ಕಲಬುರಗಿ ಜಿಲ್ಲಾ ಗಾಣಿಗ ಸಮಾಜದ ಸದಸ್ಯತ್ವಕ್ಕೆ ಚಾಲನೆ

0
293

ಕಲಬುರಗಿ: ಸಮಾಜ ಸಂಘಟನೆ, ಒಗ್ಗಟ್ಟು ಸ್ವಾಭಿಮಾನ ಇದ್ದಾಗ ಮಾತ್ರ ಎಲ್ಲರೂ ಒಂದು ಎಂಬ ಭಾವನೆ ಬರುತ್ತದೆ. ಅಂದಾಗ ಮಾತ್ರ ಸಮಾಜದ‌ ಸ್ಥಾನಮಾನ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹೆಚ್ಚು ಹೆಚ್ಚು ಬೆಳೆವಣಿಗೆ ಪೂರಕವಾಗಬೇಕೆಂದು ಸಮಾಜದ ಸಂಸ್ಥಾಪಕ ಅಧ್ಯಕ್ಷರು ಮತ್ತು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅಪ್ಪರಾವ ಪಾಟೀಲ ಅತನೂರ ಹೇಳಿದರು. ಇತರ ಸಮಾಜದ ಜೊತೆಗೆ ಗೌರವ ಮತ್ತು ನಮ್ಮ ಸಮಾಜದ ಜನರ ಜೊತೆಗೆ, ಸಹೃದಯಿ ಮತ್ತು ಉತ್ತಮ ಸಂಬಂಧಗಳು ಇರಬೇಕು, ಸಮಾಜದ ಜನರು ಹೆಚ್ಚು ಹೆಚ್ಚು ಸದಸ್ಯರು ಆಗಬೇಕೆಂದು ಕಿವಿಮಾತು ಹೇಳಿದರು.

ಇಂದು ಕಲಬುರಗಿ ನಗರದಲ್ಲಿ ಸಮಾಜದ ಸದಸ್ಯತ್ವಕ್ಕೆ ಗೌರವ ಅಧ್ಯಕ್ಷರಾದ ಅಪ್ಪರಾವ ಪಾಟೀಲ ಅತನೂರ, ಶರಣಪ್ಪ ಜಿ.ಅಂದಾನಿ ಹೊನ್ನಕಿರಣಗಿ ಅವರು ಚಾಲನೆ ನೀಡಿದರು. ಗೌರವ ಅಧ್ಯಕ್ಷರಿಗೆ ವಿಶೇಷ ಸನ್ಮಾನ ಮಾಡಲಾಯಿತು.

Contact Your\'s Advertisement; 9902492681

ಸಮಾಜದ ಜಿಲ್ಲಾಧ್ಯಕ್ಷರಾದ ಶರಣಕುಮಾರ ಬಿಲ್ಲಾಡ ಸಾಹು ನೆಲೋಗಿ, ಉಪಾಧ್ಯಕ್ಷರಾದ ಅಶೋಕ ಪಾಟೀಲ ಅತನೂರ ಕಾರ್ಯದರ್ಶಿ ಈಶ್ವರಗೌಡ ಪಾಟೀಲ ಕಲ್ಲೂರ, ಕೋಶಾಧ್ಯಕ್ಷರು ಮಹಾಂತೇಶ ಕೊಣ್ಣೂರ, ಸಂಘಟನಾ ಕಾರ್ಯದರ್ಶಿ ದತ್ತು ಪಾಟೀಲ ಬೆಣ್ಣೆಸೂರ, ಸಮಾಜದ ಹಿರಿಯರು ಮತ್ತು ಪ್ರದಾಧಿಕಾರಿಗಳು ನಿವೃತ್ತ ಎಸ್. ಪಿ., ಎಸ್. ಬಿ.ಸಾಂಬಾ, ಹಿರಿಯರು ಡಾ.ಕೆ.ಜಿ.ಬಿರಾದಾರ ವಸ್ತಾರಿ, ಬಸವರಾಜ ಕೂಕನೂರ, ಬಸವರಾಜ ಪಾಟೀಲ ಅವರಾದಿ, ಶರಣು ಜೋಗೂರ ಕಲ್ಲೂರ(ಬಿ), ಪ್ರಕಾಶ ಪಾಟೀಲ ಯತ್ನಾಳ, ಶಂಕರಗೌಡ ಪಾಟೀಲ ಭಾಸಗಿ, ಅಫಜಲಪುರ ತಾಲೂಕ ಅಧ್ಯಕ್ಷರು, ಯಳಸಂಗಿ ಗೌಡರು, ಬಿ.ಕೆ.ಪಾಟೀಲ, ಭೂಸನೂರ ಗೌಡರು, ಶಿವಾನಂದ ಡೋಮನಾಳ, ಚಂದ್ರಕಾಂತ ಗೌಡರ್ ಬಳ್ಳೂಂಡಗಿ, ವಿಠಲ್ ಹೇರೂರ, ಸಂದೀಪ್ ದೇಸಾಯಿ, ರಾಜಕುಮಾರ್ ಪಾಟೀಲ ಅತನೂರ, ‌ವೀರೇಶ ಕಲಶೇಟ್ಟಿ ಭೈರಾಮಡಗಿ, ರವೀಂದ್ರ ಕಾಚಾಪುರ ನೆಲೋಗಿ, ಕುಮಾರಗೌಡ ಸಾಂಬಾ, ಬಿ.ಎಂ.ಪಾಟೀಲ ಕಲ್ಲೂರ, ಸ್ವಾಗತ ಎಸ್. ಬಿ.ಸಾಂಬಾ, ಪ್ರಾಸ್ತಾವಿಕ ಅಧ್ಯಕ್ಷ ಶರಣಕುಮಾರ ಬಿಲ್ಲಾಡ ಸಾಹು ನೆಲೋಗಿ, ನಿರೂಪಣೆ ಬಿ.ಎಂ.ಪಾಟೀಲ ಕಲ್ಲೂರ, ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳು ಮತ್ತು ಸಲಹೆ ಸೂಚನೆಗಳು ಹೇಳಿದರು. ಹಾಗೂ ಇತರರು ಉಪಸ್ಥಿತರಿದ್ದರು.

ಸಂಘದ ಸದಸ್ಯರಾಗಲು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್. 81058 16737, 94488 30607, 94496 81994, 96638 83224, 98459 93349, 99009 70323, 97410 30330, 96111 48555, 99026 15555, 99015 65939…

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here