ಐಸಿಯುನಲ್ಲಿ ರಾಜ್ಯ ಸರಕಾರ, ಬಿ.ಎಸ್.ವೈ ಸಿಎಂ ಎಂದು ಘೋಷಣೆ ಮಾಡಲು ಎಂ. ಬಿ. ಪಾಟೀಲ್ ಸವಾಲ್!

0
22

ಮೊಟ್ಟೆ ಎಸೆಯಲು ಬಿಜೆಪಿ ಕುಮ್ಮಕ್ಕು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಲು ತೆರಳಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು, ಇದಕ್ಕೆ ಬಿಜೆಪಿ ಪ್ರಾಯೋಜಕತ್ವ ನೀಡಿದೆ. ಮೊಟ್ಟೆ ಒಗೆಯುವುದು ದೊಡ್ಡ ಕೆಲಸವಲ್ಲ. ನಮಗೂ ಮೊಟ್ಟೆ ಎಸೆಯೋಕ್ಕೆ ಬರೋದಿಲ್ವಾ, ಆದರೆ ನಾವು ಕೀಳು ಮಟ್ಟದ ರಾಜಕಾರಣಕ್ಕೆ ಕೈಹಾಕುವುದಿಲ್ಲ. ಇಂತಹ ಚಿಲ್ಲರೆ ಕೆಲಸ ಯಾರು ಮಾಡಬಾರದು. ಜನ ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ. ಅದನ್ನು ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಸಿದ್ದರಾಮಯ್ಯ ಅವರ ಜನ್ಮದಿನ ಹಾಗೂ ಕಾಂಗ್ರೆಸ್ ಸ್ವಾತಂತ್ರ್ಯ ನಡೆಯಲ್ಲಿ ಜನಸಾಗರ ಕಂಡು ಬಿಜೆಪಿಗರಿಗೆ ನಡುಕ ಹುಟ್ಟಿದೆ ಎಂದರು

ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರನ್ನು ಉಪಯೋಗಿಸಿಕೊಳ್ಳೊದಕ್ಕೆ ಬಿಜೆಪಿ ಮುಂದಾಗಿದೆ. ಇದರಿಂದ ಅವರಿಗೇನು ಲಾಭವಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ ಪಾಟೀಲ್ ಅವರು ಲೇವಡಿ ಮಾಡಿದರು.

Contact Your\'s Advertisement; 9902492681

ಶುಕ್ರವಾರ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪನವರನ್ನು ವಯಸ್ಸಿನ ನೆಪವಡ್ಡಿ ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಆದರೆ, ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಸ್ಥಾನ ನೀಡುವ ಮೂಲಕ ಅವರ ಮೇಲೆ ಇದೀಗ ಬಿಜೆಪಿಗೆ ವಿಶೇಷ ಗೌರವ ಬಂದಿದೆ. ಬಿಜೆಪಿ ಸದ್ಯ ಐಸಿಯುನಲ್ಲಿ ಆಕ್ಸಿಜನ್ ಮೇಲಿದೆ. ಯಡಿಯೂರಪ್ಪ ಮೂಲಕ ಆಕ್ಸಿಜನ್ ಕೋಡೊದಕ್ಕೆ ಮುಂದಾಗಿದೆ. ಅವರ ಮೇಲೆ ಅಷ್ಟು ಗೌರವ ಇದ್ದರೆ ಮುಖ್ಯಮಂತ್ರಿ ಎಂದು ಘೋಷಣೆ ಮಾಡಲಿ ಎಂದ ಅವರು, ಒಂದು ವೇಳೆ ಕಾಳಜಿವಿದ್ದರೆ ಅವರ ಮಗ ವಿಜಯೇಂದ್ರಗೆ ಯಾವುದಾದರೂ ಮಹತ್ವದ ಸ್ಥಾನ ಕಲ್ಪಿಸಲಿ ಎಂದು ಸವಾಲ್ ಹಾಕಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ ಎತ್ತ ನಡಿಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಸಂಪುಟದ ಸದಸ್ಯರ ಮೇಲೆ ಯಾವುದೇ ಹಿಡಿತ ಇಲ್ಲ. ಇದಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಬೊಮ್ಮಾಯಿ ಸರ್ಕಾರ ಆಡಳಿತ ನಡೆಯುತ್ತಿಲ್ಲ. ಸುಮ್ಮನೇ ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಹೇಳಿರುವುದೇ ಸಾಕ್ಷಿಯಾಗಿದೆ ಎಂದು ಎಂ.ಬಿ. ಪಾಟೀಲ್ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಸರಕಾರದ ಯಾವುದೇ ಕಾಮಗಾರಿಯ ಕೆಲಸವಾಗಬೇಕಾದರೂ ೪೦% ಕಮಿಷನ್ ನೀಡಬೇಕಾಗಿದೆ. ಇದೊಂದು ಭ್ರಷ್ಟಾಚಾರದ ಸರಕಾರ. ೪೦% ಕಮಿಷನ್ ಕುರಿತು ರಾಜ್ಯ ಸರಕಾರದ ವಿರುದ್ದ ಗುತ್ತಿಗೆದಾರರು ಪ್ರಧಾನಿ ಮೋದಿಗೆ ಅವರಿಗೆ ಪತ್ರ ಬರೆದರು ಸಹ ಕರ್ನಾಟಕದಲ್ಲಿರುವ ಭ್ರಷ್ಟ ಸಚಿವರ ಮೇಲೆ ಯಾಕೆ ಐಟಿ, ಸಿಬಿಐ, ಇಡಿ ದಾಳಿ ಆಗಿಲ್ಲ ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸ ಮಾಡಿಲ್ಲ. ಹಿಂದೂ ಮುಸ್ಲಿಂರನ್ನ ವಿಭಜನೆ ಮಾಡುವ ಕೆಲಸ ಬಿಜೆಪಿ ಮಾಡ್ತಿದೆ. ಹೀಗಾಗಿ, ಚುನಾವಣೆಯಲ್ಲಿ ೪೦ ರಿಂದ ೫೦ ಸೀಟ್ ಗೆ ಸಿಮಿತವಾಗಲಿದೆ. ಈ ಸರಕಾರವನ್ನು ಕಿತ್ತೋಗೆಯಲು ಜನ ನಿರ್ಧಾರ ಮಾಡಿದ್ದಾರೆ. ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರಬೇಕು ಎಂದು ಜನ ಬಯಸುತ್ತಿದ್ದಾರೆ ಎಂದು ಪಾಟೀಲ್ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಎರಡೂವರೆ ಲಕ್ಷ ಕೋಟಿ ಇದ್ದ ಸಾಲ ೫ ಲಕ್ಷ ಕೋಟಿಗೆ ಏರಿಕೆ ಆಗಿದೆ. ಒಂದೆಡೆ ಸರಕಾರದಲ್ಲಿ ಸಚಿವರು ಲೂಟಿಗಿಳಿದರೆ ಜಿ.ಎಸ್.ಟಿ ಬಡವರನ್ನು ಲೂಟಿ ಮಾಡುತ್ತಿದೆ. ಇದರಿಂದ ಜನ ಬೇಸತ್ತು ಹೋಗಿದ್ದು, ಯಾವಾಗ ಚುನಾವಣೆ ಬರುವುದು ಎಂಬುದನ್ನು ಕಾದು ನೋಡುತ್ತಿದ್ದಾರೆ. ಹೀಗಾಗಿ ೨೦೨೩ರಲ್ಲಿ ಕಾಂಗ್ರೆಸ್ ೧೫೦ ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬಂದು ಸರ್ವ ಸಮುದಾಯಗಳ ಹಿತ ಕಾಪಾಡಲಿದೆ ಎಂದರು.

ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪತ್ರಕರ್ತರ ಪ್ರೆಶ್ನೆಗೆ ಉತ್ತರಿಸಿದ ಎಂ.ಬಿ ಪಾಟೀಲ್, ಕಾಂಗ್ರೆಸ್ ಪಕ್ಷ ಮೊದಲು ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಗಮನ ಹರಸಿದ್ದು, ಚುನಾವಣೆಯಲ್ಲಿ ೧೧೫-೧೩೦ ಸ್ಥಾನ ಪಡೆದ ಬಳಿಕವಷ್ಟೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಯಾರೆಂದು ತೀರ್ಮಾನಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್, ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕಿ ಖನೀಜಾ ಫಾತೀಮಾ, ಮಾಜಿ ಶಾಸಕ ಬಿ.ಆರ್. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಮುಂತಾದವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here