ಸುರಪುರ: ಹೊರಗುತ್ತಿಗೆ ವಾಹನ ಚಾಲಕರ ೨ನೇ ದಿನ ಮುಂದುವರೆದ ಪ್ರತಿಭಟನೆ

0
12

ಸುರಪುರ: ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ,ನಗರಸಭೆ,ಪುರಸಭೆ,ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ವಾಹನ ಚಾಲಕರ ಸಂಘ ರಾಜ್ಯಾದ್ಯಂತ ಕರೆ ನೀಡಿರುವ ಪ್ರತಿಭಟನೆ ಬೆಂಬಲಿಸಿ ಸುರಪುರ ನಗರದ ನಗರಸಭೆ ಕಚೇರಿ ಮುಂದೆ ಸಂಘದ ಮುಖಂಡರು ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ನಾವುಗಳು ಸುಮಾರು ವರ್ಷಗಳಿಂದ ನಗರಸಭೆಯಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಾ ಬಂದಿದ್ದು,ನಮಗೆ ಕಳೆದ ಎರಡು ವರ್ಷಗಳಿಂದ ಗುತ್ತಿಗೆ ಆಧಾರಾದಲ್ಲಿ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ, ಆದರೆ ರಾಜ್ಯದಲ್ಲಿನ ನಮ್ಮೆಲ್ಲ ವಾಹನ ಚಾಲಕರ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು.ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿಯವರು ಬಂದು ಬರೀ ಭರವಸೆ ನೀಡಿ ಹೋಗಿದ್ದಾರೆ,ಆದರೆ ಅಧಿಕೃತವಾಗಿ ಯಾವುದೇ ಆದೇಶ ನೀಡಿಲ್ಲ,ಆದ್ದರಿಂದ ಮೌಖಿಕ ಆದೇಶ ಬೇಡ ನಮಗೆ ಲಿಖಿತ ಭರವಸೆಯನ್ನು ನೀಡುವವರೆಗೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

Contact Your\'s Advertisement; 9902492681

ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ನಗರಸಭೆ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ನಾಯಕ ಜೇವರ್ಗಿ,ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್,ಎಇಇ ಶಾಂತಪ್ಪ ಹಾಗೂ ಸಂಘದ ಮುಖಂಡರಾದ ಮೌನೇಶ,ಅಯ್ಯಣ್ಣ,ಬಸವರಾಜ,ಪರಶುರಾಮ,ಅನಿಲಕುಮಾರ,ಶರಣಬಸವ,ವೆಂಕಟೇಶ,ಗೋಪಾಲ,ಸತೀಶ ಕುಮಾರ,ಪರಶುರಾಮ,ಮಹ್ಮದ್ ಅನ್ವರ್,ರಾಘವೇಂದ್ರ,ಮಲ್ಲಿಕಾರ್ಜುನ,ವಿನೋದ,ನಾಗರಾಜ,ಬಸವರಾಜ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here