ಕೆಬಿಎನ್ ವಿವಿಯಲ್ಲಿ ವೈಜ್ಞಾನಿಕ ಗೋಷ್ಠಿ

0
91

ಕಲಬುರಗಿ: ಕೆ ಬಿ ಎನ್ ವಿಶ್ವವಿದ್ಯಾಲಯದಲ್ಲಿ ಚರ್ಮ ರೋಗ ವಿಭಾಗವು ಮಂಗಳವಾರ ವೈಜ್ಞಾನಿಕ ಗೋಷ್ಠಿಯನ್ನು ಏರ್ಪಡಿಸಲಾಗಿತ್ತು.

ಇದರಲ್ಲಿ ಬೆಂಗಳೂರಿನ ಖ್ಯಾತ ಮಕ್ಕಳ ಚರ್ಮ ರೋಗ ತಜ್ಞರಾದ ಡಾ. ರಶ್ಮಿ ಅಗರ್ವಾಲ್ ಮತ್ತು ಚರ್ಮ ಶಸ್ತ್ರ ಚಿಕಿತ್ಸೆಕಾರದ ಡಾ. ಮಧುರಾ ಇವರು ಉಪನ್ಯಾಸ ನೀಡಿದರು.

Contact Your\'s Advertisement; 9902492681

ಈ ಕಾರ್ಯಕ್ರಮವು ವೈದ್ಯಕೀಯ ನಿರ್ದೇಶಕ ಡಾ. ಪಿ ಎಸ್ ಶಂಕರ ಮತ್ತು ಪ್ರಾಂಶುಪಾಲ ಡಾ ಸಿದ್ದೇಶ ಇವರ ಮಾರ್ಗದರ್ಶನದಲ್ಲಿ ನೆರವೇರಿತು.

ನಗರದ  ಚರ್ಮತಜ್ಞರು, ಮಕ್ಕಳ ತಜ್ಞರು, ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೆಬಿಎನ್ ಆಸ್ಪತ್ರೆಯ ಚರ್ಮ ರೋಗ ವಿಭಾಗದ ಮುಖ್ಯಸ್ಥಾರಾದ ಡಾ. ಗುರುಪ್ರಸಾದ ಕೆ. ವೈ. ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಡಾ ಪಿ ಬಿರಾದಾರ್,  ಕೆಡಿಎಸ್ ಸಂಘದ ಅಧ್ಯಕ್ಷ ಡಾ. ಸಾಗರೆ, ಕಾರ್ಯದರ್ಶಿ ಡಾ ಬಾಡದ, ಡಾ ಅಶೋಕ ಹೂಗಾರೆ ಡಾ, ವಿನೋದ ಉಪಲಾವಕರ ಮತ್ತು ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here