ಜಿಲ್ಲಾ ಮಟ್ಟದ ಡಿ. ದೇವರಾಜ ಅರಸು ಪ್ರಶಸ್ತಿಗೆ ಡಾ. ಚಿ.ಸಿ. ನಿಂಗಣ್ಣ ಆಯ್ಕೆ

0
8

ಕಲಬುರಗಿ: 2022-23ನೇ ಸಾಲಿನ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿರುವ ವ್ಯಕ್ತಿ/ಸಂಘ ಸಂಸ್ಥೆಗಳಿಗೆ ನೀಡುವ ಜಿಲ್ಲಾ ಮಟ್ಟದ ಡಿ. ದೇವರಾಜ ಅರಸು ಪ್ರಶಸ್ತಿಗೆ ಪ್ರೊಫೆಸರ್, ಸಾಹಿತಿ ಹಾಗೂ ಸಮಾಜ ಸೇವಕರಾದ ಡಾ. ಚಿ.ಸಿ. ನಿಂಗಣ್ಣ ಅವರು ಆಯ್ಕೆಯಾಗಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರ ನೇತೃತ್ವದಲ್ಲಿ ನಡೆದ ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಡಾ. ಚಿ.ಸಿ. ನಿಂಗಣ್ಣ ಅವರನ್ನು ಆಯ್ಕೆ ಮಾಡಲಾಯಿತು.

Contact Your\'s Advertisement; 9902492681

ಈ ಮೂಲಕ ಜಿಲ್ಲಾಮಟ್ಟದ ಡಿ. ದೇವರಾಜ ಅರಸು ಅವರ ಹೆಸರಿನ ಪ್ರಥಮ ಪ್ರಶಸ್ತಿಯು ಡಾ. ಚಿ.ಸಿ. ನಿಂಗಣ್ಣ ಅವರಿಗೆ ಒಲಿದಿದೆ.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ್ ತೆಗ್ಗೆಳ್ಳಿ, ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ವೆಂಕಟೇಶ್ ಯಾದವ್, ಸದಸ್ಯರಾದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶುಭಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ.ಜಿ.ಬಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಹಿಮೂದ್ ಇನ್ನಿತರರು ಹಾಜರಿದ್ದರು.

ಡಾ. ಚಿ.ಸಿ. ನಿಂಗಣ್ಣ ಅವರ ಸಾಧನೆ ವಿವರ: ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಜಾನಪದ ಪರಿಷತ್, ಪದವಿ ಪೂರ್ವ ಉಪನ್ಯಾಸಕರ ಸಂಘ, ರಾಜ್ಯ ಡಿ. ದೇವರಾಜ ಅರಸು ಸಾಂಸ್ಕøತಿಕ ವೇದಿಕೆ(ರಿ) ಕಲಬುರಗಿ, ಮಹಾನಗರ ಪಾಲಿಕೆ, ಕಲಬುರಗಿ, ಕನ್ನಡ ಅಭಿವೃದಿ ಪ್ರಾಧಿಕಾರ ಸದಸ್ಯರಾಗಿ ಹೀಗೆ ಹಲವು ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಹುದ್ದೆಗಳನ್ನು ನಿರ್ವಹಿಸಿರುವ ಇವರು ಶಿಕ್ಷಣ-ಸಾಹಿತ್ಯ-ಸಾಂಸ್ಕøತಿಕವಾಗಿ ಪರಿಸರ ನಿರ್ಮಿಸುವಲ್ಲಿ ನಿರಂತರ ಪ್ರಯತ್ನ ಮಾಡಿರುತ್ತಾರೆ. ಕಲಂ 371(ಜೆ) ಜಾರಿಗಾಗಿ ಗುಲಬರ್ಗಾ ವಿಶ್ವವಿದ್ಯಾಲಯ ಪದವೀಧರ ಸಂಘಟನೆ ನೇತಾರರಾಗಿ ಹೋರಾಟವನ್ನೂ ಮಾಡಿರುತ್ತಾರೆ.

ಉತ್ತಮ ಭಾಷಣಕಾರರು, ಶ್ರೇಷ್ಠ ಚಿಂತಕರಾದ ಇವರು ಕನ್ನಡ ಸಾಹಿತ್ಯದ ಚಂಪೂ, ವಚನ, ಸಂಶೋಧನೆ, ಜಾನಪದ, ವಿಮರ್ಶೆ, ಚರಿತ್ರೆ, ಸಂಪಾದನೆ ಕುರಿತು ಒಟ್ಟು 35 ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ವ್ಯಾಕರಣ, ಛತ್ರಪತಿ ಶಿವಾಜಿ, ಹಬ್ಬಗಳು, ಸ್ಪಂದನ, ಬಡವರ ಬಂಗಾರ, ಡಿ. ದೇವರಾಜ ಅರಸು, ಜಾಗತೀಕರಣ ಜಾನಪದ, ಜಾನಪದ ಸಾಹಿತ್ಯ ಸಂಗಾತಿ, ಜಾಗತೀಕರಣ ಜಾತ್ರೆಗಳು, ಕಡಗೀಲು ಬಂಡಿಗಾಧಾರ, ವೈಚಾರಿಕತೆ ಮತ್ತು ಸಾಹಿತ್ಯ, ಕನ್ನಡ ಸಂಸ್ಕøತಿಕೋಶ, ಸಮಾಜವಾದಿ ಎಸ್. ಬಂಗಾರಪ್ಪ, ಸಾವಿತ್ರಿಬಾಯಿ ಪುಲೆ, ದಯಾನಂದ ಶಿವಯೋಗಿ, ಕುರುಬರ ಆಚರಣೆಗಳು, ಜಾನಪದ ದರ್ಪಣ, ಸಂಸ್ಕøತಿ ಮತ್ತು ಜಾನಪದ, ನಮ್ಮೂರು ಜಾನಪದ ಪ್ರಮುಖ ಕೃತಿಗಳಾಗಿವೆ. ಐವತ್ತಕ್ಕೂ ಹೆಚ್ಚು ಲೇಖನಗಳನ್ನೂ ರಚಿಸಿದ್ದಾರೆ. ಇವರು ವಿಚಾರಣ ಸಂಕಿರಣ ಮತ್ತು ಸಾಹಿತ್ಯ ಸಮ್ಮೇಳನಗಳಲ್ಲಿ ಹಲವು ಉಪನ್ಯಾಸ ನೀಡಿರುವ ಶ್ರೀಯುತರು, 100ಕ್ಕೂ ಹೆಚ್ಚು ಕಲಬುರಗಿ ಆಕಾಶವಾಣಿಯಲ್ಲಿ ಕಾರ್ಯಕ್ರಮವನ್ನು ನೀಡಿರುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here