ಬೈಕಗಳ ಮೇಲೆ ಸಾರಿಗೆ ಬಸ್ ಪಲ್ಟಿ: ಪವಾಡಸದೃಶವಾಗಿ ಪಾರಾದ ಪ್ರಯಾಣಿಕರು

0
133

ಕಲಬುರಗಿ: ರಸ್ತೆ ಬದಿ ಬೈಕ್ ನಿಲ್ಲಿಸಿಕೊಂಡು ನಿಂತವರ ಮೇಲೆ ಸಾರಿಗೆ ಬಸ್ ಪಲ್ಟಿಯಾದ ಘಟನೆ ಆಳಂದ ರಸ್ತೆಯ ಕಡಗಂಚಿ ಕೇಂದ್ರಿಯ ವಿಶ್ವ ವಿದ್ಯಾಲಯದ ಬಳಿ ನಡೆದಿದೆ.

Contact Your\'s Advertisement; 9902492681

ಕಲಬುರಗಿಯಿಂದ ಸುಮಾರು 20 ಜನ ಪ್ರಯಾಣಿಕರನ್ನು ಹೊತ್ತು ಆಳಂದ ಕಡೆಗೆ ಹೊರಟಿದ್ದ ಬಸ್ ಚಾಲಕ‌ನ ನಿಯಂತ್ರಣ ತಪ್ಪಿ ರಸ್ತೆ ಬದಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದವರ ಮೇಲೆ ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ಬೈಕ್ ಸವಾರನ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಅದೃಷ್ಟವಶಾತ್ ಪವಾಡಸದೃಶ ರೀತಿಯಲ್ಲಿ ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರು ಕ್ಷೇಮವಾಗಿ ಹೊರಬಂದಿದ್ದಾರೆ. ಇನ್ನು ಬಸ್ ಪಲ್ಟಿಯಾಗಿದ್ದರಿಂದ ತುರ್ತು ನಿರ್ಗಮನ ಹಾಗೂ ಕಿಟಕಿಯ ಗ್ಲಾಸ್ ಒಡೆದು ಪ್ರಯಾಣಿಕರು ಹೊರಗೆ ಬಂದಿದ್ದಾರೆ. ಇನ್ನು ಎರಡು ಬೈಕ್ಗಳು ನುಜ್ಜುಗುಜ್ಜಾಗಿದ್ದು, ಗಾಯಾಳು ಯುವಕನನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here