ಕಲಬುರಗಿ: ತನ್ನ ಮಗನ ಮದುವೆ ಸಮಾರಂಭದಲ್ಲಿ ಮದುವೆಗೆ ಬಂದ ಆಮಂತ್ರಿತರಿಗೆ ಗಂಧದ ಗಿಡ ಕೊಡುವ ಮೂಲಕ ಒಂದೆರಡು ವರ್ಷ ಬೇಸಿಗೆಯಲ್ಲಿ ನೀರು ಹಾಕಿ ಪೋಷಿಸಿದರೆ ನಿರಂತರವಾಗಿ ಸುಗಂಧದ ಪರಿಮಳ ನೀಡುತ್ತದೆ. ಎಂಬ ಕಳಕಳಿಯ ಮಾತುಗಳ ಪರಿ ನೋಡಿದರೆ ಎಂತಹ ಪರಿಸರ ಕಾಳಜಿವುಳ್ಳ ವಿರೇಶ್ವರಸ್ವಾಮಿ ಶ್ರೀಗಂಧದಮಠ ನಿಜವಾಗಿ ಅವರಲ್ಲಿರುವ ಪರಿಸರ ಕಾಳಜಿ ಮೆಚ್ಚುವಂತಹದ್ದು ಎಂದು ಮದುವೆ ಸಮಾರಂಭಕ್ಕೆ ಆಗಮಿಸಿದ ಶಿವರಾಜ ಅಂಡಗಿಯವರು ಗಂಧದ ಗಿಡ ಸ್ವೀಕರಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಸಿಲು ನಾಡು ಎಂಬ ನಮಗಿರುವ ಅಪಖ್ಯಾತಿ ಹಣೆಪಟ್ಟಿ ಅಳಿಸಲು ನನ್ನದೊಂದು ಚಿಕ್ಕ ಪ್ರಾಮಾಣಿಕ ಪ್ರಯತ್ನ ಹಸಿರೀಕರಣ ಅವಶ್ಯ ಎಂದು ನಾನು ನನ್ನ ಮನೆತನದ ಮದುವೆ ನೆನಪಿನಲ್ಲಿ ನಿಮ್ಮ ಮನೆಯಲ್ಲಿ ಉದಯವಾಗಲಿ ಒಂದು ಮರ ಅದುವೆ ಶ್ರೀಗಂಧದ ಮರ ಎನ್ನುತ್ತಾರೆ ವಿರೇಶ್ವರಸ್ವಾಮಿ ಶ್ರೀಗಂಧದಮಠ. ಸಂದರ್ಭದಲ್ಲಿ ಚಿ. ವಿಶ್ವನಾಥ ಸ್ವಾಮಿ, ಪೂರ್ಣಿಮಾ, ಶಿವಲೀಲಾ, ಅನುಸುಯಾ, ರೇಖಾ ಅಂಡಗಿ, ನಂದಿನಿ, ಸುಮಾ, ಆರಾಧ್ಯ ಮಠ, ಅಚ್ಚೋಳ್ಳಿ ಮುತ್ತಿನ ಪೆಂಡಿಮಠ, ಶಿವರುದ್ರ ಶರಣರು ಹಾಗೂ ಇತರರು ಉಪಸ್ಥಿತರಿದ್ದರು.