ಕಬ್ಬು ಬೆಳೆಯಲ್ಲಿ ಸುಳಿ ತಿರುಚು ರೋಗ ನಿರ್ವಹಣೆ

0
277

ಕಲಬುರಗಿ: ಜಿಲ್ಲೆಯ ವಿವಿದ ಕಬ್ಬು ಬೆಳೆಯುವ ಹೊಲಗಳಲ್ಲಿ ಅಲ್ಲಲಿ ಕಬ್ಬು ಸುಳಿ ಎಲೆಯಲ್ಲಿ ಸುರಳಿ ಸುತ್ತಿದಂತೆ ವಕ್ರ ತಿರುಚು ಹೊಸ ರೋಗ ಕಂಡು ಬಂದಿದ್ದು ಈ ರೋಗದ ಲಕ್ಷಣ ಕಂಡು ಬಂದ ತಕ್ಷಣ ಬೆಳೆಯಲ್ಲಿ ರೋಗ ನಿರ್ವಾಹಣ ಕ್ರಮಗಳನ್ನು ಪಾಲಿಸಬೇಕು.

ಸುಳಿ ಭಾಗದ ಎಲೆಗಳು ಹಸಿರು ಮತ್ತು ಹಳದಿ ಮಶ್ರಿತವಾಗಿ ನಿಧಾನವಾಗಿ ಸುಟ್ಟಂತೆ ಲಕ್ಷಣ ಕಂಡು ಬರುತ್ತವೆ. ಹೆಚ್ಚಾಗಿ ಮಳೆ ಬಿದ್ದ ಹಾಗೂ ಅಧಿಕ ಒತ್ತತ್ತಾಗಿರುವಂತಹ ಕಳೆಗಳಿರುವ ಹೊಲಗಳಲ್ಲಿ ಸರಾಗವಾಗಿ ಮಳೆ ನೀರು ಹೋಗುವಂತೆ ಬಸಿಗಾಲುವೆ ನಿರ್ಮಿಸಬೇಕು. ತಜ್ಞರ ಶಿಫಾರಸ್ಸಿನಂತೆ ಗಿಡಗಳಿಗೆ ಕಂತು ಕಂತುಗಳಲ್ಲಿ ಸಾರಜನಕ, ರಂಜಕ, ಪೋಟ್ಯಷ್ ಹಾಗೂ ಕಬ್ಬಿಣ ಮತ್ತು ಜಿಂಕ್ ಗೊಬ್ಬರ ನೀಡಬೇಕು.

Contact Your\'s Advertisement; 9902492681

ಹೊಲಗಳನ್ನು ಕಳೆ ಮುಕ್ತಗೊಳಿಸಬೇಕು. ಸುಳಿ ವಕ್ರರೋಗಕಂಡು ಬಂದಲ್ಲಿ ಕಾರ್ಬನ್‌ಡೈಜಿಂ ಮತ್ತು ಮ್ಯಾಂಕೋಜೆಬ್ ಸಂಯುಕ್ತ ಶೀಲೀಂದ್ರ ನಾಶಕವನ್ನು ೨ ಗ್ರಾ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.ಕೆಲವೊಂದುಅತೀರೋಗ ಪೀಡಿತ ಗಿಡಗಳಲ್ಲಿ ಬೇರು ಕೊಳೆ ರೋಗ ಕಂಡು ಬಂದಲ್ಲಿ ಇದೇ ದ್ರಾವಣವನ್ನು ಕಾಂಡ ಮತ್ತು ಬೇರು ಭಾಗ ನೆನೆಯುವಂತೆ ಸಿಂಪಡಿಸಬೇಕು.

ಎಕರೆಗೆ ೧೦ ಕೆಜಿ ಜಿಂಕ್ ಸಲ್ಪೇಟ್ ಮತ್ತು ೧೦ ಕೆಜಿ ಕಬ್ಬಿಣದ ಸಲ್ಪೇಟ್ ೫೦ ಕೆಜಿ ಎರೆಗೊಬ್ಬರದೊಂದಿಗೆ ಮಿಶ್ರಣ ಮಾಡಿ ಗಿಡಗಳಿಗೆ ನೀಡಬೇಕು. ಅತೀಯಾಗಿ ನೀರು ನಿಲ್ಲದಂತೆ ಎಚ್ಚರಿಕೆವಹಿಸಬೆಕು.

ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಜಹೀರ್‌ಅಹೆಮದ್, ಡಾ. ಯುಸುಪ್‌ಅಲಿ ನಿಂಬರಗಿ, ಡಾ. ಶ್ರೀನಿವಾಸ ಬಿ.ವಿ,  ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಚಂದ್ರಕಾಂತ ಜಿವಣಗಿ, ಮತ್ತು ರೈತ ಸಂಪರ್ಕ ಕೇಂದ್ರ, ಪಟ್ಟಣದ ಕೃಷಿ ಅಧಿಕಾರಿಗಳಾದ ರಾಹುಲ್ ಚವ್ಹಾಣ ಕಬ್ಬು ಹೊಲಗಳಿಗೆ ಭೇಟಿ ನೀಡಿದರು.

ರೈತ ಸಂಪರ್ಕದಲ್ಲಿ ಸಿಗುವ ಜಿಂಕ್ ಸಲ್ಪೇಟ್, ಕೃಷಿ ಮಾಹಿತಿ ಪಡೆದು ಕಬ್ಬು ಬೆಳೆದ ರೈತರು ಉಪಯೋಗಿಸಬೇಕೆಂದು ತಿಳಿಸಿದರು. ಕಬ್ಬು ನಾಟಿ ಪೂರ್ವದಲ್ಲಿ ಕಬ್ಬು ತುಂಡುಗಳ ಬೀಜೋಪಚಾರಕ್ಕಾಗಿ ರೈತರು ಕಡ್ಡಾಯವಾಗಿ ಕ್ಲೋರೋಪೈರಿಪಾಸ್ ಹಾಗೂ ಕಾರ್ಬನ್‌ಡೈಜಿಂ ದ್ರಾವಣದಲ್ಲಿ ೩೦ ನಿಮಿಷಗಳ ಕಾಲ ನೆನೆಸಿ ಸಸಿ ನಾಟಿ ಮಾಡಿದ್ದಲಿ ಕಬ್ಬು ಬೆಳೆಯಲ್ಲಿ ಬರು ಕೀಟ ರೋಗಗಳನ್ನು ರೈತರು ನಿರ್ವಹಣೆ ಮಾಡಬಹುದೆಂದು ಕೆವಿಕೆ ಮುಖ್ಯಸ್ಥರಾz ಡಾ. ರಾಜು ಜಿ. ತೆಗ್ಗಳ್ಳಿ ರವರು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here