ಮೊನ್ನೆ ‘ಚಂದ್ರನ’ ವಾಹಿನಿಯು ವಾರದ ಅತಿಥಿಯಾಗಿ ಈ ಪತ್ರಕರ್ತ ಹಾಗೂ ಸಾಹಿತಿ ಶಿವಾನಂದ ತಗಡೂರ ಅವರನ್ನು ಸಂದರ್ಶಿಸಿತು. ಆ ಸಂದರ್ಭದಲ್ಲಿ ಈ ಶಿವಾನಂದ ತಗಡೂರ ಅವರು ಮಾತನಾಡಿದ ಪತ್ರಿಕೋದ್ಯಮ ಹಾಗೂ ಸಾಹಿತ್ಯದ ಕುರಿತಾದ ಒಟ್ಟಾರೆ ಮಾತುಗಳು ಇವು..!
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ತಗಡೂರ ಗ್ರಾಮದ ಶಿವಾನಂದ ತಗಡೂರ ಅವರು ಜುಲೈ 1 ರಂದು 1971 ರಲ್ಲಿ ಜನಿಸಿದವರು. ಇವರು ಮೂಲತಃ ಶ್ರೀಮಂತ ಕುಟುಂಬದವರು. ಇವರ ಮನೆಯಲ್ಲಿ ಅಷ್ಟಾಗಿ ಬಡತನ ಎಂಬುದು ಎಳ್ಳಷ್ಟೂ ಇರಲಿಲ್ಲ.
ಹಾಗಾಗಿಯೇ ಈ ಶಿವಾನಂದ ತಗಡೂರ ಅವರು ಒಳ್ಳೆಯ ವಿದ್ಯಾಭ್ಯಾಸ ಪಡೆದವರು. ಅಲ್ಲದೇ ಈ ಶಿವಾನಂದ ತಗಡೂರ ಅವರ ಕುಟುಂಬವು ಒಂದು ರೀತಿಯಲ್ಲಿ ಇವರ ಕುಟುಂಬ ಊರಿನ ಹಿರಿತನ ಮಾಡುವುದು ಆಗಿತ್ತು.
ಇವರ ಅಪ್ಪ ಮತ್ತು ಅಜ್ಜ ತಲತಲಾಂತರದಿಂದ ಊರಿನ ಹಿರಿತನ ಮಾಡುತ್ತಲೇ ಬಂದವರು. ಇವರ ಅಜ್ಜನ ನ್ಯಾಯ ನಿರ್ಣಯ ಒಂದು ರೀತಿಯಲ್ಲಿ ಊರಿನಲ್ಲಿಯ ಎಲ್ಲಾ ಜನಾಂಗದ ಜನರಿಗೆ ನ್ಯಾಯ ಒದಗಿಸುವ ರೀತಿಯಲ್ಲಿಯೇ ಇತ್ತು.
ಅಂದರೆ ಶಿವಾನಂದ ತಗಡೂರವರದು ಗೌಡಕಿ ಮನೆತನವು. ಮೊದಲೇ ಇವರು ಅಂದರೆ ಶಿವಾನಂದ ತಗಡೂರ ಅವರು ಗೌಡರು ಜನಾಂಗದ ಜಾತಿಯವರು. ಆದರೂ ಶಿವಾನಂದ ತಗಡೂರ ಅವರು ಯಾವತ್ತೂ ತಮ್ಮ ಶ್ರೀಮಂತಿಕೆ ಮತ್ತು ಜಾತಿಯನ್ನು ತೋರಿಸಿಕೊಂಡವರು ಅಲ್ಲ.
ಇವರಿಗೆ ಆರಂಭದಿಂದಲೂ ಅಂದರೆ ಅಜ್ಜ ಮತ್ತು ತಂದೆಯ ಕಾಲದಿಂದಲೂ ‘ಮಾನವತೆ’ ಎಂಬುದು ಪಳೆಯುಳಿಕೆಯಾಗಿ ಬಂದಿತ್ತು. ಇದು ಇರಲಿ.
ಈ ಶಿವಾನಂದ ತಗಡೂರ ಅವರಿಗೆ ಬೇಕಾದಂತಹ ಕೆಲಸ — ಕಾರ್ಯದ ನೌಕರಿ ಆರಿಸಿಕೊಳ್ಳಬಹುದಿತ್ತು. ಆದರೆ ಈ ಶಿವಾನಂದ ತಗಡೂರ ಅವರು ಆರಿಸಿಕೊಂಡ ಕಲಿಕೆ ಮತ್ತು ಕೆಲಸವು ಸಾಹಿತ್ಯ ಮತ್ತು ಪತ್ರಿಕೋದ್ಯಮ ಕೆಲಸವಾಗಿತ್ತು..!
ಇವರಿಗೆ ಅಂದರೆ ಶಿವಾನಂದ ತಗಡೂರ ಅವರು ಸಮಾಜ ಮತ್ತು ಈ ಸಮಾಜದಲ್ಲಿಯ ಬಡವ ಮತ್ತು ಬಲ್ಲಿದ, ಜಾತಿಯ ಮೇಲು ಮತ್ತು ಕೀಳಿನ ಬಗೆಗೆ ಒಂದಿಷ್ಟು ಅಂದರೆ ತಾರತಮ್ಯದ ಬಗೆಗೆ ಏನೋ ಒಂದು ದುಗುಡು ಇತ್ತು.
ಈ ಕಾರಣಕ್ಕಾಗಿಯೇ ಇವರ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಬರವಣಿಗೆ ಹರಿತವಾಗುತ್ತಾ ಬಂದಿತು. ಶಾಲಾದಿನಗಳಲ್ಲಿಯೇ ಇಂತಹ ತಾರತಮ್ಯದ ವಿಚಾರಗಳ ಬಗೆಗೆ ಬರೆಯುತ್ತಲೇ ಬಂದರು ಶಿವಾನಂದ ತಗಡೂರ ಅವರು.
ಅದು ಮುಂದೆ ಒಬ್ಬ ಒಳ್ಳೆಯ ಪತ್ರಕರ್ತನಾಗಲೂ ಪ್ರೇರಣೆಯಾಯಿತು. ಅಲ್ಲದೇ ಸಾಹಿತ್ಯದ ಬರವಣಿಗೆಯು ಬಗೆಗೆ ಆಸೆ, ಆಸಕ್ತಿ ಬೆಳೆಯುತ್ತಲೇ ಬಂದಿತು. ಹೀಗಾಗಿಯೇ ಇದ್ದ ಶ್ರೀಮಂತಿಕೆಯನ್ನು ಬಿಟ್ಟು ಶಿವಾನಂದ ತಗಡೂರ ಅವರು ಸಮಾಜ ಮತ್ತು ಸಮಾಜದ ಅಂಕು — ಡೊಂಕು ತಿದ್ದುವ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಬಗೆಗೆ ಆಸಕ್ತಿಯು ಬೆಳೆಯುತ್ತಲೇ ಬಂದಿತಿಲ್ಲ, ಆ ಕಾರಣಕ್ಕೆ ಶಿವಾನಂದ ತಗಡೂರ ಅವರು ಒಬ್ಬ ಒಳ್ಳೆಯ ಪತ್ರಕರ್ತನಾಗುವ ಹಾಗೆಯೇ ಮಾಡಿತು.
ಮುಂದೆ ಶಿವಾನಂದ ತಗಡೂರ ಅವರು ಜನಪರ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಕೆಲಸಗಳಲ್ಲಿ ತೊಡಗಿಕೊಂಡರು. ಅಂದರೆ ಈ ಶಿವಾನಂದ ತಗಡೂರ ಅವರು ವಿವಿಧ ಜನಪರ ಚಳವಳಿಗಳಲ್ಲೂ ಭಾಗಿಯಾಗುವಂತೆಯೂ ಆಯಿತು.
1990 ರಲ್ಲಿ ರೈತ ಚಳವಳಿಯತ್ತ ಆಕರ್ಷಣೆಯಾಯಿತು. ಅಂದರೆ ಅದು ಗೊರೂರು ಹೇಮಾವತಿ ಯೋಜನೆಯಿಂದ ತುಮಕೂರು ಜಿಲ್ಲೆಗೆ ನೀರು ಹರಿಸಲು ಭೂಮಿಯ 200 ಅಡಿ ಆಳದಲ್ಲಿ ನಿರ್ಮಾಣ ಮಾಡಿದ ಬಾಗೂರು — ನವಿಲೆ ಸರಂಗದಿಂದಾಗಿ ಸಂತ್ರಸ್ತರಾದ ಹಳ್ಳಿಯ ಜನರ ಪರವಾಗಿ ಒಂದು ದಶಕಗಳ ಕಾಲ ನಿರಂತರ ಹೋರಾಟ ಮಾಡಿದರು ಶಿವಾನಂದ ತಗಡೂರ ಅವರು.
ಇಂತಹ ಅನೇಕ ಸಮಿತಿಗಳ ‘ಒಕ್ಕೂಟದ ಕಾರ್ಯದರ್ಶಿ’ಯಾಗಿಯೂ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಿದರು ಶಿವಾನಂದ ತಗಡೂರ ಅವರು. ಈ ಕಾರಣದಿಂದಾಗಿಯೇ ಅವರು ಶಿವಾನಂದ ತಗಡೂರ ಅವರು 1990 ರಲ್ಲಿ ಹಾಸನ ಜಿಲ್ಲೆಯ ‘ಜನಮಿತ್ರ’ ದಿನಪತ್ರಿಕೆಯ ಮೂಲಕ ಪತ್ರಿಕೋದ್ಯಮವನ್ನು ಪ್ರವೇಶಿಸಿದರು ಶಿವಾನಂದ ತಗಡೂರ ಅವರು. ನಂತರದಲ್ಲಿ ‘ಜ್ಞಾನದೀಪ’, ‘ಈ ವಾರ ಕರ್ನಾಟಕ’, ‘ಜನವಾಹಿನಿ’ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ ಮುಂದೆ ಜನಪರ ಸಾಹಿತಿಯಾಗಿಯೂ ಜನಸೇವೆ ಸೇವೆಯನ್ನು ಸಲ್ಲಿಸಿದರು ಶಿವಾನಂದ ತಗಡೂರ ಅವರು..!
1999 ರ ‘ವಿಜಯ ಕರ್ನಾಟಕ’ ಪ್ರಾರಂಭದಿಂದಲೂ ಹೀಗೆಯೇ 12 ವರ್ಷಗಳ ಕಾಲ ಹಿರಿಯ ವರದಿಗಾರರಾಗಿ ಕೆಲಸ ಮಾಡುತ್ತಲೇ ಬಂದರು ಅವರು. ಮುಂದೆ 2012 ರಿಂದ ‘ವಿಜಯವಾಣಿ’ ದಿನ ಪತ್ರಿಕೆಯಲ್ಲಿ ಹಿರಿಯ ವಿಶೇಷ ವರದಿಗಾರರಾಗಿ ಸೇವೆ ಸಲ್ಲಸುತ್ತಾ ಬರುತ್ತಿದ್ದಾರೆ ಈಗಲೂ ಶಿವಾನಂದ ತಗಡೂರ ಅವರು..!
1) 2006 ರಲ್ಲಿ ಪ್ರಪ್ರಥಮವಾಗಿ ಶ್ರವಣಬೆಳಗೊಳದಲ್ಲಿ ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನ ಯಶಸ್ವಿಯಾಗಿ ಸಂಘಟಿಸಿದ ಹೆಗ್ಗಳಿಕೆಯು ಪತ್ರಕರ್ತ ಶಿವಾನಂದ ತಗಡೂರ ಅವರದು.
2) ಬೇಲೂರಿನ ರಾಜ್ಯ ಮಟ್ಟದ ಪತ್ರಕರ್ತರ ಸಂಘದ ಪದಾಧಿಕಾರಿಗಳ ಸಮಾವೇ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಜೊತೆಯಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮ ಮಾಡಿ, ಯಶಸ್ವಿಯಾಗಿ ನಡೆಸಿಕೊಟ್ಟರು ಶಿವಾನಂದ ತಗಡೂರ ಅವರು.
3) 2011 ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದವರು ಶಿವಾನಂದ ತಗಡೂರ ಅವರು.
4) 2014 ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೇಂದ್ರ ಸ್ಥಾನದ ಉಪಾಧ್ಯಕ್ಷರಾಗಿಯೂ ಆಯ್ಕೆಯಾದವರು ಶಿವಾನಂದ ತಗಡೂರ ಅವರು.
5) 2018 — 2021 ರ ಅವಧಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು ಶಿವಾನಂದ ತಗಡೂರ ಅವರು.
6) 2019 ರಲ್ಲಿ ಏಷಿಯಾ ಖಂಡದ ಅಂತರರಾಷ್ಟ್ರೀಯ ಒಕ್ಕೂಟದ ಖಜಾಂಯಾಗಿಯೂ ಆಯ್ಕೆಯಾದವರು ಶಿವಾನಂದ ತಗಡೂರ ಅವರು.
7) 2019 ರಲ್ಲಿ ಮೈಸೂರಿನಲ್ಲಿ ( ಅಂದರೆ ಸುತ್ತೂರು ) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 35 ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟವರು ಶಿವಾನಂದ ತಗಡೂರ ಅವರು.
8) 2020 ರಲ್ಲಿ ಮಂಗಳೂರಿನಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟವರು ಶಿವಾನಂದ ತಗಡೂರ ಅವರು.
ಹೀಗೆಲ್ಲಾ ವಿವಿಧ ರೀತಿಯಲ್ಲಿ ವಿಧವಿಧವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ತೊಡಗಿಸಿಕೊಂಡವರು ಶಿವಾನಂದ ತಗಡೂರ ಅವರು..!
ಇಂತಹ ಪತ್ರಕರ್ತ ಶಿವಾನಂದ ತಗಡೂರ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಇಡೀ ಒಟ್ಟಾರೆ ಸಂಘದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.
ಅಲ್ಲದೇ ಸಮಾಜ ಮತ್ತು ಪತ್ರಕರ್ತರ ಸಮಸ್ಯೆಗಳನ್ನೂ ನೋಡಿಕೊಂಡು ಆ ಸಮಾಜ ಹಾಗೂ ಪತ್ರಕರ್ತರ ಸಮಸ್ಯೆಗಳನ್ನು ಸರಿಪಡಿಸಲೂ ಹೆಣಗುತ್ತಲೇ ಬಂದವರು. ಇಂತಹ ಇವರ ಕಾರ್ಯಕ್ಕೆ ಅನೇಕಾನೇಕ ಪ್ರಶಸ್ತಿಗಳು ಹಾಗೂ ಸನ್ಮಾನ, ಬಿರುದಾವಳಿಗಳು ಬಂದವು ಶಿವಾನಂದ ತಗಡೂರ ಅವರಿಗೆ..!
ಇಂತಹ ಪತ್ರಕರ್ತ ಶಿವಾನಂದ ತಗಡೂರ ಅವರಿಗೆ ಈ ವರೆಗೆ ಸಂದಿದ ಪ್ರಶಸ್ತಿಗಳು ಅನೇಕಾನೇಕ. ಅಂತಹ ಪ್ರಶಸ್ತಿಗಳು ಯಾವ್ಯಾವು ಎಂದು ನೋಡೋಣ, ಒಂದಿಷ್ಟು.
1) ಅತ್ಯುತ್ತಮ ರಾಜಕೀಯ ವಿಮರ್ಶಾತ್ಮಕ ವರದಿಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ‘ಖಾದ್ರಿ ಶಾಮಣ್ಣ ಪ್ರಶಸ್ತಿ’, ‘ಅತ್ಯುತ್ತಮ ಮಾನವೀಯ ವರದಿಗೆ ಕೊಡಮಾಡುವ ಪ್ರಶಸ್ತಿ’, ‘ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿ’ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಈ ಶಿವಾನಂದ ತಗಡೂರ ಅವರಿಗೆ ಸಂದಿದವು.
ಅಲ್ಲದೇ ಒಟ್ಟಾರೆ ಪತ್ರಿಕೋದ್ಯಮ ಸಾಧನೆಗಾಗಿ ‘ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ’ಯೂ ಸೇರಿದಂತೆ ‘ಮದರ ತೆರೇಸಾ ಪ್ರಶಸ್ತಿ’ಯಲ್ಲದೇ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನಗಳೂ ಸೇರಿದಂತೆ ಅನೇಕಾನೇಕ ಪ್ರಶಸ್ತಿ, ಬಿರುದಾವಳಿಗಳೂ ಪತ್ರಕರ್ತ ಶಿವಾನಂದ ತಗಡೂರ ಅವರನ್ನು ಹುಡುಕಿಕೊಂಡು ಬಂದವು..!
2) ಇಂತಹ ಶಿವಾನಂದ ತಗಡೂರ ಅವರು ಈ ಪತ್ರಿಕೋದ್ಯಮಕ್ಕಾಗಿಯೇ ವಿವಿಧ ಓಡಾಟ ಮತ್ತು ಪ್ರವಾಸಗಳನ್ನೂ ಮಾಡಿದರು. ಸಿಂಗಾಪುರ, ಶ್ರೀಲಂಕಾ, ಅಬುಧಾಬಿ, ಶಾರ್ಜಾ,ಮಾರಿಷಸ್ ಸೇರಿದಂತೆ ಹಲವಾರು ಬಾರಿ ಪತ್ರಕರ್ತರ ಸಂಘಟನೆಯ ವಿವಿಧ ವಿದೇಶ ಪ್ರವಾಸಗಳನ್ನು ಮಾಡಿದರು ಪತ್ರಕರ್ತ ಶಿವಾನಂದ ತಗಡೂರ ಅವರು..!
2) ಶ್ರೀಲಂಕಾ ಪತ್ರಕರ್ತರ ಸಮ್ಮೇಳನದಲ್ಲಿ ಅತಿಥಿಯಾಗಿ ಭಾಗವಹಿಸಿದರು ಅವರು. ಶ್ರೀಲಂಕಾ ಪ್ರಧಾನಿ ಕಾರ್ಯಕ್ರಮದಲ್ಲಿಯೂ ಆಹ್ವಾನಿತ ಅತಿಥಿಯಾಗಿ ಭಾಗವಹಿದರು ಶಿವಾನಂದ ತಗಡೂರ ಅವರು..!
ಇಂತಹ ಪತ್ರಕರ್ತ ಶಿವಾನಂದ ತಗಡೂರ ಅವರು ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಂದರೆ 2007 — 08 ರಲ್ಲಿ ಹಾಸನ ಜಿಲ್ಲಾ ಪತ್ರಕರ್ತರ ಬಳಗದ ಬಹು ದಿನಗಳ ಕನಸಾಗಿದ್ದ ಸುಸಜ್ಜಿತ ವ್ಯವಸ್ಥೆವುಳ್ಳ ಒಂದು ಕೋಟಿ ರೂಪಾಯಿಗಳ ವೆಚ್ಚದ ಪತ್ರಕರ್ತರ ಭವನ ನಿರ್ಮಾಣದ ಕನಸನ್ನು ನನಸಾಗಿಸು ಮಾಡಿದರು.
ಅಲ್ಲದೇ 2004 — 2008 ವರೆಗೆ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನಾಲ್ಕು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಣೆ ಮಾಡಿದರು ಪತ್ರಕರ್ತ ಶಿವಾನಂದ ತಗಡೂರ ಅವರು..!
ಹೀಗೆಯೇ ತಮ್ಮನ್ನು ತಾವು ಒಟ್ಟಾರೆ ಪತ್ರಕರ್ತರ ಏಳ್ಗೆಗಾಗಿ ತೊಡಗಿಸಿಕೊಂಡ ಪತ್ರಕರ್ತ ಶಿವಾನಂದ ತಗಡೂರ ಅವರು ಸಾಹಿತಿಯಾಗಿಯೂ ತಮ್ಮನ್ನು ತಾವು ತೊಡಗಿಸಿಕೊಂಡವರು..! ಇವರು ಬರೆದ ಇತ್ತೀಚಿನ ‘ಕೋವಿಡ್ ಕಥೆಗಳು’ ಒಂದು ಉತ್ತಮ ಕೃತಿಯಾಗಿ ಸಮಾಜದಲ್ಲಿ ಕಾಣಿಸಿಕೊಂಡಿತು. ಅಲ್ಲದೇ ಈ ಕೋವಿಡ್ ಮಹಾಮಾರಿಯ ವಿವಿಧ ಮುಖಗಳನ್ನೂ ತೋರಿಸಿತು..!
# ಸಾಹಿತಿಯಾಗಿ ಪತ್ರಕರ್ತ ಶಿವಾನಂದ ತಗಡೂರ ಅವರೂ..!
# ಶಿವಾನಂದ ತಗಡೂರು ಅವರ ‘ಕೋವಿಡ್ ಕಥೆಗಳು’ ಪುಸಕವೂ..! –
ಕನ್ನಡದ ಖ್ಯಾತ ಪತ್ರಕರ್ತರಾದ ಶಿವಾನಂದ ತಗಡೂರುರವರ ‘ಕೋವಿಡ್ ಕಥೆಗಳು’ ಲೋಕಾರ್ಪಣೆಯಾಗಿದ್ದು ಕೃತಿಯನ್ನು ‘ಬಹುರೂಪಿ ಪ್ರಕಾಶನ’ವು ಹೊರತಂದಿದೆ..!
ಪ್ರಕೃತಿಯ ವಿರುದ್ಧ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಕರೋನ ಒಂದು ಮಹತ್ವದ ಉದಾಹರಣೆಯಾಗಿದೆ, ಮಾಡಬಾರದ್ದನ್ನು ಮಾಡಿದರೆ ಪ್ರಕೃತಿ ಕೂಡ ಸೇಡು ತೀರಿಸಿಕೊಳ್ಳುವ ಬಗೆ ಇದು, ಶಿವಾನಂದ ತಗಡೂರು ಅವರು ಪತ್ರಕರ್ತ ಕುಟುಂಬಗಳಿಗೆ ಬೆಂಬಲವಾಗಿ ನಿಂತದ್ದೇ ಅಲ್ಲದೇ ಅವರ ಕುಟುಂಬದ ಕಣ್ಣೀರ ಕಥೆಗಳನ್ನು ಕೋವಿಡ್ ಕಥೆಗಳಲ್ಲಿ ದಾಖಲಿಸಿರುವುದು ಅಭಿನಂದನೀಯವೂ ಆಗಿದೆ..!
ಇದರಿಂದಾಗಿಯೇ ಒಂದು ಸಂಘ ಮನಸ್ಸು ಮಾಡಿದರೆ ಎಂತಹ ರಚನಾತ್ಮಕ ಕಾರ್ಯ ಮಾಡಬಹುದು ಎನ್ನುವುದಕ್ಕೆ ಈ ಪತ್ರಕರ್ತ ಮತ್ತು ಸಾಹಿತಿ ಶಿವಾನಂದ ತಗಡೂರ ಅವರು ಬರೆದ ಈ ಕೃತಿಯು ಒಂದು ಒಳ್ಳೆಯ ಮಾದರಿಯಾಗಿದೆ..!
‘ಕೋವಿಡ್ ಒಂದು ಸರಕಾರ ಎದುರಿಸಿದ ಮಹಾ ಸಮಸ್ಯೆಯಾಗಿತ್ತು. ಪ್ರತಿಯೊಬ್ಬರ ಬದುಕನ್ನು ಕೋವಿಡ್ ಅಲುಗಾಡಿಸಿದೆ..! ಇಂತಹ ಸಂದರ್ಭದಲ್ಲಿ ಶಿವಾನಂದ ತಗಡೂರುರವರು ಈ ಮಾರಣಾಂತಿಕ ರೋಗದಿಂದ ಸಾವನ್ನಪ್ಪಿದ ಕುಟುಂಬಗಳ ಪರವಾಗಿ ನಿಂತದ್ದು ಶ್ಲಾಘನೀಯವಾಯಿತ್ತು.
ಅವರ ದೃಢ ಹೋರಾಟದಿಂದಾಗಿ ಈ ಕೋವಿಡ್ ಗೆ ಬಲಿಯಾದ ಅನೇಕ ಕುಟುಂಬಗಳ ಉಳಿದ ಜೀವಿತ ಕುಟುಂಬಗಳ ಸದಸ್ಯರು ನೆಮ್ಮದಿಯನ್ನು ಕಂಡವು..!
ಈ ಬಗೆಗೆ ಪತ್ರಕರ್ತ ಹಾಗೂ ಸಾಹಿತಿಯಾಗಿರುವ ಶಿವಾನಂದ ತಗಡೂರ ಅವರು ಬರೆದ ಈ ‘ಕೋವಿಡ್ ಕಥೆಗಳು’ ತುಂಬಾ ಉಪಯುಕ್ತತೆಯಾಗಿತು..!
ಮೊನ್ನೆ ಈ ಕೋವಿಡ್ ಗೆ ಈಡಾದ ಒಂದು ಅಂತರ್ಜಾತಿಯ ವಿವಾಹ ಮಾಡಿಕೊಂಡಿದ್ದ ಕೌಸರ್ ಅಥವಾ ಕೌಶಲ್ಯ ಅವರನ್ನು ಬಿಜಾಪುರ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘವು ಸನ್ಮಾನಿಸಿತು. ಆ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಸಾಹಿತಿ ಶಿವಾನಂದ ತಗಡೂರ ಅವರು ಉಪಸ್ಥಿತರಿದ್ದು ಕೌಸರ್ ಅಥವಾ ಕೌಶಲ್ಯ ಅವರನ್ನು ಸನ್ಮಾನಿಸಿದರು..!
ಅಂತ ಹೀಗೆಲ್ಲಾ ಹೇಳುತ್ತಾ ಪತ್ರಕರ್ತ ಹಾಗೂ ಸಾಹಿತಿ ಶಿವಾನಂದ ತಗಡೂರ ಅವರ ಒಟ್ಟಾರೆ ಕಥೆಯನ್ನು ಮುಗಿಸುತ್ತೇನೆ..!
- # ಕೆ.ಶಿವು.ಲಕ್ಕಣ್ಣವರ