ಎಸ್‌ಎಸ್‌ಎಲ್‌ಸಿ ಡಿಸ್ಟಿಂಕ್ಷನ್ ವಿದ್ಯಾರ್ಥಿಗಳಿಗೆ ಶಾಸಕರಿಗೆ ಅಭಿನಂದನಾ ಸಮಾರಂಭ ೨೫ಕ್ಕೆ

0
8

ಚಿತ್ತಾಪುರ: ತಾಲೂಕಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಜೂನ್. ೨೫ ರಂದು ಬೆಳಗ್ಗೆ ೧೦.೩೦ಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಕಾಂಗ್ರೆಸ್ ಪಜಾ, ಪಪಂ ಘಟಕದ ತಾಲೂಕು ಅಧ್ಯಕ್ಷ ಸಾಯಬಣ್ಣ ಕಾಶಿ ತಿಳಿಸಿದ್ದಾರೆ.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ೨೦೨೧-೨೨ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಶೇ೮೫ ರಿಂದ ಶೇ೧೦೦ ರಷ್ಟು ಅಂಕಗಳಿಸಿದ ೪೬೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಈ ಬಾರಿ ತಾಲೂಕಿನಲ್ಲಿ ಹೆಚ್ಚು ಫಲಿತಾಂಶ ಬಂದಿರುವುದರಿಂದ ಶಾಸಕರು ಸಂತಸಗೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಪಟ್ಟಣದ ಹೊರವಲಯದ ನಾಗಾವಿ ಪ್ರದೇಶದ ಎಜ್ಯುಕೇಶ ಹಬ್‌ನಲ್ಲಿನ ಮೋರಾರ್ಜಿ ವಸತಿ ಶಾಲೆಯ ರಂಗಮಂದಿರಲ್ಲಿ ನಡೆಯುವ ಸಮಾರಂಭದಲ್ಲಿ ಶಾಸಕ ಖರ್ಗೆಯವರು ವಿದ್ಯಾರ್ಥಿಗಳಿಗೆ ಅಭಿನಂದನಾ ಪ್ರಮಾಣ ಪತ್ರ ನೀಡಿ ಗೌರವಿಸಿ ಸನ್ಮಾನಿಸಲಿದ್ದಾರೆ. ಅಂದು ನಡೆಯುವ ಸಮಾರಂಭಕ್ಕೆ ಬೆಂಗಳೂರಿನಿಂದ ಶಿಕ್ಷಣ ಕ್ಷೇತ್ರದ ಪ್ರಸಿದ್ದ ವಾಗ್ಮಿ ಪಂಡಿತರನ್ನು ಕರೆಸಿ ವಿದ್ಯಾರ್ಥಿಗಳ ಮೇಲೆ ಶಿಕ್ಷಣದ ಪ್ರಭಾವ ಬೀರುವಂತೆ ಉಪನ್ಯಾಸ ನೀಡಲು ನಿರ್ಣಸಿದ್ದಾರೆ.

ವಿದ್ಯಾರ್ಥಿಗಳು ಮುಂದೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುವ ರೀತಿಯಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭ ರಾಜಕೀಯ ರಹಿತ ಸಮಾರಂಭ ಮಾಡಲಾಗುತ್ತಿದೆ. ಡಿಸ್ಟಿಂಕ್ಷನ್ ವಿದ್ಯಾರ್ಥಿಗಳು ಹಾಗೂ ಆಸಕ್ತರು ಶಾಸಕರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಬೇಕು. ಈ ಸಮಾರಂಭ ಯಶಸ್ವಿಗೆ ಯುವಕರು ಶ್ರಮಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬಾಬು ಕಾಶಿ ಮಾತನಾಡಿದರು. ಪ್ರಮುಖರಾದ ಸಂಜಯ ಬುಳಕರ್, ಎಂಎ ನಯಿಮ್, ವಿನ್ನುಕುಮಾರ ಜೆಡಿ, ಲಖನ್‌ಸಿಂಗ್, ಭೀಮರಾಯ ಹೋಳಿಕಟ್ಟಿ, ದೇವಪ್ಪ ತಳವಾರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here