ಕಲಬುರಗಿ: ಕಲೆ ಒಂದು ಜನಾಂಗದ ಸಂಸ್ಕೃತಿಯಉದ್ಭವ ಮತ್ತು ವಿಕಾಸದೊಂದಿಗೆ ಹುಟ್ಟಿ ಬೆಳೆಯುತ್ತದೆ. ಹೀಗಾಗಿ ಕಲೆಯಇತಿಹಾಸ, ಮಾನವ ಸಂಸ್ಕೃತಿಯಇತಿಹಾಸವಾಗಿದೆ. ಸಂಸ್ಕೃತಿ ಮತ್ತು ಸೌಂದರ್ಯ ಪ್ರಜ್ಞೆಇಲ್ಲದಯಾವುದೆ.ದೇಶತನ್ನ ಅಸ್ತಿತ್ವವನ್ನು ಉಳಿಸಿಕೊಂಡಿಲ್ಲ. ಸಂಸ್ಕೃತಿ ಮತ್ತು ಸೌಂದರ್ಯ ಪ್ರಜ್ಞೆ, ನಾಗರಿಕತೆಯ ಮೂಲವಾಗಿದೆಂದು ನಾಡೋಜಡಾ. ಜೆ.ಎಸ್. ಖಂಡೇರಾವ್ ಹೇಳಿದರು.
ನಗರದಯುವ ಹವ್ಯಾಸಿ ಚಿತ್ರಕಲಾವಿದೆಕುಮಾರಿ ವೈಷ್ಣವಿ ಆರ್. ಬಿ. ಅವರ ಏಕ ವ್ಯಕ್ತಿಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕಕೆ.ಎಸ್. ಮಾಲಿಪಾಟೀಲ ಮುಖ್ಯಅತಿಥಿಯಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಕಲ್ಯಾಣಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂಅವರು ಮಾತನಾಡಿ, ಕಲ್ಯಾಣಕರ್ನಾಟಕದದೃಶ್ಯಕಲಾ ಪರಂಪರೆಯುಅತ್ಯಂತಉತ್ಕೃಷ್ಟವಾಗಿದೆ.ಕಲಬುರಗಿ ನಗರದಲ್ಲಿ ಪ್ರತಿ ತಿಂಗಳಿಗೊಂದು ವಿನೂತನಚಿತ್ರಕಲಾ ಪ್ರದರ್ಶನ ನಡೆಯಬೇಕು.ಆ ಪ್ರದರ್ಶನಕ್ಕೆ ಪ್ರಾಯೋಜಕತ್ವತಾವು ನೀಡುವುದಾಗಿ ಹೇಳಿದರು.
ಡಾ. ಅಶೋಕ ಶೆಟಕಾರ ನಿರೂಪಿಸಿದರು.ಎಂ.ಎಚ್. ಬೆಳಮಗಿ ಸ್ವಾಗತಿಸಿದರು.ಡಾ. ಪರಶುರಾಮ ಪಿ.ಪ್ರಾಸ್ತಾವಿಕವಾಗಿ ಮಾತನಾಡಿದರು.ಬಿ.ಎನ್. ಪಾಟೀಲ ವಂದಿಸಿದರು.ನಗರದಅಂಕುರಆರ್ಟ್‌ಗ್ಯಾಲರಿ, ದಿ ಆರ್ಟ್‌ಇಂಟಿಗ್ರೇಶನ್‌ಚಿತ್ರಕಲಾ ಮಹಾವಿದ್ಯಾಲಯದಲ್ಲಿ ವೈಷ್ಣವಿ.ಆರ್.ಬಿ. ರಚಿಸಿದ ೩೦ಕ್ಕೂ ಹೆಚ್ಚು ಚಿತ್ರಕಲಾಕೃತಿಗಳು ಐದು ದಿನ, ಅಗಸ್ಟ್ ೫ರ ವರೆಗೆ ಪ್ರದರ್ಶನ ಗೊಳ್ಳಲಿವೆ.