ಶಾಲಾ ದಾಖಲಾತಿ, ಹಾಜರಾತಿ ಆಂದೋಲನ

0
26

ಕಲಬುರಗಿ: ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಫೈನಾನ್ಶಿಯಲ್ ಇನ್‍ಕ್ಲೂಜನ್ ಲಿಮಿಟೆಡ್, ಲರ್ನಿಂಗ್ ಲಿಂಕ್ಸ್ ಫೌಂಡೇಷನ್ ಮತ್ತು ಕುವೆಂಪು ಶತಮಾನೋತ್ಸವ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂದೂರ (ಕೆ) ಇವರುಗಳ ಸಂಯುಕ್ತ ಆಶ್ರಯದಲ್ಲಿ ಶಾಲಾ ದಾಖಲಾತಿ ಮತ್ತು ಹಾಜರಾತಿ ಆಂದೋಲನ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅಪರ ಆಯುಕ್ತಾಲಯದ ನಿರ್ದೇಶಕರಾದ ಬಸವರಾಜ್ ಗೌನಳ್ಳಿ ಸರ್ ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಶೈಕ್ಷಣಿಕ ಆಸ್ತಿಯನ್ನಾಗಿ ಮಾಡಿ ಎಂದು ಕರೆ ನೀಡಿದರು. ನಮ್ಮ ಮನೆಯ ಮಕ್ಕಳಂತೆ ನಾವೆಲ್ಲರೂ ನಮ್ಮ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಕಲಿಸಬೇಕು. ಸರಕಾರ ನಿಯಮಗಳ ಪ್ರಕಾರ ಈ ವರ್ಷ ಕಲಿಕಾಚೇತರಿಕೆ ಸರಿಯಾಗಿ ಅನುಷ್ಠಾನಗೊಳಿಸಬೇಕು. ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಬೇಕು, ಈಡಿ ವರ್ಷ ಶಾಲೆಯಲ್ಲಿ ಉಳಿದು ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು.

Contact Your\'s Advertisement; 9902492681

ಇನ್ನೋರ್ವ ಮುಖ್ಯ ಅಥಿತಿ ಶಿಕ್ಷಣಾಧೀಕಾರಿಗಳಾದ ಮಾರುತಿ ಹುಜರಾತಿ ಮಾತನಾಡಿ ಇದೊಂದು ಐತಿಹಾಸಿಕ ವಿನೂತನ ವಿಶಿಷ್ಠ ಕಾರ್ಯಕ್ರಮವಾಗಿದೆ. ಮಕ್ಕಳನ್ನು ಪೂಜೆ ಮಾಡಿ ತಿಲಕವಿಟ್ಟು ಶಾಲೆಗೆ ಕರೆತರುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ಈಡಿ ಗ್ರಾಮದ ಜನರು ಜೊತೆಗೂಡಿ ಶಾಲೆಗಳಲ್ಲಿ ದಾಖಲಾತಿ ಮತ್ತು ಹಾಜರಾತಿಗಾಗಿ ಈ ರೀತಿಯ ವಿನೂತನ ಕಾರ್ಯಕ್ರಮ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿ ಬಿ.ಎಫ್.ಐ.ಎಲ್. ನ ಶಿವರಾಜ್ ಶೆಟ್ಟಿ ನಾವು 12 ಹಳ್ಳಿಗಳಲ್ಲಿ ಶಿಕ್ಷಣ ಆರೋಗ್ಯ ನೀರು ಇತ್ಯಾದಿಗಳ ಬಲವರ್ಧನೆಗಾಗಿ ಒಟ್ಟು ಗ್ರಾಮದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ಎಲ್ಲಾ ಮಕ್ಕಳು ಶಾಲೇಗೆ ದಾಖಲಾಗಬೇಕು ಮತ್ತು ಹಾಜರಾತಿಯು ಹೆಚ್ಚಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ವ್ಯವಸ್ಥಾಪಕರಾದ ಕೆ.ಎಂ.ವಿಶ್ವನಾಥ ಮರತೂರ ಮಾತನಾಡಿ, ಶಿಕ್ಷಣ ಇವತ್ತಿನ ಬಹುಮುಖ್ಯವಾದ ಅಸ್ತ್ರ ಗ್ರಾಮದ ಪ್ರತಿಯೊಂದು ಮಗುವಿನ ಅಧಿಕಾರ, ಶಾಲೆಯಿಂದ ವಂಚಿತ ಮಕ್ಕಳು ಗ್ರಾಮದಲ್ಲಿ ಇರಬಾರದು. ಪ್ರತೀ ಶಾಲೆಯಲ್ಲಿ ದಾಖಲಾತಿಯಷ್ಟೆ ಹಾಜರಾತಿ ಸಮವಾದರೆ ಆಗ ಸರಕಾರಿ ಶಾಲೆಗಳು ಬಲವರ್ಧನೆಗೊಳ್ಳುತ್ತವೆ ಎಂದರು. ನಂದೂರ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಗ್ರಾಮದ ಜನರ ಸಹಕಾರ ಅತ್ಯಂತ ಅವಶ್ಯಕವಾಗಿದೆ ಎಂದರು.

ಭಾರತ ಫೈನಾನ್ಶಿಯಲ್ ಇನ್‍ಕ್ಲೂಜನ್ ಲಿಮಿಟೆಡ್, ಲನಿರ್ಂಂಗ್ ಲಿಂಕ್ಸ್ ಫೌಂಡೇಷನ್ ವತಿಯಿಂದ ಜಿಲ್ಲೆಯ 26 ಪ್ರಾಥಮಿಕ ಶಾಲೆಗಳಲ್ಲಿ ಹಾಜರಾತಿ ಮತ್ತು ದಾಖಲಾತಿ ಆಂದೋಲನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದ ಮೂಲಕ 460 ಮಕ್ಕಳಿಗೆ ದಾಖಲಾತಿಯನ್ನು ಕಲ್ಪಿಸುವಲ್ಲಿ ಶಾಲೆಯ ಸಹಕಾರದೊಂದಿಗೆ ಸಾಧ್ಯವಾಗಿದೆ. ಎಂದರು.

ಗ್ರಾಮದ ಮುಖಂಡರಾದ ನಾಗರಾಜ್ ಕಲ್ಲಾ ಮಾತನಾಡಿ ಲರ್ನಿಂಗ್ ಲಿಂಕ್ಸ್ ಫೌಂಡೇಷನ್ ನ ಕೆಲಸ ಅತ್ಯಂತ ಪ್ರಶಂಸನೀಯವಾಗಿದೆ. ಮಕ್ಕಳಿಗೆ ದಾಖಲಾತಿ ಮತ್ತು ಹಾರಾತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದು ಗ್ರಾಮದವರಾದ ನಮಗೆಲ್ಲ ಅತ್ಯಂತ ಹೆಮ್ಮೆಯಿದೆ. ಗ್ರಾಮದವರೆಲ್ಲರೂ ಅವರೊಂದಿಗೆ ಕೈಜೋಡಿಸಿ ಮುಂದಿನ ದಿನಗಳಲ್ಲಿ ನಮ್ಮೂರಿನ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಬೇಕು ಎಂದರು.

ಕ್ಷೇತ್ರ ಸಮನ್ವಯ ಅಧಿಕಾರಿ ಪ್ರಕಾಶ ರಾಠೋಢ ಮಾತನಾಡಿ ಈ ಕಾರ್ಯಕ್ರಮದ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳು ಶಾಲೆಗೆ ಮರಳಿ ಬರುವಂತಾಗಲಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ಅತ್ಯಂತ ಸಹಾಯಕಾರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ಸದಸ್ಯರು, ಶಾಲಾಭಿವೃದ್ಧಿ ಮತ್ತು ಮೇಲೂಸ್ತುವಾರಿ ಸಮಿತಿ ಅಧ್ಯಕ್ಷರು ಸದಸ್ಯರು, ಗ್ರಾಮದ ಮುಖಂಡರು, ಶಿಕ್ಷಣ ಪ್ರೇಮಿಗಳು, ಹಳೆ ವಿದ್ಯಾರ್ಥಿಗಳ ಸಂಘ, ಮಹಿಳಾ ಸಂಘಗಳು, ಯುವಕರ ಸಂಘ, ಗ್ರಾಮದ ಸಂಘಟನೆಗಳು ಮತ್ತು ಸಮಸ್ತ ನಂದೂರ (ಕೆ) ಗ್ರಾಮದ ಪಾಲಕ ಪೋಷಕರು ಸಹಕಾರ ನೀಡಿ ಭಾಗವಹಿಸಿದ್ದರು.

ಶಿಕ್ಷಣ ಇಲಾಖೆಯ ಶಿವಮೂರ್ತಪ್ಪ, ಅರುಣಕುಮಾರ, ಶ್ರೀಮತಿ ಈರಮ್ಮ ಶಾಲೆಯ ಕ್ರೀಯಾಶೀಲ ಶಿಕ್ಷಕರ ಬಳಗ ಎಲ್ ಎಲ್ ಎಫ್ ನ ಸಂಪನ್ಮೂಲ ಶಿಕ್ಷಕರು ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀತಾಬಾಯಿ ಗೋಪಾಲ, ಗಣೇಶ ರಾಠೋಡ್, ಶಾಂತಮ್ಮ ಕಾಂತಪ್ಪ ನಾಟೀಕಾರ, ಹವಳಪ್ಪ ಜಾನೆ, ಶ್ರೀಮತಿ ಇಂದಿರಾ ವಹಿಸಿದ್ದರು. ಕಾರ್ಯಕ್ರಮವನ್ನು ಕು.ಉಷಾದೇವಿ, ಕು.ಅಂಬಿಕಾ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here