ಕಲಬುರಗಿ: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ (ಕೆಎಸ್‍ಡಿಸಿ) ಉದಯೋನ್ಮುಖ ಯೋಜನೆಯಾದ ಅಂತರರಾಷ್ಟ್ರೀಯ ವಲಸೆ ಕೇಂದ್ರ ಕರ್ನಾಟಕ ಮುಖಾಂತರ ದುಬೈನಲ್ಲಿರುವ ಬೃಹತ್ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ 100 ಜನ ಟೈಲ್ ಮೇಸ್ತ್ರಿಗಳು ಹಾಗೂ 100 ಮಾರ್ಬಲ್ ಮೇಸ್ತ್ರಿಗಳ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಆಗಸ್ಟ್ 7 ರಂದು ರವಿವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಗುಲಬರ್ಗಾ ಟೆಕ್ನಿಕಲ್ ಟ್ರೇನಿಂಗ್ ಇನ್‍ಸ್ಟಿಟ್ಯೂಟ್ ಪ್ರೈ.ಲೀ., ಕೆಐಎಡಿಬಿ ಕೈಗಾರಿಕಾ ಪ್ರದೇಶ, 2ನೇ ಹಂತ, ಬೇಲೂರು ಕ್ರಾಸ್ ಸಮೀಪ, ಮೈಲಾರಲಿಂಗ ದಾಲ್‍ಮಿಲ್ ಕಂಪೌಂಡ್, ಕಲಬುರಗಿ ಇಲ್ಲಿ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೌಶಲ್ಯ ಮಿಷನ್‍ನ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮುರಳೀಧರ್ ರತ್ನಗಿರಿ ಅವರು ತಿಳಿಸಿದ್ದಾರೆ.
ಟೈಲ್ ಮೇಸ್ತ್ರೀ (Tiles Masons) ಹುದ್ದೆಗೆ 2 ವರ್ಷಕ್ಕಿಂತ ಹೆಚ್ಚು ಅನುಭವ ಉಳ್ಳವರಿಗೆ 1000-1200 ಯುಎಇ ದಿರ್ಹಾಮ್ (ಭಾರತೀಯ ರೂ.21,720-26,064) ವೇತನ ಹಾಗೂ ಹೊಸಬರಿಗೆ 850-950 ಯುಎಇ ದಿರ್ಹಾಮ್ (ಭಾರತೀಯ ರೂ.18,462-20,634) ವೇತನ ಇರುತ್ತದೆ.
ಮಾರ್ಬಲ್ ಮೇಸ್ತ್ರೀ (Marble Masons) ಹುದ್ದೆಗೆ 2 ವರ್ಷ ಕ್ಕಿಂತ ಹೆಚ್ಚು ಅನುಭವ ಉಳ್ಳವರಿಗೆ 1000-1200 ಯುಎಇ ದಿರ್ಹಾಮ್ (ಭಾರತೀಯ ರೂ.21,720-26,064) ವೇತನ ಹಾಗೂ ಹೊಸಬರಿಗೆ 850-950 ಯುಎಇ ದಿರ್ಹಾಮ್ (ಭಾರತೀಯ ರೂ.18,462-20,634) ವೇತನ ನೀಡಲಾಗುತ್ತದೆ. 2 ವರ್ಷಕ್ಕಿಂತ ಹೆಚ್ಚು ಅನುಭವ ಉಳ್ಳವರಿಗೆ ವಯೋಮಿತಿ 24 ರಿಂದ 32 ವರ್ಷದೊಳಗಿರಬೇಕು. ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ ವಯೋಮಿತಿ 18 ರಿಂದ 23 ವರ್ಷದೊಳಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7506450851, 9731750800, 9632214436, www.kvtsdc.com ವೆಬ್‍ಸೈಟ್‍ನ್ನು, +918310100754, 080-29753007, kvtsdcora@karnataka.gov.in ಇ-ಮೇಲ್ ವಿಳಾಸಕ್ಕೆ ಸಂಪರ್ಕಿಸಲು ಕೋರಲಾಗಿದೆ.