ಲಾಡ ಚಿಂಚೋಳಿ ಗ್ರಾಮಕ್ಕೆಎಲ್ಲ ಸೌಲಭ್ಯ: ಶಾಸಕ ಸುಭಾಷ್‌ಆರ್‌ಗುತ್ತೇದಾರ

0
24

ಆಳಂದ: ತಾಲೂಕಿನ ಆಯ್ದಗ್ರಾಮದ ಕೆಲವೊಂದು ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್‌ಯೋಜನೆಯನ್ನು ಪರಿಚಯಿಸಿ ಗ್ರಾಮೀಣ ಭಾಗದ ಮಕ್ಕಳಿಗೆ ಡಿಜಿಟಲ್‌ಆಧಾರಿತ ಶಿಕ್ಷಣ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆಎಂದು ಆಳಂದ ಶಾಸಕ ಸುಭಾಷ್‌ಆರ್‌ಗುತ್ತೇದಾರ ಹೇಳಿದರು.

ಮಂಗಳವಾರ ಆಳಂದ ತಾಲೂಕಿನ ಲಾಡಚಿಂಚೋಳಿ ಗ್ರಾಮದಲ್ಲಿ ೨೦೧೯-೨೦, ೨೦೨೧-೨೨ನೇ ಸಾಲಿನ ಕಲ್ಯಾಣಕರ್ನಾಟಕ ಪ್ರದೇಶಅಭಿವೃದ್ಧಿ ಮಂಡಳಿಯಿಂದ ಮಂಜೂರಾದರೂ. ೫೦.೦೦ ಲಕ್ಷಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ೫ ಹೆಚ್ಚುವರಿ ಕೊಠಡಿಗಳ ನಿರ್ಮಾಣ, ರೂ.೧೦.೦೦ ಲಕ್ಷಗಳ ಅಂಗನವಾಡಿಕಟ್ಟಡಕ್ಕೆತಡೆಗೋಡೆ, ರೂ.೫೦.೬೦ ಲಕ್ಷಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ೩ ತರಗತಿಕೋಣೆ ಹಾಗೂ ತಡೆಗೋಡೆ ಮತ್ತು ಶಿಕ್ಷಣ ಇಲಾಖೆಯಿಂದ ಮಂಜೂರಾದ ೧ ಕೋಣೆಯಕಾಮಗಾರಿಗಳ ಕಟ್ಟಡಗಳನ್ನು ಉದ್ಘಾಟಿಸಿ ಶಾಸಕ ಸುಭಾಷ್‌ಆರ್‌ಗುತ್ತೇದಾರ ಮಾತನಾಡಿದರು.

Contact Your\'s Advertisement; 9902492681

ನಗರ ಮತ್ತುಗ್ರಾಮೀಣ ಎಂಬ ಮನೋಭಾವ ವಿದ್ಯಾರ್ಥಿಗಳಲ್ಲಿ ಹೋಗಲಾಡಿಸಲು ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ.ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆಇದಕ್ಕಾಗಿ ಹೆಚ್ಚಿನಅನುದಾನವೂ ಮೀಸಲಿಟ್ಟಿದ್ದೇನೆಎಂದು ನುಡಿದರು.

ಈ ಸಂದರ್ಭದಲ್ಲಿಜೆಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣಿಗ್ರಾ.ಪಂ ಅಧ್ಯಕ್ಷೆ ಶೋಭಾಚಂದ್ರಕಾಂತ ಮಂಗಾಣಿ,ಕೆಎಂಎಫ್ ನಿರ್ದೇಶಕಚಂದ್ರಕಾಂತ ಭೂಸನೂರ, ಮುಖಂಡರಾದ ಮಲ್ಲಣ್ಣ ನಾಗೂರೆ, ಬಸವರಾಜ ಬಿರಾದಾರ, ಶಿವಾನಂದ ಪಾಟೀಲ, ಪ್ರಭುಲಿಂಗ ಹುಲಿ, ಶಿವಶರಣಪ್ಪ ನೆಲ್ಲೂರ, ಅಶೋಕ ಗುತ್ತೇದಾರ, ಕ್ಷೇತ್ರ ಶಿಕ್ಷಾಣಾಧಿಕಾರಿ ಚಿತ್ರಶೇಖರದೇಗಲಮಡಿ, ಲೋಕೋಪಯೋಗಿಇಲಾಖೆಯ ಸಹಾಯಕಕಾರ್ಯನಿರ್ವಾಹಕಅಭಿಯಂತರಗುರುದೇವ ಕಳಸ್ಕರ, ಕಿರಿಯಅಭಿಯಂತರ ಶರಣಯ್ಯ ಹಿರೇಮಠ, ಪಂಚಾಯತರಾಜಇಂಜಿನಿಯರಿಂಗಇಲಾಖೆಯ ಸಹಾಯಕಕಾರ್ಯನಿರ್ವಾಹಕಅಭಿಯಂತರ ನಾಗಮೂರ್ತಿ, ಕಿರಿಯಅಭಿಯಂತರ ಲಿಂಗರಾಜ, ಮೋನಪ್ಪ, ಬಾಬುರಾವಘೋಡ್ಕೆ ಸೇರಿದಂತೆಶಾಲೆಯ ಮುಖ್ಯ ಗುರುಗಳು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here