ಕಲಬುರಗಿ: ನಗರದ ವಿಜಿ ಮಹಿಳಾ ಮಹಾವಿದ್ಯಾಲಯದಲ್ಲಿ ಶನಿವಾರ ೨೦೨೧-೨೦೨೨ನೇ ಶೈಕ್ಷಣಿಕ ಸಾಲಿನ ವಾರ್ಷಿಕೋತ್ಸವ ಸ್ಯಾಕ್ ಸಭಾಂಗಣದಲ್ಲಿ ಜರುಗಿತು.
ಮೊದಲಿಗೆ ಸಂಗೀತ ವಿಭಾಗದ ಡಾ.ರೇಣುಕಾ ಮೋಳಗಿ ಮತ್ತು ಡಾ.ಮುಖೀಮ್ ಮಿಂಯಾರವರು ಪ್ರಾರ್ಥನಾ ಗೀತೆ ನಡೆಸಿ ಕೊಟ್ಟರು.ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡಾ ಸ್ವಾಗತಿಸಿದರು. ಡಾ.ಶಾಂತಾ ಮಠ ಪರಿಚಯಿಸಿದರು.ವಿದ್ಯಾರ್ಥಿ ಸಂಘದ ಸಲಹೆಗಾರರಾದ ಉಮಾ ರೇವೂರ ಅವರು ಕಾಲೇಜಿನ ವಿವಿಧ ಸಂಘಗಳ ವಾರ್ಷಿಕ ವರದಿ ವಾಚನ ಮಾಡಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಶಿವಶರಣಪ್ಪ ಹರವಾಳ,ಕಾರ್ಯದರ್ಶಿಗಳಾದ ಡಾ.ಜಗನ್ನಾಥ ಬಿಜಾಪೂರ,ಆಡಳಿತ ಮಂಡಳಿಯ ಸದಸ್ಯರುಗಳಾದ ಶಿವಶರಣಪ್ಪ ನಿಗ್ಗುಡಗಿ,ಸುನಿಲಕುಮಾರ ಪಟ್ಟಣ,ವಿನೋದ ಪಾಟೀಲ್,ಡಾ.ಬಸವರಾಜ ಖಂಡೆರಾವ ಅವರುಗಳು, ಕಾಲೇಜಿನ ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಮತ್ತು ಆಟೋಟಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ಪ್ರದಾನ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರು ಹಾಗೂ ಡೀನರಾದ ಡಾ.ಕವಿತಾ ಪಾಟೀಲ ಅವರು ವಿದ್ಯಾರ್ಥಿಗಳನುದ್ದೇಶಿಸಿ ವಿದ್ಯಾರ್ಥಿನಿಯರು ಕಾಲೇಜಿನ ಮತ್ತು ಅಂತರ್ ಕಾಲೇಜುಗಳು ನಡೆಸುವ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ಮತ್ತು ನಿಮ್ಮ ಹೆತ್ತ ತಂದೆ ತಾಯಿಗಳಿಗೆ ಸಂತೋಷ ತಂದಿದ್ದಿರಾ ಅದಕ್ಕೆ ನನ್ನ ಹಾರ್ದಿಕ ಅಭಿನಂದನೆಗಳು.ಇನ್ನು ಚೆನ್ನಾಗಿ ಓದಿ,ಆಟೋಟಗಳಲ್ಲಿ ಭಾಗವಹಿಸಿ ನಾಡಿಗೆ ಕೀರ್ತಿ ತನ್ನಿ. ರಾಷ್ಟ್ರ ಮಟ್ಟದಲ್ಲಿ ಬೆಳೆಯಲೆಂದು ಹಾರೈಸಿದರು.
ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಭೀಮಾಶಂಕರ ಬಿಲಗುಂದಿ ಅಧ್ಯಕ್ಷೀಯ ಮಾತನಾಡಿದರು.
Super