ಕಲಬುರಗಿ: ಶ್ರೀ ಜಡೆಶಂಕಲಿಂಗ ದೇವಸ್ಥಾನದಲ್ಲಿ ಪ್ರವಚನ ನಾಳೆಯಿಂದ

0
111

ಕಲಬುರಗಿ: ಜಿಲ್ಲಾ ಬಣಗಾರ ಸಮಾಜ ಹಾಗೂ ಶ್ರೀ ಜಡೆ ಶಂಕರಲಿಂಗ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಗಸ್ಟ್ ೨೫ರಿಂದ ಸೆ.೫ರವರೆಗೆ ಮಕ್ತಂಪೂರದ ಶ್ರೀ ಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಪ್ರವಚನ, ಪ್ರತಿಭಾ ಪುರಸ್ಕಾರ, ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಆ.೨೫ರಿಂದ ಸೆ.೪ರವರೆಗೆ ಪ್ರತಿದಿನ ಸಂಜೆ ೭ರಿಂದ ೮.೩೦ರವರೆಗೆ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿವಶಂಕರ ಬಿರಾದಾರ ಕೋಟನೂರು(ಡಿ) ಅವರು ಪ್ರವಚನ ನಡೆಸಿಕೊಡಲಿದ್ದಾರೆ. ಅಲ್ಲದೆ ಬೆಳಿಗ್ಗೆ ೭ಕ್ಕೆ ಮಹಾರುದ್ರಾಭಿಷೇಕ ನಡೆಯಲಿದೆ.

Contact Your\'s Advertisement; 9902492681

ಸೆ.೪ರಂದು ಬೆಳಿಗ್ಗೆ ೧೦ಕ್ಕೆ ಪ್ರವಚನ ಮಂಗಲ ಕಾರ್ಯಕ್ರಮ ನಡೆಯಲಿದೆ. ಮಕ್ತಂಪುರ ಶ್ರೀ ಗುರುಬಸವ ಬ್ರಹನ್ಮಠದ ಶ್ರೀ ಶಿವಾನಂದ ಮಹಾಸ್ವಾಮೀಜಿ, ಗದ್ದುಗೆ ಮಠದ ಶ್ರೀ ವಿಜಯ ಮಹಾಂತೇಶ ದೇವರು ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಪಾಲಿಕೆ ಸದಸ್ಯ ವಿಜಯಕುಮಾರ ಸೇವಲಾನಿ, ಮಾಜಿ ಸದಸ್ಯ ಬಸವರಾಜ ನಾಶಿ ಆಗಮಿಸುವರು. ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಶಾಂತವೀರಪ್ಪ ಕಲ್ಯಾಣಿ, ಜಿಲ್ಲಾ ಸಮಾಜದ ಅಧ್ಯಕ್ಷ ಘಾಳೇಪ್ಪ ದೊಡ್ಡಮನಿ ಅಧ್ಯಕ್ಷತೆ ವಹಿಸುವರು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುತ್ತದೆ.

ಪ್ರತಿಭಾ ಪುರಸ್ಕಾರ ಪಡೆಯಲಿಚ್ಚಿಸುವ ವಿದ್ಯಾರ್ಥಿಗಳು ಆ.೩೧ರೊಳಗೆ ಅಂಕ ಪಟ್ಟಿ ಗಳೊಂದಿಗೆ ಘಾಳೆಪ್ಪ ದೊಡ್ಡಮನಿ- ೯೬೧೧೫೦೧೯೧೯, ನಾಗಪ್ಪ ರೋಣದ- ೯೮೮೬೨೩೯೮೪೫, ರವೀಂದ್ರಕುಮಾರ ಕಾಳಗಿ- ೯೯೮೦೩೦೫೩೩೦ ಇವರಿಗೆ ಸಂಪರ್ಕಿಸಬೇಕು. ಅಲ್ಲದೆ ಸಮಾಜದ ಮೂವರು ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಗುತ್ತದೆ, ಆ.೩೧ರೊಳಗೆ ಶ್ರೀದೇವಿ ಬೈರಾಮಡಗಿ, ದೀಪಾ ದಂಡೋತಿ, ಸರಸ್ವತಿ ಕಾಳಗಿ, ಚಂದ್ರಕಲಾ ಚೌಧರಿ ಅವರಲ್ಲಿ ಹೆಸರು ನೋಂದಾಯಿಸಬೇಕು.

ರಾತ್ರಿ ೮.೩೦ರಿಂದ ಬೆಳಗಿನ ಜಾವದವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ಸೆ.೫ರಂದು ಮಧ್ಯಾಹ್ನ ಸಂಜೆ ೭ ಗಂಟೆವರೆಗೆ ಶ್ರೀ ಜಡೆ ಶಂಕರಲಿಂಗ ದೇವರ ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.

ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಾಜದ ಜಿಲ್ಲಾ ಅಧ್ಯಕ್ಷ ಘಾಳೆಪ್ಪ ದೊಡ್ಡಮನಿ, ಪ್ರಧಾನ ಕಾರ್ಯದರ್ಶಿ ಶಾಂತಪ್ಪ ವ್ಹಿ.ಘೂಳಿ, ಟ್ರಸ್ಟ್‌ನ ಅಧ್ಯಕ್ಷ ಶಾಂತವೀರಪ್ಪ ಕಲ್ಯಾಣಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಧನಶೆಟ್ಟಿ ಅವರು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here