ಕಲಬುರಗಿ: ಹೈದ್ರಾಬಾದ್ ಕರ್ನಾಟಕ ವಿಮೋಚನೆಗಾಗಿ ಹೋರಾಡಿ ಮಡಿದವರ ಕುರಿತು ಮರೀಚಿಕೆಯಾಗುತ್ತಿರುವ ಇಂದಿನ ದಿನಗಳಲ್ಲಿ ಮುಂದಿನ ಪೀಳಿಗೆಗೂ ವಿಮೋಚನೆಯ ಕುರಿತು ಅರಿವು ಮೂಡಿಸಲು ಹೋರಾಟಗಾರರ ಸಾಧನೆಗಳ ಹೆಜ್ಜೆಯ ಪಠ್ಯ ಅವಶ್ಯಕವಾಗಿರುತ್ತದೆ. ಅಲ್ಲದೆ ಶಾಲೆ ಕಾಲೇಜು ಪಠ್ಯಪುಸ್ತಕಗಳಲ್ಲಿ ಸೇರಿಸಿ ಮುಂದಿನ ಪೀಳಿಗೆಗೆ ಈ ನೇಲದ ಇತಿಹಾಸ ತಿಳಿಸುವುದು ಅಗತ್ಯವಾಗಿದೆ ಎಂಬುದು ಹಲವು ಹಿರಿಯರ ಅಭಿಪ್ರಾಯದ ಜೊತೆ ನನ್ನದೂ ಅಭಿಮತವಾಗಿದೆ ಎಂದು ಹೋರಾಟಗಾರ ಎಂ.ಎಸ್. ಪಾಟೀಲ್ ನರಿಬೋಳ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೈದ್ರಾಬಾದ್ ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ಸ್ವಾತಂತ್ರ್ಯ ಯೋಧರ ಕುರಿತು ಪಠ್ಯಪುಸ್ತಕದಲ್ಲಿ ಸೇರಿಸಲು ಪ್ರಮುಖ ಸ್ಥಳಗಳಲ್ಲಿ ಪ್ರಮುಖರ ಪುತ್ಥಳಿ ಸ್ಥಾಪಿಸಲು ವಿವಿದ ವೃತ್ತಗಳಿಗೆ ಹೆಸರಿಡಲು ಸರಕಾರಕ್ಕೆ ಆಗ್ರಹಿಸಲು ಒಂದು ಪಕ್ಷಾತೀತವಾಗಿ ಜಾತ್ಯಾತಿತವಾಗಿ ಚಿಂತಕರ ಹೋರಾಟಗಾರರ ಸಾಹಿತಿಗಳ ವಿವಿಧ ಕ್ಷತ್ರದ ಪ್ರಮುuಟಿಜeಜಿiಟಿeಜಖರನ್ನು ಒಳಗೊಂಡ ಒಂದು ನೂತನ ಸಮಿತಿ ಅಗತ್ಯವಾಗಿದೆ ಎಂಬ ಕೆಲ ಹಿರಿಯ ಮುಖಂಡರ ಸಲಹೇಯಂತೆ ನೂತನ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಆದ್ದರಿಂದ ಇದೇ ಭಾನುವಾರ, ಅ೨೮ ರಂದು ನಗರದ ಕನ್ನಡ ಭವನದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಸಭೆ ಕರೆಯಲಾಗಿದೆ. ಆದ್ದರಿಂದ ಈ ಭಾಗದ ಹಿರಿಯರು, ಹೋರಾಟಗಾರರು, ಆಸಕ್ತರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ, ಸೂಚನೆ, ಮಾರ್ಗದರ್ಶನ ನೀಡಲು ವಿನಂತಿಸಿಕೊಳ್ಳುತ್ತಿದ್ದೇನೆ ಹೆಚ್ಚಿನ ಮಾಹಿತಿಗಾಗಿ ೯೫೯೧೭೯೪೫೫೫ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.