ಕಲಬುರಗಿ: 2021-22ನೇ ಸಾಲಿನಲ್ಲಿ ನಡೆದ 10ನೇ ತರಗತಿಯಲ್ಲಿ ಶೇ. 75 ಹಾಗೂ ಪಿ.ಯು.ಸಿ ಯಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ಜಿಲ್ಲೆಯ ಅಲೆಮಾರಿ ಹೆಳವ ಸಮುದಾಯದ ವಿದ್ಯಾರ್ಥಿಗಳಿಗೆ ಅಖಿಲ ಕರ್ನಾಟಕ ಹೆಳವ ಸಮಾಜ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಜೂನ್ 27ರಂದು ಮಧ್ಯಾಹ್ನ 02:00 ಗಂಟೆಗೆ ನಗರದ ಕನ್ನಡ ಭವನದಲ್ಲಿ ಸಮುದಾಯದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ನಿರ್ದೇಶಕ ಬಸವರಾಜ ಹೆಳವರ ಯಾಳಗಿ ಹಾಗೂ ಜಿಲ್ಲಾಧ್ಯಕ್ಷ ಸಾಯಬಣ್ಣ ಹೆಳವರ ತಿಳಿಸಿದ್ದಾರೆ. ಸಮುದಾಯದ ವಿದ್ಯಾರ್ಥಿಗಳು ಜೂನ್ 25ರೊಳಗೆ ಅರ್ಜಿಯ ಜೊತೆಗೆ ಅಂಕಪಟ್ಟಿ, ಆಧಾರ ಕಾರ್ಡ ಹಾಗೂ ಪಾಸಪೋರ್ಟ ಅಳತೆಯ ಭಾವಚಿತ್ರ ಸಲ್ಲಿಸಬೇಕೆಂದು ತಿಳಿಸಿದ್ದಾರೆ.
ಅರ್ಜಿಗಳನ್ನು ಸಲ್ಲಿಸಲು ಮಲ್ಲಿಕಾರ್ಜುನ ಆರ್. ಹೆಳವರ (ಮೊ. 9901301254), ಸಾಯಬಣ್ಣ ಹೆಳವರ (ಮೊ. 9900836221), ಗುರುಲಿಂಗ ಹೆಳವರ (ಮೊ.7353835777), ಅಂಕಿತಾ ಹೆಳವರ, ತಿಪ್ಪಣ್ಣ ಹೆಳವರ (ಮೊ.9632176935) ಹಾಗೂ ಶಿವಾನಂದ ಹೆಳವರ (ಮೊ.7676471436) ಇವರನ್ನು ಸಂಪರ್ಕಿಸಬಹುದು.