ಕಮಲಾಪುರದಲ್ಲಿ ದೇಶಭಕ್ತಿಗೆ ಹೊಸ ನಾಂದಿ ಹಾಡಿದ ಬೊಮ್ಮನ ಕುಟುಂಬ: ಪ್ರೊ. ಯಶವಂತರಾಯ ಅಷ್ಠಗಿ

0
122

ಕಮಲಾಪುರ : ಭಾರತಾಂಬೆಯ ವರಪುತ್ರರಾದ ಮಹಾತ್ಮ ಗಾಂಧಿ, ಸುಭಾಶ್ಚಂದ್ರ ಭೋಸ್, ಭಗತಸಿಂಗ್, ಬಿಪಿನ ಚಂದ್ರಪಾಲ್, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಫಲದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ, ಅಂತಹ ಮಹನೀಯರ ತತ್ವಾದರ್ಶಗಳನ್ನು ನಾವೆಲ್ಲರೂ ನಿಜ ಜೀವನದಲ್ಲಿ ಅಳವಡಿಸೊಕೊಳ್ಳಬೇಕು. ಹಾಗೆಯೇ ಕಮಲಾಪುರದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ 70×50 ಅಡಿಯ ರಾಷ್ಟ್ರಧ್ವಜ ನಿರ್ಮಿಸಿ ಕಲ್ಲ್ಯಾಣ ಕರ್ನಾಟಕ ಭಾಗದಲ್ಲಿ ಬೊಮ್ಮನ ಪರಿವಾರ ದೇಶಪ್ರೇಮಕ್ಕೆ ಹೊಸ ನಾಂದಿ ಹಾಡಿದೆ ಎಂದು‌ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ. ಯಶವಂತರಾಯ ಅಷ್ಠಗಿ ಅಭಿಪ್ರಾಯಪಟ್ಟರು.

ಇತ್ತೀಚಿಗೆ ಕಮಲಾಪುರ ತಾಲೂಕಿನ ಭೀಮನಾಳ ಕ್ರಾಸ್ – ಕುದುರೆಮುಖ ಬಳಿ ನಿರ್ಮಿಸಲಾದ ಜಗತ್ತಿನ ಎರಡನೇ ಅತಿ ದೊಡ್ಡ ರಾಷ್ಟ್ರಧ್ವಜದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಂಬಾಳೆ ಖ್ಯಾತಿಯ ಕಮಲಾಪುರಕ್ಕೆ ಈ ರಾಷ್ಟ್ರಧ್ವಜ ವೀಕ್ಷಿಸಲು ದೂರದ ದುಬೈ, ಸೇರಿದಂತೆ ನೆರೆಯ ರಾಜ್ಯ, ಜಿಲ್ಲೆ ಮತ್ತು ತಾಲೂಕು ಸೇರಿ ಸುಮಾರು 40 ಸಾವಿರ ಜನರು ರಾಷ್ಟ್ರಧ್ವಜ ವೀಕ್ಷಿಸಿ ಎಲ್ಲರೂ ಬೊಮ್ಮನ ಕುಟುಂಬದ ರಾಷ್ಟ್ರಪ್ರೇಮಕ್ಕೆ ಶ್ಲಾಘಿಸಿದ್ದಾರೆ ಎಂದು ಪ್ರೊ. ಅಷ್ಠಗಿ ಬಣ್ಣಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷರಾದ ರಾಜಕುಮಾರ ಕೋಟೆ, ರೇವಪ್ಪ ಬೊಮ್ಮನ, ದಾಸಿಮಯ್ಯ ವಡ್ಡನಕೇರಿ, ಪತ್ರಕರ್ತರಾದ ಸುರೇಶ ಲೇಂಗಟಿ, ಮಲ್ಲಿಕಾರ್ಜುನ ಮೂಲಗೆ, ಯುವ ಮುಖಂಡರಾದ ವಿನೋದಕುಮಾರ ಬೊಮ್ಮನ, ಶಿವಲೀಲಾ ಮೂಲಗೆ, ಶಿವಕುಮಾರ್ ಮುತ್ತಿನ, ಶಿವಕುಮಾರ್ ಬೊಮ್ಮನ, ಶರಣಕುಮಾರ ಬೊಮ್ಮನ, ಮಹೇಶ ಪಾಟೀಲ್, ರೀನಾ, ವೃತಿ ಬೊಮ್ಮನ, ಮಹಾದೇವಿ ಶಟಗಾರ, ಸುರೇಖಾ ಮುತ್ತಿನ, ಜಯಲಕ್ಷ್ಮಿ ಪಾಟೀಲ್, ಮಂಜುನಾಥ ಡಬರಾಬಾದ, ಅನೀಲಕುಮಾರ ಬಿರಾದಾರ, ಗಣೇಶ ಕುರಿಕೋಟಾ ಸೇರಿದಂತೆ ಇತರಿದ್ದರು.

ಪ್ರತಿಯೋಬ್ಬರಲ್ಲೂ ರಾಷ್ಟ್ರಪ್ರೇಮ ಮೂಡಿಸುವ ಕಾರ್ಯಕ್ರಮ ಬೊಮ್ಮನ ಪರಿವಾರವು ಕಮಲಾಪುರದಲ್ಲಿ ಹಮ್ಮಿಕೊಂಡಿರುವುದು ಈ ಭಾಗಕ್ಕೆ ಹೆಮ್ಮೆಯ ಸಂಗತಿಯಾಗಿದೆ. -ರಾಜಕುಮಾರ ಕೋಟೆ, ಉಪಾಧ್ಯಕ್ಷರು, ಎಪಿಎಂಸಿ, ಕಲಬುರಗಿ / ಸುರೇಶ್ ಲೇಂಗಟಿ ಕಮಲಾಪುರ ಕಸಾಪ ತಾಲೂಕು ಗೌರವ ಕಾರ್ಯದರ್ಶಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here