ಕಲಬುರಿಗಿ: ರಾಜ್ಯಅಮೃತೋತ್ಸವ ಸಮಿತಿಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೫ನೇ ಜನ್ಮದಿನ ಪ್ರಯುಕ್ತ ಆ.೩ರಂದು ದಾವಣಗೆರೆಯಲ್ಲಿ ನಡೆಯುವಅಮೃತ ಮಹೋತ್ಸವಕಾರ್ಯಕ್ರಮಕ್ಕೆಜಿಲ್ಲೆಯಿಂದ ಸುಮಾರು ೩೦ ಸಾವಿರಕ್ಕಿಂತಲೂಅಧಿಕಜನ ತೆರಳಲಿದ್ದಾರೆ ಎಂದುಕರ್ನಾಟಕರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟಜಿಲ್ಲಾಘಟಕದಜಿಲ್ಲಾಧ್ಯಕ್ಷ ಮಹಾಂತೇಶ ಕೌಲಗಿ ಹಾಗೂ ಕಾರ್ಯಾಧ್ಯಕ್ಷ ಲಚ್ಚಪ್ಪಜಮಾದಾರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿದರು.ಈಗಾಗಲೇ ಅಮೃತ ಮಹೋತ್ಸವಕಾರ್ಯಕ್ರಮ ಯಶಸ್ವಿಗೊಳಿಸಲು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟರಾಜ್ಯಾಧ್ಯಕ್ಷಕೆ.ಎಂ.ರಾಮಚಂದ್ರಪ್ಪನವರು ಮತ್ತುರಾಜ್ಯ ಪದಾಧಿಕಾರಿಗಳು ಎಲ್ಲ ಜಿಲ್ಲೆಗಳನ್ನು ಪ್ರವಾಸ ಮಾಡಿ ಪೂರ್ವಭಾವಿ ಸಭೆಗಳನ್ನು ಮಾಡಿದ್ದಾರೆ.ಅದೇರೀತಿಯಾಗಿ ಕಲಬುರಗಿಯಲ್ಲಿಯೂ ಪೂರ್ವಭಾವಿ ಸಭೆಯಲ್ಲಿಅಮೃತ ಮಹೋತ್ಸವಕ್ಕೆ ಪಾಲ್ಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಹೀಗಾಗಿ ಜಿಲ್ಲೆಯಿಂದ ಸುಮಾರು ೩೦ ಸಾವಿರಕ್ಕಿಂತಲೂ ಹೆಚ್ಚಿನಜನರು ತೆರಳಲಿದ್ದಾರೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಜಾತಿಜನಾಂಗದವರಿಂದ ಸ್ವಯಂ ಪ್ರೇರಿತವಾಗಿ ಭಾಗವಹಿಸುತ್ತಿದ್ದಾರೆ.ನಾವು ಭೇಟಿ ನೀಡಿರುವ ಪ್ರತಿಯೊಂದುತಾಲೂಕು ಮತ್ತು ಗ್ರಾಮಗಳಲ್ಲಿ ತಮ್ಮದೇಖರ್ಚಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಮೃಮಹೋತ್ಸವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಅವರ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರೆಲ್ಲರುತಮ್ಮತಮ್ಮ ಮನೆಯಲ್ಲಿಯೇಅವರಜನ್ಮದಿನ ಆಚರಿಸಲಿ ನಿರ್ಧರಿಸಿದ್ದಾರೆ.ಸಿಹಿ ತಿಂಡಿಗಳನ್ನು ಮಾಡಿ ವಿಶೇಷವಾದಗೌರವವನ್ನು ಸಲ್ಲಿಸಲಿದ್ದಾರೆಎಂದು ಹೇಳಿದರು.
ಭೀಮಶಾಖನ್ನಾ, ಹಣಮಂತಆಲೂರ, ವಿನೋಧಕುಮಾರಜನೇವರಿ, ನಿಂಗಪ್ಪ ಹೇರೂರ, ಈರಣ್ಣ ಬಡಿಗೇರ, ಯಲ್ಲಪ್ಪಯಾದವ, ಗೋವಿಂದಯಾದವಇತತರಿದ್ದರು.