ಯೋಗ ದಿಂದ ಏಕಾಗ್ರತೆ ಮತ್ತು ಆರೋಗ್ಯ ವೃದ್ದಿಯಾಗುತ್ತದೆ: ಶ್ವೇತಾ ಡಿ.ದೊಡ್ಡಮನಿ

0
19

ಕಲಬುರಗಿ: ನಂದಿಕೂರ ಗ್ರಾಮ ಪಂಚಾಯತ್ ವತಿಯಿಂದ ಕೋಟನೂರ (ಡಿ) ಡಾ.ಬಿ ಆರ್ ಅಂಬೇಡ್ಕರ ಉದ್ಯಾನವನದಲ್ಲಿ ಹಮ್ಮಿಕೊಂಡ ೮ ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಂದಿಕೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶ್ವೇತಾ ದಿನೇಶ ದೊಡ್ಡಮನಿ ಅವರು ಮಾತನಾಡಿ ಯೋಗಾಸನ ಮಾಡುವ ಮೂಲಕ ಯೋಗವು ನಮ್ಮ ದೇಹದ ಮೇಲೆ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ. ಇವತ್ತಿನ ಪರಿಸ್ಥಿಯಲ್ಲಿ ಮನುಷ್ಯನು ಬಹಳ ಒತ್ತಡಕ್ಕೆ ಸಿಲುಕಿ ಒದ್ದಾಡುತ್ತಿದ್ದಾನೆ, ಪ್ರತಿನಿತ್ಯವೂ ಯೋಗ ಮಾಡಿದರೇ ಒತ್ತಡ ಮತ್ತು ಆತಂಕವನ್ನು ಬಿಡುಗಡೆ ಮಾಡಲು ಇದು ಉತ್ತಮ ಆಗಿದೆ. ಇದರಿಂದಾಗಿ ಯೋಗವೂ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಮತ್ತು ಈಗ ವಿಶ್ವದ ಎಲ್ಲಾ ಪ್ರದೇಶಗಳಲ್ಲಿ ಹರಡಿದೆ ಎಂದು ದೊಡ್ಡಮನಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ನಿವೃತ ಸೈನಿಕ ವೈಜನಾಥ, ಗ್ರಾ ಪಂ ಸದಸ್ಯ ಭೀಮಾಶಂಕರ ನಾಗನಳ್ಳಿ, ಮುಖಂಡರುಗಳಾದ ಶರಣಪ್ಪ ದೊಡ್ಡಮನಿ, ದಿನೇಶ ದೊಡ್ಡಮನಿ, ರಾಚಯ್ಯಸ್ವಾಮಿ ನಂದಿಕೂರ, ಹಜರತಸಾಬ್ ಉದನೂರ,ಪಿಡಿಓ ರಾಮಚಂದ್ರ ಮಸರಕಲ್, ಕಾರ್ಯದರ್ಶಿ ಮಹಾನಂದಾ ಸಿಂಗೆ, ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಸೂರ್ಯಕಾಂತ ಹೊನ್ನಕಿರಣಗಿ, ಶಿಕ್ಷಕಿಯರಾದ ಸುಜಾತಾ ಸಿದ್ರಾಮ, ಭಾಗ್ಯಶ್ರಿ ಆನಂದ, ಕಲಾವತಿ ಸೋಲಮ್ ಶೈಲಜಾ ಕೊರಳ್ಳಿ, ಸುಮಾ ರೆಡ್ಡಿ, ಲಲಿತಾ ನಂದಿಕೂರ, ಶಾಂತಯ್ಯಾ ಸ್ವಾಮಿ, ವಿಜಯಕುಮಾರ, ಜೈ ಭೀಮ ಹೊಸಮನಿ, ಗೌತಮ ನಂದಿಕೂರ, ನಾಗರಾಜ ಮಾಲಿಪಾಟೀಲ, ಅಣ್ಣಾರಾಯ ನಾಗನಳ್ಳಿ, ರೆಹಮನ್ ಪಟೇಲ್, ಜೀವನಬಾಬು, ನಾಗರಾಜ ಕಡಗಂಚಿ, ವಿಕಾಸ ಹರಕಂಚಿ, ಕಸ್ತುರಿಬಾಯಿ, ಸಾವಿತ್ರಿಬಾಯಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here