ಶಹಾಬಾದ ಕಲಬುರಗಿ ಶೈಕ್ಷಣಿ ಜಿಲ್ಲಾ ಕೇಂದ್ರದಲ್ಲಿಯೇ ಮುಂದುವರೆಸಲು ಮನವಿ

0
81

ಶಹಾಬಾದ:ನೂತನ ಸೇಡಂ ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡುತ್ತಿರುವುದರಿಂದ ಶಹಾಬಾದ ತಾಲೂಕಾವನ್ನು ಸೇಡಂ ಶೈಕ್ಷಣಿಕ ಜಿಲ್ಲೆಗೆ ಸೇರ್ಪಡೆ ಮಾಡದೇ ಕಲಬುರಗಿ ಜಿಲ್ಲಾ ಕೇಂದ್ರದಲ್ಲಿಯೇ ಮುಂದುವರೆಸಬೇಕೆಂದು ಆಗ್ರಹಿಸಿ ಶಹಾಬಾದ ನಾಗರಿಕರ ನಿಯೋಗ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರಿಗೆ ರವಿವಾರದಂದು ಮನವಿ ಪತ್ರ ಸಲ್ಲಿಸಿದರು.

ಸೇಡಂ ನಗರದ ನೃಪತುಂಗ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ಶೈಕ್ಷಣಿಕ ಸಮಾವೇಶಕ್ಕೆ ಆಗಮಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರಿಗೆ ಶಹಾಬಾದ-ವಾಡಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಹಾಗೂ ಸಂಗಡಿಗರು ಬೇಟಿ ಮಾಡಿ ಸೇಡಂಗೆ ಸೇರಿಸದೇ ಕಲಬುರಗಿ ಜಿಲ್ಲೆಯಲ್ಲಿಯೇ ಮುಂದುವರೆಬೇಕೆಂದು ಮನವಿ ಮಾಡಿದರು.

Contact Your\'s Advertisement; 9902492681

ಸೇಡಂ ಶೈಕ್ಷಣಿಕ ಜಿಲ್ಲೆಯೆಂದು ಇನ್ನೂ ಘೋಷಣೆಯಾಗಿಲ್ಲ. ಆದರೆ ಒಂದು ವೇಳೆ ಸೇಡಂ ಶೈಕ್ಷಣಿಕ ಜಿಲ್ಲೆಗೆ ಸೇರಿಸಿದರೆ ನಿಮಗೇನು ತೊಂದರೆಯಾಗಲಿದೆ ಎಂದರು. ಶಹಾಬಾದಿಂದ ಕಲಬುರಗಿ ಜಿಲ್ಲಾ ಕೇಂದ್ರಕ್ಕೆ ಕೇವಲ ೨೫ ಕಿಮೀ ಅಂತರವಿದೆ.ಆದರೆ ಅದೇ ಸೇಡಂ ತಾಲೂಕಾಕ್ಕೆ ಹೋಗಬೇಕಾದರೆ ೬೫ ಕಿಮೀ ದೂರ ಹೋಗಬೇಕಾಗುತ್ತದೆ.ಜನರು ತಮ್ಮ ಕೆಲಸ ಕಾರ್ಯಗಳಿಗೆ ಬಹುದೂರ ಅಲೆಯಬೇಕಾದ ಪ್ರಸಂಗ ಎದುರಾಗುತ್ತದೆ.ಅಲ್ಲದೇ ಶಹಾಬಾದ ತಾಲೂಕಿನ ಕೆಲವು ಗ್ರಾಮದಿಂದ ಬಡ ಜನರು ತೆರಳಬೇಕಾದರೆ ಸುಮಾರು ೮೦ ಕಿಮೀ ದೂರವಾಗುತ್ತದೆ.ಅಲ್ಲದೇ ಕಲಬುರಗಿ ಜಿಲ್ಲಾ ಕೇಂದ್ರಕ್ಕೆ ಕೆಲವು ಳ್ಳಿಗಳು ಕೇವಲ ೧೦ ಕಿಮೀ ದೂರದಲ್ಲಿದ್ದು, ಕಲಬುರಗಿ ಜಿಲ್ಲಾ ಕೇಂದ್ರವೇ ಎಲ್ಲದಕ್ಕೂ ಸೂಕ್ತವಾಗುತ್ತದೆ ಎಂದು ಸಚಿವರ ಗಮನಕ್ಕೆ ಕನಕಪ್ಪ ದಂಡಗುಲಕರ್ ಹಾಗೂ ಶರಣು ವಸ್ತ್ರದ್ ತಂದರು. ಅಲ್ಲದೇ ತಾಲೂಕಿನ ಆಡಳಿತಾತ್ಮಕ ದೃಷ್ಟಿಯಿಂದ ಕಲಬುರಗಿ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿದರು.

ಮನವಿ ಪತ್ರ ಸ್ವೀಕರಿಸಿದ ಶಿಕ್ಷಣ ಸಚಿವರು ಶಹಾಬಾದ ತಾಲೂಕಾವನ್ನು ಸೇಡಂ ಶೈಕ್ಷಣಿಕ ಜಿಲ್ಲೆಗೆ ಸೇರ್ಪಡೆ ಮಾಡದೇ ಕಲಬುರಗಿ ಜಿಲ್ಲಾ ಕೇಂದ್ರದಲ್ಲಿಯೇ ಮುಂದುವರೆಸುವ ಕುರಿತು ಪರಿಶೀಲನೆ ಮಾಡುತ್ತೆನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್, ನಿಯೋಗದ ಸದಸ್ಯರಾದ ಶರಣು ವಸ್ತ್ರದ್, ಮಲ್ಲಿಕಾರ್ಜುನ ಇಟಗಿ, ಸುನೀಲ ಗುಡೂರ್, ವಾಸುದೇವ ಚವ್ಹಾಣ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here