ಯಾದಗಿರಿ; ಭಾರತೀಯ ಜನತಾ ಪಾರ್ಟಿಯಿಂದ ಯಾದಗಿರಿ ಶಾಸಕರಾಗಿ ಆಯ್ಕೆಯಾಗಿರವ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಸಚಿವ ಸ್ಥಾನ ನೀಡುವಂತೆ ವೆಂಕಟರೆಡ್ಡಿ ಮುದ್ನಾಳ ಅಭಿಮಾನಿಗಳ ಸಂಘದ ಮಖಂಡ ಅನಿಲ್ ಕರಾಟೆ ಮಾಸ್ಟರ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುದ್ನಾಳ ಅವರು ಹಿಂದುಳಿದ ಯಾದಗಿರಿ ಜಿಲ್ಲೆಯ ಕೇಂದ್ರ ಸ್ಥಾನದ ಶಾಸಕರಾಗಿದ್ದು, ಅವರು ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ.
ಅವರ ಕೌಟುಂಬಿಕ, ರಾಜಕೀಯ ಹಿನ್ನೆಲೆ ಪರಿಗಣಿಸಿ ಮತ್ತು ಈ ಭಾಗದಲ್ಲಿ ಬಿಜೆಪಿ ಇನ್ನಷ್ಟು ಬಲಿಷ್ಠವಾಗಿ ಬೆಳೆಯುವಂತಾಗಲು ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.