ ಪದ್ದತಿ, ದೈನಂದಿನ ಚಟುವಟಿಕೆ ನಮ್ಮನ್ನು ರೋಗ ಗ್ರಸ್ತನ್ನಾಗಿಸಿವೆ. ಇವೆಲ್ಲವುಗಳಿಗೆ ಸೂಕ್ತ ಪರಿಹಾರವೆಂದರೆ ಯೋಗವಾಗಿದ್ದು ಯೋಗ ಮಾಡಿ ರೋಗದಿಂದ ದೂರವಿರಬಹುದು.ಪೂರ್ವ ಕಾಲದಿಂದಲು ಆಚರಣೆಯಲ್ಲಿರುವ ಯೋಗ ಪದ್ದತಿ ಇತ್ತಿಚಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಹೆಚ್ಚು ಪ್ರಚಾರಪಡೆದಿದ್ದು ಯೋಗ ಕೈಗೊಳ್ಳುವುದರಿಂದ ರೋಗಮುಕ್ತವಾಗಿ ಬದುಕಬಹುದು ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಯೋಗ ಶಿಭಿರದಲ್ಲಿ ಪಾಲ್ಗೊಂಡಿದ್ದರು, ನೇಹರು ಯುವ ಕೇಂದ್ರದ ಸಯೋಜಕ ಸಂಜಯ ಯೋಗದ ಕುರಿತು ಮಾತನಾಡಿದರು. ವೇದಿಕೆ ಮೇಲೆ ಕಾಲೇಜಿನ ಪ್ರಾಚಾರ್ಯರಾದ ವಿರೇಶ ಹಳಿಮನಿ, ಶಾಂತುನಾಯಕ, ಉಪನ್ಯಾಸಕರಾದ ಬಲಭೀಮ ಪಾಟೀಲ್, ರುದ್ರಪ್ಪ ಕೆಂಭಾವಿ, ಲಕ್ಷ್ಮೀ ಪತ್ತಾರ, ರೇಖಾ ರತ್ತಾಳ, ತಸ್ಲಿಮಾ ಸುರಪುರ ಸೇರಿದಂತೆ ಇತರರಿದ್ದರು. ಪ್ರವೀಣ ಜಕಾತಿ ನಿರೂಪಿಸಿರು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here