ಕಲಬುರಗಿ : ಹೊರವಲಯದಲ್ಲಿರುವ ಶ್ರೀನಿವಾಸ ಸರಡಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾದ ಎಸ್ . ಎಸ್ . ಪಾಟೀಲ ಅವರ ವಯೋನಿವೃತ್ತಿ ನಿಮಿತ್ಯ“ ಬಿಸಿಲೂರಿನ ಹಸಿರು ” ಕೃತಿ ಲೋಕಾರ್ಪಣೆ ಮತ್ತು ಅಭಿನಂದನಾ ಸಮಾರಂಭ ಕಾರ್ಯಕ್ರಮ ಆ.8 ರಂದು ಬೆಳಿಗ್ಗೆ 11-00ಕ್ಕೆ ಹಮ್ಮಿಕೊಳ್ಳಲಾಗಿದೆ.
ಶ್ರೀನಿವಾಸ ಸರಡಗಿಯ ಶ್ರೀ ಚಿಕ್ಕವೀರ ಮಠ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಷ.ಬ್ರ . ಶ್ರೀ ಡಾ . ರೇವಣಸಿದ್ಧ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮೂಡ ಉದ್ಘಾಟಿಸಲಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ . ದಯಾನಂದ ಅಗಸರ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.
ಶ್ರೀನಿವಾಸ ಸರಡಗಿಯ ಗ್ರಾ.ಪಂ ಅಧ್ಯಕ್ಷರಾದ ಪ್ರವೀಣ ಆಡೆ,ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಿವಶರಣಪ್ಪ ಮುಳೆಗಾಂವ,
ಕನ್ನಡಪ್ರಭ ದಿನಪತ್ರಿಕೆಯ ಪ್ರಧಾನ ವರದಿಗಾರರಾದ ಶೇಷಮೂರ್ತಿ ಅವಧಾನಿ,ಗು.ವಿ.ಕ ಇಂಗ್ಲೀಷ ಅಧ್ಯಯನ ವಿಭಾಗದ ಮುಖ್ಯಸ್ಥರಾದ ನಿಂಗಣ್ಣ ಟಿ,ನಿವೃತ್ತ ಪ್ರಾಂಶುಪಾಲರಾದ ಪ್ರೊ . ವೈಜನಾಥ ಕೋಳಾರ,ನಿವೃತ್ತ ಪ್ರಾಧ್ಯಾಪಕರಾದ ಪ್ರೊ . ಎಸ್.ಎಲ್ . ಪಾಟೀಲ, ಖ್ಯಾತ ನ್ಯಾಯವಾದಿಗಳಾದ ಹಣಮಂತರಾಯ ಅಟ್ಟೂರ, ಕಲಬುರಗಿಯ ಗುರೂಜಿ ಡಿಗ್ರಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಕಲ್ಯಾಣಕುಮಾರ ಶೀಲವಂತ , MBBS , MS ( Ortho ) ಖ್ಯಾತ ವೈದ್ಯರಾದ ಡಾ.ಪ್ರವೀಣ ಕಡಾಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶ್ರೀನಿವಾಸ ಸರಡಗಿಯ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಶೇಖರಯ್ಯ ರುಮಾಲ ಅಧ್ಯಕ್ಷತೆ ಸ್ಥಾನ ವಹಿಸಲಿದ್ದಾರೆ.
ನಿವೃತ್ತ ಪ್ರಾಂಶುಪಾಲರಾದ ಕೆ . ಶರಣಪ್ಪ, ಜಿ.ಶ.ಸಾ.ಪ.ಅಧ್ಯಕ್ಷರಾದ ಡಾ . ಮಲ್ಲಿಕಾರ್ಜುನ ವಡ್ಡನಕೇರಿ ,ನಿವೃತ್ತ ಪ್ರಾಂಶುಪಾಲರಾದ ಅನಂತರಾವ ಕುಲಕರ್ಣಿ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಸಂತೋಷ ಆಡೆ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಬಾಬುರಾವ ರಾಠೋಡ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಯಶೋಧಾ ರಾಜು ಪವಾರ ಗೌರವ ಉಪಸ್ಥಿತಿ ಸ್ಥಾನ ವಹಿಸಲಿದ್ದಾರೆ.
ಸ.ಪ.ಪೂ.ಕಾಲೇಜು , ಶ್ರೀನಿವಾಸ ಸರಡಗಿಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಸಂಘದ ಸಲಹೆಗಾರರಾದ ರಾಜೇಂದ್ರ ರಂಗದಳ ಅವರು ಭಾಗವಸಲಿದ್ದಾರೆ.