ಕಂಪ್ಲಿ: ಬಳ್ಳಾರಿ ಜಿಲ್ಲೆಯ ನೂತನ ಕಂಪ್ಲಿ ತಾಲೂಕು ಕೇಂದ್ರ ಸ್ಥಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಓ) ಕಚೇರಿಯನ್ನ ಸ್ಥಾಪಿಸುವಂತೆ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಿಗೆ ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಪತ್ರವನ್ನು ಕಂಪ್ಲಿಯ ತಹಸೀಲ್ದಾರರಾದ ಗೌಸಿಯಾ ಬೇಗಂರವರ ಮುಖಾಂತರ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಕಂಪ್ಲಿ ತಾಲೂಕು ಘಟಕದಿಂದ ಪ್ರತಿಭಟನಾ ಮನವಿ ಸಲ್ಲಿಸಿದರು!
ಈ ಸಂದರ್ಭದಲ್ಲಿ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಕಂಪ್ಲಿ ತಾಲೂಕು ಅಧ್ಯಕ್ಷ ಸೈಯದ್ ವಾರೀಶ್ ಎನ್ ಮಾತನಾಡಿ ನೂತನ ತಾಲೂಕು ಕೇಂದ್ರವಾದ ಕಂಪ್ಲಿ ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸ್ಥಾಪಿಸಬೇಕು, ಕಛೇರಿ ಸ್ಥಾಪನೆಗೆ ಸರ್ಕಾರಿ ಸ್ಥಳ, ಸರ್ಕಾರಿ ಕಟ್ಟಡಗಳು ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಕಟ್ಟಡವನ್ನು ಬಾಡಿಗೆ ರೀತಿ ಪಡೆದುಕೊಂಡು ಕಛೇರಿ ಸ್ಥಾಪಿಸಬೇಕು, ಇತರೆ ಕಾರಣಗಳನ್ನು ವ್ಯಕ್ತಪಡಿಸಿ ಪಕ್ಕದ ಕುರುಗೋಡು ತಾಲೂಕಿಗೆ ಅಥವಾ ಬಳ್ಳಾರಿ ಹಾಗೂ ಇತರೆ ಯಾವುದೇ ತಾಲೂಕಿಗೆ ಬಿಇಓ ಕಛೇರಿಯನ್ನು ಹೊಂದಿಸುವುದಾಗಲೀ, ಸೇರ್ಪಡೆಗೊಳಿಸುವ ಕ್ರಮ ಕೈಗೊಳ್ಳಬಾರದೆಂದರು,
ನಂತರ ಗೌರವಾಧ್ಯಕ್ಷರಾದ ಹೇಮಂತ್ ಕುಮಾರ್ ದಾನಪ್ಪ ಮಾತನಾಡಿ ಕಂಪ್ಲಿ ತಾಲೂಕಿನಲ್ಲಿ ಬಿಇಓ ಕಛೇರಿ ಸ್ಥಾಪಿಸಲು ತಾಂತ್ರಿಕ ತೊಂದರೆಗಳಿದ್ದಲ್ಲಿ ಕಂಪ್ಲಿ ತಾಲೂಕಿನಲ್ಲಿ ಕಛೇರಿ ಸ್ಥಾಪಿಸುವವರೆಗೂ ಹೊಸಪೇಟೆಯಲ್ಲಿಯೇ ಮುಂದುವರೆಸಬೇಕು ಕಾರಣ ಹೊಸಪೇಟೆಯು ಕಂಪ್ಲಿ ತಾಲೂಕಿನಿಂದ ಕೇವಲ 28 ಕೀಲೋ ಮೀಟರ್ ಸಮೀಪವಿದ್ದು ಕೇವಲ 30 ನಿಮಿಷಗಳಲ್ಲಿ ಸಂಚರಿಸುವ ಸಂಚಾರ ವ್ಯವಸ್ಥೆ ತುಂಬಾ ಅತ್ಯುತ್ತಮವಾಗಿದ್ದು ದಿನದ 24 ಗಂಟೆಯು ಸಂಚರಿಸಲು ಸಾರ್ವಜನಿಕರಿಗೆ ಸಂಚಾರ ವ್ಯವಸ್ಥೆ ತುಂಬಾ ಅನುಕೂಲವಿದ್ದು ಈ ಭಾಗದ ಜನರಿಗೆ ಸರ್ಕಾರಿ ಸೇವೆ ಪಡೆಯಲು ಯಾವುದೇ ಹೊರೆಯಾಗುತ್ತಿರುವುದಿಲ್ಲಾ, ಕಂಪ್ಲಿ ತಾಲೂಕು ಹೊರತು ಪಡಿಸಿ ಕುರುಗೋಡು ತಾಲೂಕು ಅಥವಾ ಇತರೆ ಬೇರೆ ತಾಲೂಕಿನೊಂದಿಗೆ ಹೊಂದಿಸಿದರೆ / ಸೇರ್ಪಡಿಸಿದರೆ ಕಂಪ್ಲಿ ತಾಲೂಕಿನ ಕೊನೆಯ ಗ್ರಾಮದಿಂದ 65 ರಿಂದ 70 ಕೀಲೋ ಮೀಟರ್‌ಗೂ ಅಧಿಕ ದೂರವಾಗುವುದಲ್ಲದೆ ಸಾರ್ವಜನಿಕರಿಗೆ ಆರ್ಥಿಕ ಹೊರೆಯೊಂದಿಗೆ ಸಮಯ ವ್ಯರ್ಥವಾಗುತ್ತದೆ ಹಾಗೂ ಈ ತಾಲೂಕಿನ ಜನರಿಗೆ ಅನ್ಯಾಯವಾಗುತ್ತದೆಂದರು
ಈ ಸಂಧರ್ಭದಲ್ಲಿ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಮನೋಜ್ ಕುಮಾರ್ ಡಿ, ಸಹ ಕಾರ್ಯದರ್ಶಿ ವೆಂಕಟೇಶ್ ಎಚ್, ಖಜಾಂಜಿ ರೋಷನ್, ಕಂಪ್ಲಿ ನಗರ ಘಟಕದ ಅಧ್ಯಕ್ಷ ಬಡಗಿ ದೊಡ್ಡ ಬಸವರಾಜ್ ಮುಖಂಡರಾದ ಮಂಜುನಾಥ್,ಗಂಗಾವತಿ ಕೃಷ್ಣ,ಜೀಲಾನ್,ಮೌಲ ಹುಸೈನ್,ಪಂಪನ ಗೌಡ,ಪ್ರೇಮ್ ಕುಮಾರ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.