ಭಾಲಿ: ಪಟ್ಟಣದ ಡೊಂಬರಾಟದ ಓಣಿಯಲ್ಲಿ ಅಕ್ಕನಾಗಮ್ಮನವರ ಜಯಂತಿ ಹಾಗೂ ಬಸವಪಂಚಮಿ ಆಚರಿಸಲಾಯಿತು.
ಸಮಾರಂಭದ ಸಾನಿಧ್ಯ ವಹಿಸಿದ ಹಿರೇಮಠ ಸಂಸ್ಥಾನ ಪರಮಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು, ರೈಲ್ವೆ ಸ್ಟೇಷನ್ ಹತ್ತಿರ ಇರುವ ಡೊಂಬರಾಟದ ಓಣಿಯಲ್ಲಿ ಇರುವ ಜನರು ಅತ್ಯಂತ ಹಿಂದುಳಿದವರು ಆಗಿದ್ದಾರೆ. ಅವರ ಮಕ್ಕಳು ಬೆಳಿಗ್ಗೆ ಎದ್ದು ಭಿಕ್ಷೆ ಬೇಡುತ್ತ, ರಸ್ತೆಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲುಗಳನ್ನು ಆಯ್ದುಕೊಂಡು ಜೀವನ ನಡೆಸುತ್ತಾರೆ.
ಈ ಜನಾಂಗದ ಅಭಿವೃದ್ಧಿಗಾಗಿ ಅವರ ಮಕ್ಕಳನ್ನು ನಾವು ಉಚಿತವಾಗಿ ಶಿಕ್ಷಣ ನೀಡುತ್ತಿದ್ದೇವೆ. ಇವರ ಬೆಳವಣಿಗೆಯೇ ನಿಜಾರ್ಥದಲ್ಲಿ ನಮ್ಮ ದೇಶದ ಮತ್ತು ನಮ್ಮ ಸಮಾಜದ ಬೆಳವಣೆ ಅಡಗಿದೆ. ಬಸವಣ್ಣನವರು ಇಂತಹ ಅತ್ಯಂತ ಹಿಂದುಳಿದ ಜನರನ್ನು ಅಭಿವೃದ್ಧಿಯ ಪಥದಲ್ಲಿ ತಂದು ಅವರಿಗೆ ಮನುಷ್ಯತ್ವದ ಘನಮಹಿಮೆಯನ್ನು ಎತ್ತಿ ತೋರಿಸಿದರು. ಅವರು ಜೀವನದುದ್ದಗಲಕ್ಕೂ ಹಿಂದುಳಿದ ಜನರ ಅಭಿವೃದ್ಧಿಗಾಗಿಯೆ ದುಡಿದರು.
ಅವರ ಲಿಂಗೈಕ್ಯ ದಿನವನ್ನು ಇಂತಹ ಸಮುದಾಯದ ಮಧ್ಯದಲ್ಲಿ ಆಚರಿಸುವುದೆ ಅರ್ಥಪೂರ್ಣ. ಆ ದಿಶೆಯಲ್ಲಿ ಪ್ರತಿವರ್ಷ ನಾವು ಅಕ್ಕನಾಗಮ್ಮ ಜಯಂತಿ ಮತ್ತು ಬಸವಪಂಚಮಿ ಹಾಲು ಕುಡಿಸುವ ಹಬ್ಬವನ್ನಾಗಿ ಅಷ್ಟೇ ಅಲ್ಲದೆ ಈ ಎಲ್ಲ ಮಕ್ಕಳಿಗೆ ಪ್ರಸಾದ ಮಾಡಿಸುವುದು, ಬಟ್ಟೆ ವಿತರಿಸುವು ಮೂಲಕ ಆಚರಣೆ ಮಾಡುತ್ತ ಬಂದಿದ್ದೇವೆ ಎಂದು ನುಡಿದರು. ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಈ ಸಮಾರಂಭದಲ್ಲಿ ಶರಣ ಸಾಹಿತ್ಯ ಚಿಂತಕರಾದ ಶರಣ ವಿಶ್ವರಾಧ್ಯ ಸತ್ಯಂಪೇಟೆ, ಬಸವರಾಜ ಮರೆ, ವಸಂತ ಹುಣಸನಾಳೆ, ಶಂಭುಲಿಂಗ ಕಾಮಣ್ಣ, ಶಾಂತಯ್ಯ ಸ್ವಾಮಿ, ಗಣಪತಿ ಬಾವುಗೆ, ಶಿವಪುತ್ರ ದಾಬಶೆಟ್ಟಿ ಡಾ.ಚನ್ನಬಸವ ಪಟ್ಟದ್ದೇವರು ಪತ್ತಿನ ಸಹಕಾರ ಸಂಘ(ನಿ) ಭಾಲ್ಕಿಯ ಸಿಬ್ಬಂದಿಯವರು ಉಪಸ್ಥಿತರಿದ್ದರು. ಶ್ರೀಮಠದಿಂದ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.