19 ರಂದು ‘ರಾಜಗಂಭೀರ’ ಗ್ರಂಥ ಬಿಡುಗಡೆ

0
19

ಸೇಡಂ: ಮಾಜಿ ಶಾಸಕರು, ಶಿಕ್ಷಣ ಪ್ರೇಮಿ ಡಾ.ನಾಗರೆಡ್ಡಿ ಪಾಟೀಲ ಅವರ ಅಮೃತ ಮಹೋತ್ಸವ ಮತ್ತು ‘ರಾಜಗಂಭೀರ’ ಅಭಿನಂದನಾ ಗ್ರಂಥ ಲೋಕಾರ್ಪಣೆ ಸಮಾರಂಭವು ಆ.೧೯ ರಂದು ಬೆಳಿಗ್ಗೆ ನಗರದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪ್ರಾಂಗಣದಲ್ಲಿ ಆಯೋಜಿಸಲಾಗಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ.ನಾಗರೆಡ್ಡಿ ಪಾಟೀಲರ ಅಭಿನಂದನ ಸಮಿತಿಯ ಗೌರವಾಧ್ಯಕ್ಷರಾದ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮೀಜಿಗಳು, ನಾಲವಾರದ ಪೂಜ್ಯ ಡಾ. ಸಿದ್ದತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಶಿವಶಂಕರ ಮಠದ ಪೂಜ್ಯ ಶ್ರೀ ಶಿವಶಂಕರ ಶಿವಚಾರ್ಯರು, ಹಾಲಪಯ್ಯ ವಿರಕ್ತ ಮಠದ ಪೂಜ್ಯ ಶ್ರೀ ಪಂಚಾಕ್ಷರ ಸ್ವಾಮೀಜಿ ನೇತೃತ್ವ ವಹಿಸುವರು. ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ ಅವರ ಕುರಿತು ಪತ್ರಕರ್ತ-ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರು ಸಂಪಾದಿಸಿರುವ ‘ರಾಜಗಂಭೀರ’ ಅಭಿನಂದನ ಗ್ರಂಥವನ್ನು ಮಾಜಿ ಸಚಿವ ಹಾಲಿ ಶಾಸಕರಾದ ಎಚ್.ಕೆ.ಪಾಟೀಲ ಗದಗ ಬಿಡುಗಡೆ ಮಾಡುವರು. ಕಾರ್ಯಕ್ರಮವನ್ನು ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ರಾಮಲಿಂಗಾರೆಡ್ಡಿ ಬೆಂಗಳೂರು ಉದ್ಘಾಟಿಸುವರು. ಮಾಜಿ ಉಪಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರೂ ಆಗಿರುವ ಅಭಿನಂದನ ಸಮಿತಿಯ ಅಧ್ಯಕ್ಷರಾದ ಡಾ.ಬಸವರಾಜ ಪಾಟೀಲ ಸೇಡಂ ಅವರು ಅಭಿನಂದನಾ ನುಡಿಗಳಾಡುವರು.

ಲೋಕಸಭಾ ಸದಸ್ಯರಾದ ಡಾ.ಉಮೇಶ ಜಾಧವ, ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ, ಸಿಂಧನೂರು ಶಾಸಕ ವೆಂಕಟರಾವ ನಾಡಗೌಡ, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಕೊಡಂಗಲ್ ಶಾಸಕ ಪಟ್ನಂ ನರೇಂದ್ರರೆಡ್ಡಿ, ಯಾದಗಿರಿಯ ಡಾ.ಇಂದೂಧರ ಮಠ, ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ, ಮಾಜಿ ಸಚಿವ ಎಸ್.ಕೆ.ಕಾಂತಾ, ಚಿತ್ತಾಪುರ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ವಿದ್ಯಾಭಾರತಿಯ ಪ್ರಮುಖರಾದ ಜಿ.ಆರ್.ಜಗದೀಶ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಅವರು ‘ರಾಜಗಂಭೀರ’ ಗ್ರಂಥ ಕುರಿತು ಮಾತನಾಡುವರು ಎಂದು ಸ್ವಾಮಿಜಿ ವಿವರಿಸಿದರು.

ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹಾಗೂ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ನೇತೃತ್ವದಲ್ಲಿ ಈ ಸಮಾರಂಭ ನಡೆಯಲಿದ್ದು, ಸೇಡಂನ ನೆಲದ ಶ್ರೀ ಕೊ.ಬ.ಭಾ.ಶಿ.ಸಮಿತಿ, ಲಾಯನ್ಸ್ ಕ್ಲಬ್, ಕೃಷಿಕ ಸಮಾಜ, ಸೇಡಂ ಉತ್ಸವ ಸಮಿತಿ, ನಾಗರಿಕ ಸಮಿತಿ, ಪರಿವಾರ ಸಮಿತಿ, ರೆಡ್ಡಿ ಸಮಾಜ, ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ, ಸ್ವಾಮಿ ವಿವೇಕಾನಂದ ಶಿಕ್ಷಣ ಸಮಿತಿ, ಕಸಾಪ, ನೃಪತುಂಗ ಅಧ್ಯಯನ ಸಂಸ್ಥೆ, ರಾಷ್ಟ್ರಕೂಟ ಶಿಕ್ಷಣ ಸಂಸ್ಥೆ, ಶರಣ ಸಾಹಿತ್ಯ ಪರಿಷತ್ತು, ಬಸವ ಕೇಂದ್ರ, ಮಕ್ಕಳ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಸಹಕಾರವಿದ್ದು, ಅಂದು ಸುಮಾರು ಮೂರು ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಭಿನಂದನಾ ಸಮಿತಿ ಪದಾಧಿಕಾರಿಗಳಾದ ಕಲ್ಯಾಣಪ್ಪ ಪಾಟೀಲ ಮಳಖೇಡ, ಮುರಿಗೆಪ್ಪ ಕೊಳಕೂರ, ನಾಗೇಶ್ವರರಾವ ಮಾಲಿಪಾಟೀಲ, ಡಾ.ಸದಾನಂದ ಬೂದಿ, ಶರಣರೆಡ್ಡಿ ಜಿಲ್ಲೇಡಪಲ್ಲಿ, ಮದನಗೋಪಾಲ ಹೆಡ್ಡಾ, ಅನಂತಯ್ಯ ಮುಸ್ತಾಜರ, ಸಂಪಾದಕ ಮಹಿಪಾಲರೆಡ್ಡಿ ಮುನ್ನೂರ್, ಉಪಸಂಪಾದಕ ಶರಣಗೌಡ ಎಸ್.ಪಾಟೀಲ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here