ಪ್ರಶಸ್ತಿ ಪುರಸ್ಕಾರಗಳು ಮನುಷ್ಯನ ಜವಾಬ್ದಾರಿ ಹೆಚ್ಚಿಸುತ್ತವೆ: ಖಾಸಾ ಶ್ರೀಗಳು

0
47

ಶಹಾಪುರ: ಸಾಧನೆ ಗುರುತಿಸಿ ಪ್ರಶಸ್ತಿ ನೀಡುವುದು ಸಹಜ ಆದರೆ ಪ್ರಶಸ್ತಿ ಬಂದ ಮೇಲೆ ಮತ್ತಷ್ಟು ಮನುಷ್ಯನ ಜವಾಬ್ದಾರಿ ಹೆಚ್ಚಾಗುತ್ತದೆ ಎಂದು ಗುರುಮಠಕಲ್ನ ಖಾಸಾ ಮಠದ ಶ್ರೀಗಳಾದ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಯಾದಗಿರಿ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿರುವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ರಾಜ್ಯ ಮಟ್ಟದ ಹೂಗಾರ್ ಸ್ಮಾರಕ ಮಾಧ್ಯಮ ಪ್ರಶಸ್ತಿ ಪುರಸ್ಕೃತರಾದ ವಿಜಯವಾಣಿ ಜಿಲ್ಲಾ ವರದಿಗಾರರಾದ ಲಕ್ಷ್ಮೀಕಾಂತ ಕುಲಕರ್ಣಿ,ಕಲ್ಯಾಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ ರಾಯಚೂರು ಜಿಲ್ಲಾ ವಿಜಯವಾಣಿ ವರದಿಗಾರರಾದ ಶ್ರೀ ಶಿವಮೂರ್ತಿ ಹಿರೇಮಠ್ ಹಾಗೂ ನ್ಯೂಸ್ 18 ಯಾದಗಿರಿ ಜಿಲ್ಲಾ ವರದಿಗಾರರಾದ ಶ್ರೀ ಚನ್ನಬಸವಣ್ಣ ಅವರಿಗೆ ಸನ್ಮಾನಿಸಿ ಸತ್ಕರಿಸಲಾಯಿತು.

ಈ ಕಾರ್ಯಕ್ರಮದ ವೇದಿಕೆಯ ಮೇಲೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಎಂ. ಜಗದೀಶ್ ಉಪಾಧ್ಯಕ್ಷರಾದ ಇಂದೂಧರ್ ಸಿನ್ನೂರು ,ಸೋಮಶೇಖರ ಮಣ್ಣೂರು ,ಪತ್ರಕರ್ತರಾದ ಅನಿಲ್ ದೇಶಪಾಂಡೆ ಎಸ್. ಎಸ್. ಮಠ, ಮಲ್ಲಪ್ಪ ಸಂಕೀನ್, ಮಹೇಶ್ ಕಲಾಲ್, ವೈಜನಾಥ ಹಿರೇಮಠ, ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here