ಕಲಬುರಗಿ: ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಇದೇಆಗಸ್ಟ್ ೧೩ ರಿಂದ ೧೫ರ ವರೆಗೆಜಿಲ್ಲೆಯಾದ್ಯಂತ ಹರ್ಘರ್ತಿರಂಗಾಅಭಿಯಾನಕೈಗೊಂಡಿದ್ದು, ಅಮೃತ ಮಹೋತ್ಸವದಅರ್ಥಪೂರ್ಣಆಚರಣೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಡಿ.ಸಿ. ಯಶವಂತ ವಿ. ಗುರುಕರ್ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಡಿ.ಸಿ. ಯಶವಂತ ವಿ. ಗುರುಕರ್ಅವರು, ಆಗಸ್ಟ್ ೪ ರಂದುತಾಲೂಕು ಮಟ್ಟದ ಶಾಲೆಗಳಲ್ಲಿ ಸ್ವಾತಂತ್ರ ದಿನದ ಮಹತ್ವದ ಕುರಿತು ರಸಪ್ರಶ್ನೆ, ಆ.೮ ರಂದು ಕಲಬುರಗಿ ನಗರದಲ್ಲಿ ಸೈಕ್ಲೋಥಾನ್, ಆ.೯ ರಂದುಜಿಲ್ಲಾ ಮಟ್ಟದಲ್ಲಿ ಸ್ವಾತಂತ್ರ ದಿನದ ಮಹತ್ವಕುರಿತು ಶಾಲಾ ಮಕ್ಕಳಿಗೆ ರಸಪ್ರಶ್ನೆ, ಆ.೧೦ ರಂದು ಶಾಲೆಗಳಲ್ಲಿ ಡ್ರಾಯಿಂಗ್, ಪೇಂಟಿಂಗ್ ಹಾಗೂ ಆ.೧೧ ರಿಂದ ೧೩ರ ವರೆಗೆ ಡಾ.ಎಸ್.ಎಂ. ಪಂಡಿತ್ರಂಗಮಂದಿರದಲ್ಲಿ ನಾಟಕೋತ್ಸವ ಮತ್ತುದೇಶಭಕ್ತಿ ಗೀತೆಗಳ ಗಾಯನಕಾರ್ಯಕ್ರಮವನ್ನುಆಯೋಜನೆಗೆ ನಿರ್ಧರಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದರು.
ಮನೆಗಳ ಮೇಲೆ ತ್ರಿವರ್ಣಧ್ವಜ ಹಾರಿಸಲೆಂದೆ ಸಾರ್ವಜನಿಕರಿಗೆ ವಿತರಣೆ ಮಾಡಲುಜಿಲ್ಲೆಗೆರಾಜ್ಯ ಸರ್ಕಾರದಿಂದ ೭೬ ಸಾವಿರ ರಾಷ್ಟ್ರಧ್ವಜಗಳು ಪೂರೈಕೆಯಾಗಿದ್ದು, ಇದನ್ನು ತಾಲೂಕುಗಳಿಗೆ ನೀಡಲಾಗುವುದು. ಇದಲ್ಲದೆ ಕಲಬುರಗಿ ಮಹಾನಗರ ಪಾಲಿಕೆ ೧೦ ಸಾವಿರ ರಾಷ್ಟ್ರಧ್ವಜಗಳನ್ನು ನಗರದ ನಿವಾಸಿಗಳಿಗೆ ವಿತರಿಸಲಿದ್ದು, ಜಿಲ್ಲಾ ಪಂಚಾಯತಿಯು ಪ್ರತಿಗ್ರಾಮ ಪಂಚಾಯತಿಗೆ ೩೦೦ ರಿಂದ ೫೦೦ರ ವರೆಗೆಒಟ್ಟಾರೆ ೧.೨೦ ಲಕ್ಷ ಧ್ವಜಗಳನ್ನು ಪೂರೈಸಲಿದೆ. ಪ್ರತಿಧ್ವಜವನ್ನು ೨೨ ರೂ. ಗಳಿಗೆ ನೀಡಲಾಗುತ್ತದೆ. ಜಿಲ್ಲೆಯ ಸಾರ್ವಜನಿಕರುತಮ್ಮ ಮನೆಗಳ ಮೇಲೆ ತ್ರಿವರ್ಣಧ್ವಜ ಹಾರಿಸುವ ಮೂಲಕ ದೇಶಾಭಿಮಾನ ಮೆರೆಯಬೇಕುಎಂದು ಡಿ.ಸಿ. ಯಶವಂತ ವಿ. ಗುರುಕರ್ ಮನವಿ ಮಾಡಿದ್ದಾರೆ.
ಜಿ.ಪಂ. ಸಿ.ಇ.ಓ ಡಾ. ಗಿರೀಶ್ ಡಿ. ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕದತ್ತಪ್ಪ ಸಾಗನೂರ ಸೇರಿದಂತೆ ವಿವಿಧಇಲಾಖೆಯಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.