ಕಲಬುರಗಿ:ಸಮಾಜದ ಎಲ್ಲಾ ವರ್ಗದ ಅಭಿವೃದ್ಧಿಗೆ ಸಹಕಾರಿ ಸಂಸ್ಥೆಗಳು ಶ್ರಮಿಸುತ್ತಿರುವುದು ಶ್ಲಾಘನೀಯ.ರಾಜ್ಯದಲ್ಲಿ ಸೌಹಾರ್ದ ಸಹಕಾರಿ ಸಂಸ್ಥೆಗಳು ಇನ್ನು ಹೆಚ್ಚು ಬೆಳೆಯಲಿ ಎಂದು ಚಿಂಚನಸೂರ ಬಾಣೇಶ್ವರ ಹಿರೇಮಠದ ಶ್ರೀ ಗಂಗಾಧರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ನರೋಣಾ ಗ್ರಾಮದಲ್ಲಿ ಭಾನುವಾರ ಶ್ರೀ ಗುರು ಚನ್ನಮಲ್ಲೇಶ್ವರ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು ಸಹಕಾರಿ ಮನೋಭಾವ ಎಲ್ಲರಲ್ಲೂ ಬೆಳೆಯಲಿ.ಗ್ರಾಮೀಣ ಭಾಗದಲ್ಲಿ ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸೌಹಾರ್ದ ಸಹಕಾರಿ ಸಂಸ್ಥೆಗಳು ನೆರವಾಗುತ್ತಿವೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ನರೋಣಾದ ಡಾ.ಗುರುಮಹಾಂತೇಶ್ವರ ಸ್ವಾಮಿಗಳು ಮಾತನಾಡಿ ಸೌಹಾರ್ದ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಜನರ ಸಹಕಾರ ಅಗತ್ಯ ಎಂದರು.
ಅತಿಥಿಯಾಗಿ ಆಗಮಿಸಿದ್ದ ಹಿರಿಯ ಹೋರಾಟಗಾರ ಲಿಂಗರಾಜ ಸಿರಗಾಪೂರ ಮಾತನಾಡುತ್ತಾ ಸಹಕಾರಿ ಸಂಘಗಳು ಹೆಚ್ಚು ಬೆಳೆಯಲು ರಾಜಕೀಯ ಇಚ್ಛಾಶಕ್ತಿ ಬೇಕು.ಇಂದು ರಾಜ್ಯದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಸೌಹಾರ್ದ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.ಸರಕಾರ ಇವುಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹೊಸಮಠದ ಪೂಜ್ಯ ಶ್ರೀ ಚನ್ವಮಲ್ಲ ಸ್ವಾಮಿಗಳು ಮಾತನಾಡಿ ಶ್ರೀ ಗುರು ಚನ್ನಮಲ್ಲೇಶ್ವರ ಸೌಹಾರ್ದ ಸಹಕಾರಿ ಬ್ಯಾಂಕ್ ನಡೆದು ಬಂದ ದಾರಿ ವಿವರಿಸಿ ಸಂಸ್ಥೆ ಬೆಳೆಯಲು ಆಡಳಿತ ಮಂಡಳಿಯ ಸಹಕಾರವು ಬಹಳ ಮುಖ್ಯವಾಗಿದೆ ಎಂದರು.
ಡಾ.ಚನ್ನರುದ್ರಮುನಿ ಶಿವಾಚಾರ್ಯರು,ನರೋಣಾ ಗ್ರಾಮದ ಹಿರಿಯರಾದ ಬಾಬುರಾವ ವಾಲಿ,ಎಸ್.ಪಿ.ಯಳಗಿ,ಲಕ್ಷೀಪುತ್ರ ಸಂಗೋಳಗಿ, ಸಂಗಮೇಶ ವಾಲಿ ಮಾತನಾಡಿದರು.
ನರೋಣಾ ಪಿಎಸ್ಐ ಶ್ರೀಮತಿ ವಾತ್ಸಲ್ಯ, ರಾಜ್ಯ ಭ್ರಷ್ಟಾಚಾರ ನಿರ್ಮೂಲನಾ ದಳ ರಾಜ್ಯಾಧ್ಯಕ್ಷ ಡಾ.ಎ.ಎಸ್.ಭದ್ರಶೆಟ್ಟಿ, ವಿಕ್ರಾಂತ ದೇಸುಣಗಿ, ಗುರುದೇವ ಟಿ.ಕಳಸ್ಕರ, ಮಂಜುನಾಥ ಸಿರಗಾಪೂರ, ಸುಭಾಷ್ ವಾಲಿ,ಪದ್ಮಣ್ಣ ವೇದಿಕೆಯಲ್ಲಿದ್ದರು.