ಮಹಿಳೆಯ ಆರೋಗ್ಯದ ಉಜ್ವಲಕ್ಕೆ ಮೋದಿ ಕೊಡುಗೆ ದೊಡ್ಡದು: ಸುಜಾತಾ ವಿ.ನಾಯಕ

0
39
ನಗರದ ವಾರ್ಡ ಸಂಖ್ಯೆ ೬ರಲ್ಲಿ ನಗರಸಭೆ ಸದಸ್ಯೆ ಸುಜಾತಾ ವೇಣುಗೋಪಾಲ ನಾಯಕ ಉಜ್ವಲ ಯೋಜನೆಯಡಿ ಮಹಿಳೆಯರಿಗೆ ಗ್ಯಾಸ್ ವಿತರಿಸಿದರು.

ಸುರಪುರ: ದೇಶದ ಎಲ್ಲಾ ಕುಟುಂಬಗಳ ಮಹಿಳೆಯರು ಕಣ್ಣಿಗೆ ಹೊಗೆ ತಾಗಿಸಿಕೊಳ್ಳದೆ ಅಡುಗೆ ಮಾಡಬೇಕೆಂಬ ಮಹದಾಸೆಯಿಂದ ಮಹಿಳೆಯ ಆರೋಗ್ಯದ ಉಜ್ವಲಕ್ಕೆ ಮೋದಿಜಿಯವರ ಕೊಡುಗೆ ದೊಡ್ಡದು ಎಂದು ನಗರಸಭೆ ಸದಸ್ಯೆ ಸುಜಾತಾ ವೇಣುಗೋಪಾಲ ನಾಯಕ ಜೇವರ್ಗಿ ಮಾತನಾಡಿದರು.

ವಾರ್ಡ ಸಂಖ್ಯೆ ೬ರಲ್ಲಿಯ ಹಲವು ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಮತ್ತು ಸ್ಟೌಗಳನ್ನು ವಿತರಿಸಿ ಮಾತನಾಡಿ,ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಅನೇಕ ಜನಪ್ರಿಯ ಯೋಜನೆಗಳಲ್ಲಿ ಉಜ್ವಲ ಯೋಜನೆಯು ಒಂದಾಗಿದ್ದು,ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಉತ್ತಮ ಪರಿಸರ ಕಾಪಾಡೋಣ ಎಂದರು.ಇದೇ ಸಂದರ್ಭದಲ್ಲಿ ಸುಮಾರು ಹದಿನಾಲ್ಕು ಕುಟುಂಬಗಳಿಗೆ ಗ್ಯಾಸ್ ಮತ್ತು ಒಲೆಗಳನ್ನು ವಿತರಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ವೇಣುಗೋಪಾಲ ನಾಯಕ ಜೇವರ್ಗಿ,ಬಸ್ಸಣ್ಣ ಮಡಿವಾಳ,ಕುಮಾರ ಹೂಗಾರ,ಮಲ್ಲಿಕಾರ್ಜುನ ಹೂಗಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here