ಕಲಬುರಗಿ: ನಗರದ ಎಸ್.ಎಮ್.ಪಂಡಿತ ರಂಗಮಂದಿರದಲ್ಲಿ ಕಲಬುರಗಿ ಡ್ಯಾನ್ಸ್ ಸಂಘದ ವತಿಯಿಂದ ಜನಪದ ಲೋಕದಲ್ಲಿ ನೃತ್ಯೋತ್ಸವ ಹಾಗೂ ದಿ.ವಿಶ್ವವಿಖ್ಯಾತ ಡ್ಯಾನ್ಸರ್ ಮೈಕಲ್ ಜಾಕ್ಸ್‌ನ ಅವರ 11ನೇ ವರ್ಷದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಉದ್ಘಾಟಿಸಿದರು.
ಮುಗಳನಾಗಾವಿಯ ಕಟ್ಟಿಮನಿ ಸಂಸ್ಥಾನದ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಸಿದ್ಧಲಿಂಗ ಮಹಾಸ್ವಾಮಿಗಳು, ಡ್ಯಾನ್ಸ್ ಸಂಘದ ಅಧ್ಯಕ್ಷ ಯಂಕಪ್ಪ (ಅಕ್ಷಯ), ಜ್ಯೋತಿ, ರವಿಚಂದ್ರ ಗುತ್ತೇದಾರ, ಶಿವರುದ್ರಪ್ಪ ಭೇಣಿ, ಸಚೀನ್ ಫರತಾಬಾದ, ಶಿವುಕುಮಾರ ಪಾಟೀಲ್, ಲಕ್ಷ್ಮೀಪುತ್ರ, ನಾಗರಾಜ ಗುತ್ತೇದಾರ, ಸುನೀಲ ದಂಡಗುಳಕರ್, ಸಾಯಬಣ್ಣಾ ಹೋಳಕರ್, ಅಮೃತ ಪಾಟೀಲ್, ಹಣಮಂತ ಜಾಧವ, ಶಿವಾನಂದ ಮಾಳಗಿ, ಎಂ.ಎನ್.ಸುಗಂಧಿ, ಸೋಮಶೇಖರ ಇದ್ದರು.