ಎಲ್ಲರ ಸಂಕಷ್ಟಗಳನ್ನು ದೂರ ಮಾಡುವ ಮಹಾಮಾತೆ ಜಗದಂಬಾ: ಸಿದ್ಧಲಿಂಗ ಶ್ರೀ

0
76

ಶಹಾಬಾದ: ಎಲ್ಲರ ಇಷ್ಟಾರ್ಥಗಳನ್ನು ಪೂರೈಸುವ ಮತ್ತು ಎಲ್ಲರ ಸಂಕಷ್ಟಗಳನ್ನು ದೂರ ಮಾಡುವ ಮಹಾಮಾತೆ ಜಗದಂಬಾ ಮಾತೆ ಎಂದು ಮುಗುಳನಾಗಾವಿಯ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.

ಅವರು ಗುರುವಾರ ಶ್ರೀ ಜಗದಂಬಾ ದೇವಸ್ಥಾನದಲ್ಲಿ ಆಯೋಜಿಸಲಾದ ಜಗದಂಬಾ ದೇವಿಯ ಗೋಪುರ ಮತ್ತು ಕಳಸಾರೋಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಜಗದಂಬಾ ದೇವಿಯನ್ನು ಆರಾಧಿಸುವ ಭಕ್ತರು ನಾಡಿನಲ್ಲೆಡೆ ಬಹು ಸಂಖ್ಯೆಯಲ್ಲಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಆ ಮಹಾಮಾತೆಯಲ್ಲಿ ಇರುವ ಶಕ್ತಿಯೇ ಕಾರಣ.ಎಲ್ಲ ದುಷ್ಟರನ್ನು ಸಂಹಾರ ಮಾಡುವ ಜಗನ್ಮಾತೆ ಅವಳು.ಮಾತೆಯ ದರ್ಶನ ಪಡೆಯಲು ನಾವು ತುಳಜಾಪೂರಕ್ಕೆ ಹೋಗುತ್ತೆವೆ.ಆದರೆ ಇಲ್ಲಿನ ಭಕ್ತಾಧಿಗಳು ಇಲ್ಲಿಯೇ ಮಾತೆಯ ಮಂದಿರವನ್ನು ನಿರ್ಮಾಣ ಮಾಡಿದ್ದಾರೆ.ಈಗ ತುಳಜಾಪೂರದ ಪ್ರತಿರೂಪವಾಗಿ ಇಲ್ಲಯೇ ದರ್ಶನ ಭಾಗ್ಯ ಕಲ್ಪಿಸಿದ್ದು ನಮ್ಮೆಲ್ಲರ ಭಾಗ್ಯ. ೧೮ ಶಕ್ತಿ ಪೀಠಗಳಲ್ಲಿ ಶಹಾಬಾದನ ಜಗದಂಬಾ ದೇವಿಯ ಮತ್ತೊಂದು ಶಕ್ತಿ ಪೀಠವಾಗಲಿ. ಗುಡಿ ಗುಂಡಾರ, ಮಠ-ಮಾನ್ಯಗಳಿಂದ ಸಾಮಾಜಿಕ ಕಾರ್ಯ ಹಾಗೂ ದಾಸೋಹ ನಡೆಯಬೇಕು. ಬಡ ಜನರಿಗೆ ಹೆಚ್ಚಿನ ಅನುಕೂಲವಾಗಬೇಕು. ಇಂತಹ ಕಾರ್ಯವನ್ನು ಈ ದೇವಸ್ಥಾನ ಕಮಿಟಿಯವರು ನಿರಂತರ ಮಾಡಿಕೊಂಡು ಬರುತ್ತಿರುವುದು ಮಾತ್ರ ಶ್ಲಾಘನೀಯ ಎಂದರು.

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಕಾರ್ಯಗಳಿಂದ ಭಕ್ತಿ ಮತ್ತು ನೆಮ್ಮದಿ ಪ್ರಾಪ್ತಿಯಾಗುತ್ತದೆ. ದೇವಸ್ಥಾನಕ್ಕೆ ಬೇಕಾದ ಯಾವುದೇ ರಿತೀಯ ಸಹಾಯ ಬೇಕಾದರೆ ಅದನ್ನು ಮಾಡಿಕೊಡುತ್ತೆನೆ ಎಂದರು.

ಹೊನ್ನಕಿರಣಗಿಯ ರಾಚೋಟೇಶ್ವರ ಸಂಸ್ಥಾನ ಮಠದ ಚಂದ್ರಗುಂಡ ಶಿವಾಚಾರ್ಯರು ಮಾತನಾಡಿ, ದೇವಿಯ ಆರಾಧನೆಯಿಂದ ದು?ಶಕ್ತಿಗಳು ದೂರವಾಗಿ, ಜೀವನದಲ್ಲಿ ಶಾಂತಿ ಸಮೃದ್ಧಿ ನೆಲೆಸಲು ಸಾಧ್ಯ ಎಂದು ಹೇಳಿದರು.

ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಸಿದ್ದಲಿಂಗ ದೇವರು, ಶ್ರೀನಿವಾಸ ಸರಡಗಿಯ ಡಾ. ಅಪ್ಪರಾವ ದೇವಿ ಮುತ್ಯಾ, ವಿ. ಎಚ್.ಪಿ. ಉತ್ತರ ಪ್ರಾಂತ್ಯದ ಉಪಾಧ್ಯಕ್ಷ ಲಿಂಗರಾಜ ಅಪ್ಪ, ಬೀದರ್ ಜಿಲ್ಲೆಯ ಬಿಜೆಪಿ ಮುಖಂಡರಾದ ಈಶ್ವರಸಿಂಗ ಠಾಕೂರ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಜಗದಂಬಾ ದೇವಸ್ಥಾನ ಕಮಿಟಿ ಅಧ್ಯಕ್ಷ ದತ್ತಾತ್ರೇಯ ಜಿಂಗಾಡೆ ವೇದಿಕೆ ಮೇಲೆ ಇದ್ದರು.

ರಾಜು ಕೋಬಾಳ ಸ್ವಾಗತ ಗೀತೆ ಹಾಡಿದರು, ಸಿದ್ದಲಿಂಗ ಶಿರವಾಳ ನಿರೂಪಿಸಿದರು, ರಾಜಕುಮಾರ ಭಾಸೂತ್ಕರ್ ಸ್ವಾಗತಿಸಿ, ವಂದಿಸಿದರು. ಪ್ರಮುಖರಾದ ಅಶೋಕ ಜಿಂಗಾಡೆ, ವಿಜಯಕುಮಾರ ಮುಟ್ಟತ್ತಿ, ಸುನೀಲ ಭಗತ್, ಅನೀಲ ಹಿಬಾರೆ, ಸದಾನಂದ ಕುಂಬಾರ, ಸಚಿನ ಹಂಚಾಠೆ, ನಿಂಗಣ್ಣ ಹುಳಗೋಳಕರ್, ಕಾಶಿನಾಥ ಭಾಸ್ಮೆ, ಬಸವರಾಜ ಸಾತ್ಯಾಳ, ದಿನೇಶ ಗೌಳಿ,ಅಮರ ಮುತ್ತಟ್ಟಿ, ಮೋಹನ ಘಂಟ್ಲಿ, ರಾಜೇಶ್ ಯನಗುಂಟಿ, ಕನಕಪ್ಪಾ ದಂಡಗುಳ, ಚಂದ್ರಕಾಂತ ಗೊಬ್ಬುರ, ಅಂಬರೀಶ್ ಪುಲ್ಸೆ, ಶರಣು ಪಗಲಾಪೂರ,ಸುಭಾ? ಜಾಪುರ, ವೆಂಕಟೇಶ ತಿರುಮಲ, ಶಿವಾಜಿ ಹಡಪದ, ದಿಗಂಬರ ಪತಂಗೆ, ಜಗದೇವ ಸುಬೇದಾರ್, ಪವನ ಜಾಧವ್, ಅವಿನಾಶ್ ಸಾಳುಂಕೆ, ದೇವಿ ಆರಾಧಕರಾದ ಸಂತೋ? ಪುಲ್ಸೆ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here