ಶರಣರ ವಚನಗಳು ಸವ೯ಕಾಲಿಕ: ಬಸವರಾಜ ಮತ್ತಿಮೂಡ

0
19

ಕಲಬುರಗಿ:ಬಸವಾದಿ ಶರಣರ ವಚನಗಳು ಹಾಗೂ ಜನಪದ ಹಾಡು ಗಳು  ಸವ೯ಕಾಲಿಕ ಪ್ರಸ್ತುತವಾಗಿವೆ. ಇವು ಜಾತಿ, ಮತ, ಪಂಥ ಎನ್ನದೇ ಸವ೯ಕಾಲಿಕ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಬಸವರಾಜ ಮತ್ತಿಮೂಡ ಹೇಳಿದರು.

ನಗರದ ಕಲಾ ಮಂಡಳದಲ್ಲಿ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡುತ್ತಿದ್ದರು.

Contact Your\'s Advertisement; 9902492681

ಮುಂದುವರೆದು ಮಾತನಾಡಿದ ಅವರು,ಸಂಗೀತ ಆಲಿಸುವುದರಿಂದ ಏಕಾಗ್ರತೆ ಮೂಡಿ ಮನಸ್ಸು ಪ್ರಫುಲ್ಲ ಗೊಳ್ಳುತ್ತದೆ ಮತ್ತು ಚೈತನ್ಯ ಭರಿತವಾಗುತ್ತದೆ. ಸಂಗೀತದಲ್ಲಿ ಪ್ರತಿಯೊಬ್ಬರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದಲ್ಲದೇ ಮಕ್ಕಳಿಗೆ ಸಂಗೀತದಲ್ಲಿ ಆಸಕ್ತಿ  ಮೂಡುವಂತೆ ಮಾಡಬೇಕಾಗಿದೆ ಎಂದು ಹೇಳಿದರು.

ಸಂಗೀತ ದಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ಮತ್ತು ಸಂತಸ ತಂದುಕೊಡುತ್ತದೆ. ಅಲ್ಲದೆ ಸಂಗೀತವು ರೋಗಗಳನ್ನು ನಿವಾರಿಸುವ ಶಕ್ತಿ ಹೊಂದಿದೆ ಎಂದು ಬಿಜೆಪಿ ಎಸ್ ಸಿ ಮೂಚಾ೯ ರಾಜ್ಯ ಉಪಾಧ್ಯಕ್ಷರಾದ ಡಾ ಅಂಬಾರಾಯ ಅಷ್ಟಗಿ ಹೇಳಿದರು.

ಸುಭಾಶ್ಚಂದ್ರ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷರಾದ ಶರಣಗೌಡ ಪಾಟೀಲ ಪಾಳಾ ಮಾತನಾಡಿ, ನಮ್ಮ ಟ್ರಸ್ಟ್ ವತಿಯಿಂದ  ವಿವಿಧ ಕಲಾಪ್ರಕಾರಗಳ ಜತೆಗೆ ವಚನ ಗಾಯನ, ಸಂಗೀತ ಸುಧೆ ಮತ್ತು ದಾಸ ಸಾಹಿತ್ಯದ ಹಾಡುಗಳ ಕಾರ್ಯಕ್ರಮ ಏರ್ಪಡಿಸುವುದರ ಮೂಲಕ ಶರಣರ  ದಾಸರ ತತ್ವಗಳನ್ನು ಸಮಾಜಕ್ಕೆ ಮುಟ್ಟಿಸುವಂತ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕಲಾವಿದರಾದ ಪವಿತ್ರಾ ವಿಶ್ವನಾಥ ರಾಜನಾಳ, ಕು . ಪ್ರತೀಕ್ಷಾ ಬಾಬುರಾವ ಯಡ್ರಾಮಿ  ಭರತ ನಾಟ್ಯ ಮಾಡಿದರು. ಗುರುಶಾಂತಯ್ಯ ಸ್ಥಾವರಮಠ.  ಸೈದಪ್ಪಾ ಸಪ್ಪಣಗೋಳ, ಅಣ್ಣಾರಾವ ಶೆಳ್ಳಗಿ ಮತ್ತಿಮಡು, ಚಾಮರಾಜ್ ದೊಡ್ಮನಿ, ಜಗನ್ನಾಥ್  ಪಾಳಾ, ಪ್ರಶಾಂತ್ ಕಂಬಾರ್, ವಿಜಯಲಕ್ಷ್ಮಿ ಕೆಂಗನಾಳ, ಚೇತನ್ ಬೀದಿಮನಿ, ಸೂರ್ಯಕಾಂತ್ ಪೂಜಾರಿ, ತೋಟಯ್ಯ ಶಾಸ್ತ್ರಿ, ಶ್ರೀಶೈಲ್ ಪಾಟೀಲ್, ಚೇತನ್ ಕೋಬಾಳ, ನಾಗೇಶ್ರೀ ಕೋಣೆ, ರವಿ ಆಳಂದ, ಪ್ರಶಾಂತ್ ಗೋಲ್ಡ್ ಸ್ಮಿತ್, ರವಿ ಸ್ವಾಮಿ ಗೋಟೂರ್, ನಿರ್ಮಲ ಕೋಣಿ, ಮೌನೇಶ್ ಪಂಚಾಳ, ವೀರಭದ್ರಯ್ಯ ಸ್ಥಾವರಮಠ, ಶಿವಯೋಗಿ ಭಜಂತ್ರಿ  ತಂಡ ದಿಂದ ಸಂಗೀತ ಕಾರ್ಯಕ್ರಮದಲ್ಲಿ 25 ಕ್ಕೂ ಹೆಚ್ಚು  ಕಲಾವಿದರು ಭಾಗವಹಿಸಿದರು.

ಹರ್ಷವರ್ಧನ್ ಗೂಗಳೆ,ಕೆ ಹೆಚ್ ಚನ್ನೂರ, ದತ್ತಪ್ಪ್ ಸಾಗನೂರ, ವಿನೋದ್ ಪಾಟೀಲ,ರೆಡ್ಡಿ, ರಾಜು, ಜಿ ಸಿ ಪಾಟೀಲ ಎಸ್ ಎಲ್ ಪಾಟೀಲ, ಎಸ್ ಬಿ ಪಾಟೀಲ, ಮಾಜಿ, ವಿ ಅಲ್ಲೂರ, ಬಿ ಎಚ್ ನಿರಗುಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಡಾ . ಶರಣಬಸಪ್ಪ ವಡ್ಡನಕೇರಿ ಕಾರ್ಯಕ್ರಮ ನಿರೂಪಿಸಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here