ನನ್ನ ಸಭೆ ಜನಪರ, ಇದರಲ್ಲಿ ರಾಜಕೀಯವಿಲ್ಲ: ಡಾ. ಉಮೇಶ ಜಾಧವ

0
26

ಕಲಬುರಗಿ: ಲೋಕಸಭಾ ಸದಸ್ಯನಾಗಿ ನಾನು ನನ್ನ ಮತಕ್ಷೇತ್ರ ವ್ಯಾಪ್ತಿಯ ಗುರುಮಠಕಲ್ ಮತಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಿದ್ದು ರಾಜಕಾರಣದ ಉದ್ದೇಶಕ್ಕಲ್ಲ. ಅಧಿಕಾರಿಗಳನ್ನು‌ ಮುಂದಿಟ್ಟುಕೊಂಡು ರಾಜಕೀಯ ಮಾಡುವ ಅಗತ್ಯವು ನನಗಿಲ್ಲ ಎಂದು ಕಲಬುರಗಿ‌ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ತಿರುಗೇಟು ನೀಡಿದ್ದಾರೆ.

ಯಾದಗಿರಿಯಲ್ಲಿ‌ನಾನು ಸಭೆ ನಡೆಸಿದ್ದು ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿಗೆ ಪರಿಶೀಲಿಸುವ ಕುರಿತು‌ ಹೇಳಿಕೆ ನೀಡಿದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅವರು ಅಪಾರ್ಥ ಮಾಡಿಕೊಳ್ಳಬಾರದು ಎಂದಿದ್ದಾರೆ. ನನ್ನ ಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಲು ನನಗೆ ಅಧಿಕಾರವಿದೆ ಇದನ್ನು ಹಿರಿಯರಾದ ಕಂದಕೂರ ಅವರು ಅರಿತುಕೊಳ್ಳಬೇಕು. ಈ ಹಿಂದೆ ನಾನು ಗುರುಮಠಕಲಗೆ ಬಂದಾಗಲೆಲ್ಲ ತಮ್ಮನ್ನು ಸಂಪರ್ಕಿಸಿದ್ದೇನೆ ಸಭೆಯ ಮಾಹಿತಿಯೂ ನೀಡಿದ್ದೇನೆ ಆದರೆ ಯಾದಗಿರಿಯಲ್ಲಿ ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಮಳೆ ಬೆಳೆ ಕುರಿತು ಮಾಹಿತಿ ಪಡೆಯಲು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲಿಸಲು ತುರ್ತು ಸಭೆ ನಡೆಸಲಾಗಿದೆ. ಸಭೆಯ ಕುರಿತು ತಮಗೆ ಮಾಹಿತಿ‌ ನೀಡಲು‌ ನಾನು ಪ್ರಯತ್ನಿಸಿದ್ದೇನೆ ಆದರೆ ತಮ್ಮ‌ ಮೋಬೈಲ್ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಜಾಧವ ವಿವರಿಸಿದ್ದಾರೆ.

Contact Your\'s Advertisement; 9902492681

ಇದನ್ನೂ ಓದಿ: ಹಿರಿಯರ ಸಮಸ್ಯೆಗಳ ಪರಿಹಾರಕ್ಕೆ `ಚಾಯ್ ಪೇ ಚರ್ಚಾ’: ಅನ್ವಯಾ ಕ್ಲಬ್ ವೇದಿಕೆ ಆರಂಭ

ಉದ್ಯೋಗ ಖಾತ್ರಿ ಯೋಜನೆ, ಪ್ರಧಾನ ಮಂತ್ರಿ ಫಸಲ ಭಿಮಾ ಯೋಜನೆ ಹಾಗೂ ಬಿತ್ತನೆಗೆ ಬೀಜ ಗೊಬ್ಬರ ಕೊರತೆಯಾಗದಂತೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದ್ದು ಆರೋಗ್ಯ ಸಮಸ್ಯೆ, ಗುಳೆ ಸಮಸ್ಯೆ ಕುರಿತು ಚರ್ಚಿಸಲಾಗಿದೆ. ಇದನ್ನು ಹೊರತು ಪಡಿಸಿ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಅಧಿಕಾರಿಗಳನ್ನು ಕರೆದು ರಾಜಕಾರಣ ಮಾಡುವಷ್ಟ ಸಣ್ಣತನ ನಾನು ಮಾಡುವುದಿಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದರು.

ನೀವು ನಿಮ್ಮ‌ ಜವಾಬ್ದಾರಿ ಅರಿಯಿರಿ. ಒಬ್ಬ ಜನಪ್ರತಿನಿಧಿ ಜನಪರ ಸಮಸ್ಯೆ ಕುರಿತು ಮಾಹಿತಿ ಪಡೆಯಲು ಅಧಿಕಾರಿಗಳ ಸಭೆ ನಡೆಸಿದ್ದು ಅಕ್ಷಮ್ಯ ಎಂದು‌ ಬಿಂಬಿಸುವುದರ ಜತೆಗೆ ಅಧಿಕಾರಿಗಳನ್ನು ಹೆದರಿಸಲು ಉದ್ದೇಶಿಸದಂತೆ ತಮ್ಮ‌ಪತ್ರಿಕಾ ಹೇಳಿಕೆಗಳನ್ನು ಗಮನಿಸಿದ್ದೇನೆ ಎಂದಿದ್ದಾರೆ. ನನ್ನ ಜತೆಗೆ ಕರ್ನಾಟಕ ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರು ಇದ್ದ ಕಾರಣ ತಾವು ಅಪಾರ್ಥ ಮಾಡಿಕೊಳ್ಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಉಮೇಶ ಜಾಧವ ಅವರು ಬಾಬುರಾವ್ ಚಿಂಚನಸೂರು ಮಾಜಿ‌ ಸಚಿವರು, ಹಲವು‌ ಬಾರಿ ಶಾಸಕರಾದವರು.

ಇದನ್ನೂ ಓದಿ: ಆಲಸ್ಯತನ ಬಿಟ್ಟು ಸರ್ಕಾರಿ ಸೌಲಭ್ಯ ಪಡೆಯಲು ಮುಂದಾಗಿ: ಕಲಬುರಗಿ ಡಿಸಿ ಯಶವಂತ ವಿ. ಗುರುಕರ್

ನಿಗಮ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಜನಾನುರಾಗಿ‌ ಅನುಭವಿ ನಾಯಕರಾಗಿದ್ದಾರೆ. ಅವರಿಗೆ‌ ನನ್ನ‌ ಮುಖಾಂತರ ಅಧಿಕಾರಿಗಳಿಗೆ ಹೇಳಿಸಿ‌ ಕೆಲಸ‌ ಮಾಡಿಸಿಕೊಳ್ಳುವ ದುಸ್ಥಿತಿ‌ ಬಂದಿಲ್ಲ ಸಭೆಯಲ್ಲಿ‌ ಅವರು ಪಾಲ್ಗೊಂಡಿದ್ದರಿಂದ ತಾವು ಚಿಂತಿತರಾಗಬೇಕಿಲ್ಲ ಎಂದು ಟಾಂಗ್ ನೀಡಿದರು. ಜನಪ್ರತಿನಿಧಿಗಳು ಅಧಿಕಾರಿಗಳ ಸಭೆ ನಡೆಸಿ ಜನಪರ ಸಮಸ್ಯೆ ಚರ್ಚಿಸಿದರೆ ತಪ್ಪಾಗುವುದಿಲ್ಲ ಇದರಲ್ಲಿ ರಾಜಕೀಯ ಹುಡುಕಬೇಡಿ ಚುನಾವಣೆ ಬಂದಾಗ ರಾಜಕಾರಣ ಮಾಡೋಣ ಎಂದು ಕಿವಿ‌ಮಾತು ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here