ಶಹಾಬಾದ: ಕೇಂದ್ರದ ಬಿಜೆಪಿ ಸರಕಾರ ದ್ವೇಷ ರಾಜಕಾರಣ, ತನಿಖಾ ಸಂಸ್ಥೆಗಳ ದುರುಪಯೋಗ ಹಾಗೂ ತನಿಖೆ ನೆಪದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಮಂಗಳವಾರ ನಗರದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೂ ಮುನ್ನ ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ ನೇತೃತ್ವದಲ್ಲಿ ನಗರದ ನೆಹರು ವೃತ್ತದಿಂದ ತಹಸೀಲ್ದಾರ ಕಚೇರಿಯವರೆಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ನಂತರ ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ರಾಜಕೀಯ ಪ್ರೇರಿತ ಸೇಡು ಮತ್ತು ದ್ವೇಷದಿಂದ ತನಿಖಾ ಸಂಸ್ಥೆಗಳ ದುರ್ಬಳಿಕೆ ಮಾಡಿಕೊಂಡು ಗಾಂಧಿ ಕುಟುಂಬವನ್ನು ಕಿರುಕುಳ ನೀಡುತ್ತಿದ್ದಾರೆ. ರಾಜಕೀಯ ವರ್ಚಸ್ಸು ಕುಗ್ಗಿಸಲು, ಕಾಂಗ್ರೆಸ್ ನಾಯಕರ ತೇಜೋವಧೆಗೆ ತನಿಖಾ ಸಂಸ್ಥೆಗಳಾದ ಇ.ಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಗಾಂಧಿ ಕುಟುಂಬದ ವಿರುದ್ಧ ಬಿಜೆಪಿ ಕೀಳು ಮಟ್ಟದ ದ್ವೇಷ ರಾಜಕಾರಣ ಮಾಡುತ್ತಿರುವುದು ಖಂಡನೀಯ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು ಗಾಂಧಿ ಕುಟುಂಬ. ಇದನ್ನು ಅರಿಯದ ಬಿಜೆಪಿ ಸರಕಾರ ಅತ್ಯಂತ ಕೀಳು ಮಟ್ಟದ ಕೆಲಸ ಮಾಡುತ್ತಿದೆ.ಇದನ್ನು ಕೈಬಿಡದಿದ್ದರೇ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ ಮರ್ಚಂಟ್ ಮಾತನಾಡಿ,ರಾಜಕೀಯ ಯಾವಾಗಲೂ ಸೌಹಾರ್ದಯುತವಾಗಿರಬೇಕೆ ವಿನಃ ದ್ವೇಷದಿಂದ ಕೂಡಿರಬಾರದು. ಅಧಿಕಾರಿ ಯಾರಿಗೂ ಶಾಶ್ವತವಲ್ಲ.ಇವತ್ತು ಬಿಜೆಪಿ ಅಧಿಕಾರದಲ್ಲಿದೆ.ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬುದು ಮರೆಯಬಾರದು.ಗಾಂಧಿ ಕುಟುಂಬದ ಇಂದಿರಾಗಾಂಧಿ, ರಾಜೀವಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ.ಅಂತಹ ಕುಟುಂಬದ ಮೇಲೆ ಇಲ್ಲಸಲ್ಲದ ಆರೋಪಗಳುಮಾಡುವುದು, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಿರುಕುಳ ನೀಡುವುದು ಸರಿಯಲ್ಲ.ಅಭಿವೃದ್ಧಿಗಾಗಿ ರಾಜಕೀಯ ಮಾಡುವುದು ಬಿಟ್ಟು ಸೇಡಿನ ರಾಜಕಾರಣ ಮಾಡುವುದನ್ನು ತೀವ್ರವಾಗಿ ಖಂಡಿಸುತ್ತೆವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಗ್ರೇಡ್-೨ ತಹಸೀಲ್ದಾರ ಗುರು ಸಂಗಾವಿಕ ಅವರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಮುಖಂಡರಾದ ಮೃತ್ಯಂಜಯ್ ಹಿರೇಮಠ, ಕಿರಣ ಚವ್ಹಾಣ, ಕುಮಾರ ಚವ್ಹಾಣ,ಇನಾಯತಖಾನ ಜಮಾದಾರ, ಗಿರೀಶ ಕಂಬಾನೂರ,ಶರಣಗೌಡ ಪಾಟೀಲ,ವಿಶ್ವರಾಧ್ಯ ಬಿರಾಳ,ಡಾ.ಅಹ್ಮದ್ ಪಟೇಲ್,ದಿಲೀಪ್ ನಾಯಕ,ಮ.ರಫಿಕ್ ಕಾರೋಬಾರಿ,ಕೃಷ್ಣಪ್ಪ ಕರಣಿಕ್, ಮುನ್ನಾ ಪಟೇಲ್,ಮರಲಿಂಗ ಕಮರಡಗಿ,ಅವಿನಾಶ ಕಂಬಾನೂರ,ನಾಗೇಂದ್ರ ನಾಟೇಕಾರ, ಮೀರಾಜ ಸಾಹೇಬ, ಸಾಜಿದ್ ಗುತ್ತೆದಾರ, ಮೆಹಬೂಬ, ಶಿವಕುಮಾರ ನಾಟೇಕಾರ, ಮಲ್ಲಿಕಾರ್ಜುನ ವಾಲಿ,ಹಾಷಮ್ ಖಾನ,ಫಜಲ್ ಪಟೇಲ್,ಜಾವೀದ್,ರಾಜು ಮೇಸ್ತ್ರಿ, ವೆಂಕಟೇಶ ಕುಸಾಳೆ, ವೆಂಕಟೇಶ ಪವಾರ,ಇಮ್ರಾನ್ ಸೇರಿದಂತೆ ಅನೇಕರು ಇದ್ದರು.