ಕಲಬುರಗಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ದೇಶಕ್ಕೆ ತಾನು ನೀಡಿರುವ ಅಮೂಲ್ಯ ಕೊಡುಗೆಗಳ ಬಗ್ಗೆ ಜನರಿಗೆ ಪರಿಚಿಸಲು ಮುಂದಾಗಿ ಆರಂಭಿಸಿರುವ ಜಾಗೃತಿ ಪಾದಯಾತ್ರೆ ಕಲಬುರಗಿ ದಕ್ಷಿಣದಲ್ಲಿ ಭರದಂದ ಸಾಗಿದೆ. ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್ ನೇತೃತ್ವದಲ್ಲಿ ಆರಂಭವಾಗಿರುವ ಪಾದಯಾತ್ರೆ ಗುರುವಾರ ಸೈಯ್ಯದ್ ಚಿಂಚೋಳಿಲ್ಲಿ ನಡೆಯಿತು.
ಈ ಊರಲ್ಲಿ ಬೆಳಗ್ಗೆಯಿಂದ ಸಂಚಾರ ಮಾಡಿದ ಅಲ್ಲಂಪ್ರಭು ಪಾಟೀಲ್, ನೀಲಕಂಠರಾವ ಮೂಲಗೆ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಲಿಂಗರಾಜ್ ಕಣ್ಣಿ , ಲಿಂಗರಾಜ್ ತಾರ್ಫೆಲ್, ಸಂತೋಷ್ ಪಾಟೀಲ್ ದಣ್ಣೂರ, ಶರಣಬಸಪ್ಪ ಹಾಗರಿಗಿ, ವಾಣಿಶ್ರೀ ಸಾಗರಕರ್, ಶೋಭಾ ಕಾಳೆ, ನಾಗಣ್ಣ ಶೇರಿಕರ್ , ಗುಂಡಪ್ಪ ಲಂಡನಕರ್, ಪ್ರವೀಣ್ ಪಾಟೀಲ ಹರವಾಳ್ ಸೇರಿದಂತೆ ಪಕ್ಷದ ಅನೇಕರು ಕಾಂಗ್ರೆಸ್ ಪಕ್ಷ ದೇಶಕ್ಕೆ ಮಾಡಿರುವ ಅಭಿವೃದ್ಧಿ ಪರ ಕೆಲಸಗಳನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಊರಿನ ಹಿರಿಯರಾದ ರಾಮಚಂದ್ರ ಸುಲ್ತಾನಪೂರಕರ್, ಮುನೀರಸಾಬ್ ಮಡಕಿ, ಮಲ್ಕಣ್ಣ ಲೋಣಿ, ಶಿವಣ್ಣ ನಾಟೀಕಾರ್, ಶಿವರಾಯ ಹುಲಮನಿ, ಶಿವಶರಣಪ್ಪ ಪೂಜಾರಿ, ಲಿಂಗಯ್ಯ ಸ್ವಾಮಿ, ಧೂಳಪ್ಪ ಹರಳಯ್ಯ, ಪ್ರಕಾಸ ಬಾಗೋಡಿ, ಲಕ್ಷ್ಮೀಬಾಯಿ, ಸರಸ್ವತಿ, ಲಕ್ಷ್ಮಮ್ಮ, ಅಂಬವ್ವ ಇವರನ್ನು ಸತ್ಕರಿಸಲಾಯ್ತು. ಗ್ರಾಮದ ಮುಖಂಡರಾದ ಇಸ್ಮಾಯಿಲ್ ಸಾಬ್, ಶರಣಪ್ಪ, ನೀಲಂಕಠ, ಪೀರಪ್ಪ ಇದ್ದರು.