ಕಳ್ಳಭಟ್ಟಿ ಸರಾಯಿ- ಕಲಬೆರಕಿ ಸೇಂದಿ ವಶಪಡಿಸಿಕೊಂಡ ಅಬಕಾರಿ ಪೊಲೀಸರು

1
20

ತಾಲೂಕಿನ ವಿವಿಧ ಕಡೆ ಅಬಕಾರಿ ಪೊಲೀಸರಿಂದ ದಾಳಿ

ಶಹಾಬಾದ: ನಗರದ ವಿವಿಧ ಕಡೆ ಅಬಕಾರಿ ಪೊಲೀಸರು ದಾಳಿ ಮಾಡಿ ೮ ಲೀಟರ್ ಕಳ್ಳಭಟ್ಟಿ ಸರಾಯಿಯನ್ನು ಹಾಗೂ ೪೦ ಲೀಟರ್ ಬೆಲ್ಲದ ಕೊಳೆ,೩೦ ಲೀಟರ್ ಕಲಬೆರಕೆ ಸೇಂದಿಯನ್ನು ವಶಪಡಿಸಿಕೊಂಡ ಘಟನೆ ಸೋಮವಾರದಂದು ನಡೆದಿದೆ.

Contact Your\'s Advertisement; 9902492681

ತಾಲೂಕಿನ ಮಡ್ಡಿ ನಂ ೨ ಏರಿಯಾದ ಶಹಾಬಾದ ದ ಮೂರು ಮನೆಗಳಲ್ಲಿ ೮ ಲೀಟರ್ ಕಳ್ಳಭಟ್ಟಿ ಸರಾಯಿಯನ್ನು ಹಾಗೂ ೪೦ ಲೀಟರ್ ಬೆಲ್ಲದ ಕೊಳೆಯನ್ನು ಹಾಗೂ ವಾಡಿಯ ಪಟ್ಟಣದ ವಿಜಯ ನಗರ ಏರಿಯಾದಲ್ಲಿ ೩೦ ಲೀಟರ್ ಕಲಬೆರಕೆ ಸೇಂಧಿಯನ್ನು ಮಾರಾಟಕ್ಕಾಗಿ ತಯಾರಿಸಿ ಸಂಗ್ರಹಿಸಿಟ್ಟಿರುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ಜಂಟಿ ಆಯುಕ್ತರು (ಜಾ&ತ) ಕಲಬುರ್ಗಿ ವಿಭಾಗ ಕಲಬುರ್ಗಿ ರವರ ಆದೇಶ ಹಾಗೂ ಅಬಕಾರಿ ಉಪ ಆಯುಕ್ತರು ಕಲಬುರ್ಗಿ ಜಿಲ್ಲೆ ಕಲಬುರ್ಗಿ ರವರ ನಿರ್ದೇಶನ ಮೇರೆಗೆ ಹಾಗೂ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಚಿತ್ತಾಪುರ ರವರ ನೇತೃತ್ವದಲ್ಲಿ ೪ ಕಡೆ ಸಾಮೂಹಿಕ ಅಬಕಾರಿ ದಾಳಿ ಮಾಡಿ ಅಬಕಾರಿ ದಾಳಿ ಮಾಡಿ ೮ ಲೀಟರ್ ಕಳ್ಳಭಟ್ಟಿ ಸರಾಯಿಯನ್ನು ಹಾಗೂ ೪೦ ಲೀಟರ್ ಬೆಲ್ಲದ ಕೊಳೆಯನ್ನು ಹಾಗೂ ೩೦ ಲೀಟರ್ ಕಲಬೆರಕೆ ಸೇಂಧಿಯನ್ನು ವಶಪಡಿಸಿಕೊಂಡು ಆರೋಪಿತಳಾದ ಮಡ್ಡಿ ನಂ ೨ ಏರಿಯಾದ ಸಕ್ಕುಬಾಯಿ ಗಂಡ ರಮೇಶ ಚವ್ಹಾಣದಿವಳನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣವನ್ನು ಚಿತ್ತಾಪೂರ ವಲಯದ ಅಬಕಾರಿ ಉಪ ನಿರೀಕ್ಷಕರಾದ ವಿಜಯಲಕ್ಷ್ಮಿ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಳ್ಳಭಟ್ಟಿ ಸರಾಯಿ- ಕಲಬೆರಕಿ ಸೇಂದಿ ವಶಪಡಿಸಿಕೊಂಡ ಅಬಕಾರಿ ಪೊಲೀಸರು

ಮಡ್ಡಿ ನಂ ೨ ಏರಿಯಾದ ರೇಣುಕಾ ಗಂಡ ಅರ್ಜುನ ಚವ್ಹಾಣ ಇವಳ ವಿರುದ್ಧ ಚಿತ್ತಾಪೂರ ಅಬಕಾರಿ ನಿರೀಕ್ಷಕರಾದ ರಮೇಶ ಬಿರಾದಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ನಗರದ ಮಡ್ಡಿ ನಂ ೨ ಏರಿಯಾದ ಸುನೀತಾಬಾಯಿ ಗಂಡ ಚಂದ್ರಕಾಂತ ಚವ್ಹಾಣ ಹಾಗೂ ವಾಡಿಯ ವಿಜಯನಗರದ ನಾಗಮ್ಮಾ ಗಂಡ ನಂದಕುಮಾರ ಬನಸುಡೆ ವಿರುದ್ಧ ಚಿತ್ತಪೂರ ಉಪವಿಭಾಗದ ಅಬಕಾರಿ ನಿರೀಕ್ಷಕರಾದ ಶರಣಗೌಡ ಬಿರಾದಾರ ಪ್ರಕರಣವನ್ನು ದಾಖಲಿಕೊಂಡಿದ್ದಾರೆ.ಆದರೆ ಆರೋಪಿತರು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಬಲೆ ಬೀಸಲಾಗಿದೆ. ದಾಳಿಯಲ್ಲಿ ಸಿಬ್ಬಂದಿಗಳಾದ ಶಿವಾನಂದ ,ಶರಣಬಸಪ್ಪ,ನಾಗರಾಜ ಹಾಗೂ ವಾಹನ ಚಾಲಕ ಇದ್ದರು.

ಇದನ್ನೂ ಓದಿ: ಕಲಬುರಗಿ-ಸಂಸದರ ಸಹೋದರ ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪ : ರಾಜೀನಾಮೆಗೆ ಪಟ್ಟು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here