ಶಹಾಪುರ: ಮುದೋಳ ಕ್ಷೇತ್ರದ ಶಾಸಕ ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ಗ್ರಾಮ ಪಂಚಾಯತ ಮಾಜಿ ಅಧ್ಶಕ್ಷ ಚಂದ್ರಶೇಖರ ಹೊಸ್ಮನಿ ಗಂಗನಾಳ ಒತ್ತಾಯಿಸಿದ್ದಾರೆ.
ರಾಜ್ಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಮಾದಿಗ ಸಮುದಾಯದ ದೊಡ್ಡ ಕೊಡುಗೆ ಇದೆ. ಗೋವಿಂದ ಕಾರಜೋಳ ಮಾದಿಗ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಮಾದಿಗ ಸಮುದಾಯಕ್ಕೆ ಬಿಜೆಪಿ ಇದುವರೆಗೂ ಪ್ರಮುಖ ಸ್ಥಾನ ನೀಡಿಲ್ಲ.
ಸಮುದಾಯದ ಅಭಿವೃದ್ಧಿಗಾಗಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ರಾಜ್ಶದ ಬಹುತೇಕ ಸಂದರ್ಭದಲ್ಲಿ ಸಮುದಾಯ ಮುಖ್ಶಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೆ ನಿಂತಿದೆ. ಅಲ್ಲದೆ ಶಾಸಕ ಗೋವಿಂದ ಕಾರಜೋಳ ಅವರು ಬಿಜೆಪಿ ಪಕ್ಷದ ಶಿಸ್ತಿನ ಶಿಪಾಯಿಯಾಗಿದ್ದಾರೆ. ಸಮುದಾಯದ ಅಭಿವ್ರದ್ಧಿ ದ್ರಷ್ಠಿಯಿಂದ ಗೋವಿಂದ ಕಾರಜೋಳ ಅವರಿಗೆ ಉಪಮುಖ್ಶಮಂತ್ರಿ ಮಾಡುವುದು ಅವಶ್ಶವಾಗಿದೆ. ಗೋವಿಂದ ಕಾರಜೋಳ ಅವರಿಗೆ ಉಪಮುಖ್ಶಮಂತ್ರಿ ಮಾಡುವಂತೆ ನೂತನ ಮುಖ್ಶಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಅವರಿಗೆ ಮನವಿ ಮಾಡಿ ಒತ್ತಾಯಿಸಲಾಗುವುದು ಎಂದು ಚಂದ್ರಶೇಖರ ಗಂಗನಾಳ ಹೇಳಿದರು.