ಮುಧೋಳ: ಜನ ಜಾಗೃತಿ ಪಾದಯಾತ್ರೆ ನಾಲ್ಕನೇ ದಿನ ಪೂರ್ಣಗೊಂಡಿದ್ದು ಮುಧೋಳ ಮಾರ್ಗವಾಗಿ ಲಿಂಗAಪಲ್ಲಿ ಹಾಗೂ ಮುಧೋಳ ಮಧ್ಯ ಇರುವ ಸರ್ಕಾರಿ ಪ್ರಥಮ ದರ್ಜೆ ವಸತಿ ಸಹಿತ ಕಾಲೇಜಿಗೆ ಮಾಜಿ ಡಾ.ಶರಣಪ್ರಕಾಶ ಪಾಟೀಲ ಭೇಟಿ ನೀಡಿದರು.
ಸರ್ಕಾರಿ ಕಾಲೇಜಿನ ಕಟ್ಟಡ ಪೂರ್ಣಗೊಂಡಿದ್ದು ಆದರೆ ಕಾಲೇಜಿನ ಉಪಯೋಗ ಸ್ಥಳೀಯ ಶಾಸಕರು ಮಾಡದೆ ನಿರಾಸಕ್ತಿ ತೋರಿದ್ದಾರೆ ಎಂದು ಅವರು ಹೇಳಿದರು.
ನಾನು ಶಾಸಕನಾಗಿದ್ದಾಗ ೨೫ ಕೋಟಿ ಅನುದಾನ ಬಿಡುಗಡೆ ಮಾಡಿ ಮುಧೋಳ ವಸತಿ ಸಹಿತ ಸರ್ಕಾರಿ ಕಾಲೇಜು ನಿರ್ಮಾಣ ಮಾಡಿದ್ದೇನೆ ಆದರೆ ಬಿಜೆಪಿ ಸರ್ಕಾರ ಕಳೆದ ೪ ವರ್ಷಗಳೆ ಕಳೆದರು ಈ ಕಾಲೇಜು ಉದ್ಘಾಟನೆ ಮಾಡಿಲ್ಲ ಎಂದರೆ ಎಂಥ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ೨೫ ಕೋಟಿ ವೆಚ್ಚದ ಕಾಲೇಜನ್ನು ಬಳಸದೆ ಹೀಗೆ ಬಿಟ್ಟರೆ ಸ್ಥಳೀಯ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟವಾಡಿದಂತೆ, ಆ ನಿಟ್ಟಿನಲ್ಲಿ ಇಲ್ಲಿನ ಸ್ಥಳೀಯ ಅಧಿಕಾರಿಗಳು ಕೂಡಲೆ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಧುಸೂದನ್ ಪಾಟೀಲ ಹಾಗೂ ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಊರಿನ ಪ್ರಮುಖರು, ಕಾಂಗ್ರೆಸ್ ಕಾರ್ಯಕರ್ತರು ಇದ್ದರು