ಗಾಂಜಾ ಮಾರಾಟ ಜಾಲ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಿ: ಆಯುಕ್ತ ಶೇಖ ತನ್ವೀರ ಆಸೀಫ್

0
9

ಕಲಬುರಗಿ: ಗಾಂಜಾ ಬೆಳೆಯುವ, ಸಾಗಾಟ ಮತ್ತು ಮಾರಾಟ ಜಾಲವನ್ನು ಪತ್ತೆಹಚ್ಚಿ ಎನ್.ಡಿ.ಪಿ.ಎಸ್. ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೊಳಪಡಿಸಲು ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರಿನ (ಕೇಂದ್ರಸ್ಥಾನ ಮತ್ತು ತಪಾಸಣೆ) ಅಪರ ಅಬಕಾರಿ ಆಯುಕ್ತರಾದ ಶೇಖ್ ತನ್ವಿರ್ ಆಸೀಫ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದನ್ನೂ ಓದಿ: ಶಹಬಾದ್ ಕಾಂಗ್ರೆಸ್ ಮುಂಡನ ಕೊಲೆ ಪ್ರಕರಣ: ಆರೋಪಿ ಮೇಲೆ ಪೊಲೀಸರಿಂದ ಪೈರಿಂಗ್

Contact Your\'s Advertisement; 9902492681

ಕಲಬುರಗಿ ಅಬಕಾರಿ ಭವನ ಸಭಾಂಗಣದಲ್ಲಿ ಶುಕ್ರವಾರ ವಿಭಾಗದ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಕಲಬುರಗಿ, ಬೀದರ, ರಾಯಚೂರು, ಯಾದಗಿರಿ ಜಿಲ್ಲೆಗಳು ರಾಜ್ಯದ ಗಡಿಗೆ ಹೊಂದಿಕೊಂಡಿದ್ದು, ನೆರೆ ರಾಜ್ಯಗಳಿಂದ ಅಕ್ರಮ ಸಾಗಣಿಯಾಗುತ್ತಿರುವ ಮದ್ಯ, ಸೇಂದಿ ಮತ್ತು ಗಾಂಜಾ ತಡೆಗಟ್ಟಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: ಬಾಹ್ಯಾಕಾಶದವರೆಗೂ ಗ್ರಾಫ್ ಸಿದ್ಧಾಂತ ಅನ್ವಯ: ಡಾ. ಮೇಘಾ ಖಂಡೇಲ್ವಾಲ

ಅಕ್ರಮ ಮದ್ಯ ಮತ್ತು ಇತರ ಅಬಕಾರಿ ಪದಾರ್ಥಗಳು ಈ ವಿಭಾಗದ ಜಿಲ್ಲೆಗಳಲ್ಲಿ ಬಳಕೆಯಾದಲ್ಲಿ ಆರ್ಥಿಕ ಗುರಿ ಸಾಧನೆಗೆ ತೊಂದರೆಯಾಗಲಿದೆ. ಅದೇ ರೀತಿ ಯುವ ಪೀಳಿಗೆ ಗಾಂಜಾ ವ್ಯಾಸನಕ್ಕೋಳಗಾಗಿ ಚಿಕ್ಕ ವಯಸ್ಸಿನಲ್ಲಿ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಮೊದಲನೇ ತ್ರೈಮಾಸಿಕ ಅವಧಿಯಲ್ಲಿ ದಾಖಲಾದ ಘೋರ ಪ್ರಕರಣಗಳ ಬಗ್ಗೆ ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಜಾರಿ ಮತ್ತು ತನಿಖಾ ಕಾರ್ಯ ಪರಿಣಾಮಕಾರಿಯಾಗಿ ನಿರ್ವಹಿಸಿ, ಅಕ್ರಮಗಳನ್ನು ಪತ್ತೆ ಹಚ್ಚಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ಸಭೆಯಲ್ಲಿ ಅಬಕಾರಿ ಜಂಟಿ ಆಯುಕ್ತರು, ನಾಲ್ಕು ಜಿಲ್ಲೆಗಳ ಅಬಕಾರಿ ಉಪ ಆಯುಕ್ತರು ಹಾಗೂ ಅಧೀನ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಚಿಂಚೋಳಿ- ದ್ವಿ ಚಕ್ರ ವಾಹನ ಮುಖಾಮುಖಿ ಡಿಕ್ಕಿ: ಮೂವರ ಸಾವು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here