ಶಹಾಬಾದ್: ತಾಲೂಕಿನ ತೊನಸನಳ್ಳಿ (ಎಸ್) ಗ್ರಾಮದ ಭಾವೈಕ್ಯತೆಯ ತಾಣವಾದ ಶ್ರೀ ಅಲ್ಲಮಪ್ರಭು ಸಂಸ್ಥಾನ ಮಠದ ಪೀಠದ ಪೀಠಾಧಿಪತಿ ಮಲ್ಲಣ್ಣಪ್ಪ ಮಹಾಸ್ವಾಮಿಯವರ ನೇತೃತ್ವದಲ್ಲಿ ಸೆಪ್ಟೆಂಬರ್ ೧.ರಂದು ಶಹಾಬಾದ ತಾಲೂಕಿನ ಸುಕ್ಷೇತ್ರ ತೊನಸನಹಳ್ಳಿ ಗ್ರಾಮದಲ್ಲಿರುವ ಶ್ರೀ ಮಲ್ಲಮ ಪ್ರಭು ಸಂಸ್ಥಾನ ಮಠದಲ್ಲಿ ರಾತ್ರಿ ೮.೩೦ಕ್ಕೆ ಶ್ರಾವಣ ಮಾಸದ ಮಂಗಲೋತ್ಸವ ಹಾಗೂ ಧರ್ಮ ಸಭೆ ಕಾರ್ಯಕ್ರಮ ಜರುಗಲಿದೆ.
ಈ ಕಾರ್ಯಕ್ರಮಕ್ಕೆ ಪೇಠಶಿರೂರನ ಸಿದ್ಧಲಿಂಗೇಶ್ವರ ಸಂಸ್ಥಾನ ವಿರಕ್ತಮಠದ ಶ್ರೀ ಮ.ನಿ.ಪ್ರ ಸಿದ್ಧಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ರಾವೂರನ ಸಿದ್ಧಲಿಂಗೇಶ್ವರ ಸಂಸ್ಥಾನ ವಿರಕ್ತಮಠದ ಪೂಜ್ಯ ಶ್ರೀ ಸಿದ್ಧಲಿಂಗ ದೇವರು ಕಾರ್ಯಕ್ರಮ ಉದ್ಘಾಟಿಸುವರು.
ಮಾಜಿ ಸಚಿವರು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಬಾಬುರಾವ ಚಿಂಚನಸೂರ ಹಾಗೂ ಕೇಂದ್ರ ಆಹಾರ ನಿಗಮ ಮಂಡಳಿಯ ರಾಜ್ಯ ಸಲಹಾ ಸಮಿತಿ ಸದಸ್ಯರು ಭಾರತ ಸರಕಾರ ಹಾಗೂ ಚಿತ್ತಾಪೂರನ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅಮರೇಶ್ವರಿ ಬಾಬುರಾವ ಚಿಂಚನಸೂರ ಇವರನ್ನು ಸನ್ಮಾನಿಸಲಾಗುವುದು. ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಗ್ರಾಮೀಣ ಮತಕ್ಷೇತ್ರ ಅಧ್ಯಕ್ಷತೆ ವಹಿಸುವರು.
ಭೀಮಣ್ಣ ಸುಣಗಾರ ಸಿಂದಗಿ, ರಾಮಣ್ಣ ನಾಯಿಕೋಡಿ ಶಹಾಪೂರ, ಡಾ. ಎಸ್. ಯೋಗೇಶ ಬೇಸ್ತರ, ಅಣವೀರಪ್ಪ ಹೆಚ್. ಇಂಗಿನಶೆಟ್ಟಿ, ಬಸವರಾಜ ಹರವಾಳ, ಲಕ್ಷ್ಮಣ ಅವಂಟಿ ವಕೀಲರು, ಶರಣಪ್ಪ ಹೊಸೂರ, ಅಂಬಿಗರ ಚೌಡಯ್ಯ, ಮಲ್ಲಿಕಾರ್ಜುನ ಎಮ್ಮಿಗನೋರ, ದೇವಿಂದ್ರ ಈ ತಳವಾರ, ನಿಂಗಪ್ಪ ಹುಳಗೋಳಕರ್, ಸಂಗೀತ ದೇವಿಂದ್ರ ಕಾರೋಳ್ಳಿ, ತಿಪ್ಪಣ್ಣ ನಾಟಿಕಾರ, ನಿಂಗಣ್ಣಗೌಡ ಮಾಲಿಪಾಟೀಲ ತೊನಸನಹಳ್ಳಿ, ಮಹಾದೇವ ಬಂದಳ್ಳಿ, ವೀರೇಶ್ ಜಿ. ಗೋಳೇದ, ಕಾವೇರಿ ಮಹಾಲಿಂಗ ಮದ್ದರಕಿ, ಶಿವಾನಂದ ದಂಡಪ್ಪಗೋಳ, ನಾಗೇಂದ್ರ ಬೊಮ್ಮನಳ್ಳಿ, ಶಿವಕುಮಾರ ನಾಟಿಕಾರ, ಮಲ್ಕಪ್ಪ ಮುದ್ದಾ, ಶ್ವೇತಾ ಚಂದ್ರಕಾಂತ ಸಂಗಾವಿ, ಮಡಿವಾಳಪ್ಪ ನರಬೋಳಿ, ಅಶೋಕ ಗಣಪೂರ, ಆನಂದ ಕೊಡಸಾ, ಸಿದ್ರಾಮಾಪ್ಪ ಎಸ್. ದಂಡೋತಿ, ಚಂದ್ರಶೇಖರ ಕೊಟಾರಗಸ್ತಿ, ಕಾಶಿನಾಥ ಬೆಲ್ಲದ, ಮಲ್ಲಿಕಾರ್ಜುನ ಇಟಗಿ, ಆಂಜನೇಯ ಜೀವಣಗಿ, ಅಣವೀರಪ್ಪ ಎಸ್, ಯಾಕಾಪೂರ, ವೀರುಪಾಕ್ಷಪ್ಪ ಹದಗಲ್, ಗುರುನಾಥ ಜುಲ್ಪಿ, ರಾಜಶೇಖರ ಸಾಹು, ಮಲ್ಲಿಕಾರ್ಜುನ ಸಿರಗೊಂಡ ಇವರುಗಳು ಅತಿಥಿಗಳಾಗಿ ಆಗಮಿಸುವರು. ಭಗವಂತರಾಯ ಬೆಣ್ಣೂರ ನಿರೂಪಣೆ, ಮಹೇಶ ನರಬೋಳಿ ಸ್ವಾಗತ ಗೀತೆ, ಅಶೋಕ ಎಂ. ನಾಟಿಕಾರ ವಂದನಾರ್ಪಣೆ ಮಾಡುವರು.
ರಾತ್ರಿ ೧೦-೩೦ ಕ್ಕೆ ಮಾತೋಶ್ರೀ ಸಾತಮ್ಮ ತಾಯಿ ಭಜನಾ ಮಂಡಳಿ ತೊನಸನಹಳ್ಳಿ (ಎಸ್) ಇವರಿಂದ ಭಜನೆ ಮಾಡುವವರು. ಈ ಕಾರ್ಯಕ್ರಮಕ್ಕೆ ರಾಜಕಿಯ ಮುಖಂಡರು, ವಿವಿಧ ಗ್ರಾಮಸ್ಥರು, ಭಕ್ತಾಧಿಗಳು ಆಗಮಿಸಬೇಕೆಂದು ಎಂದು ನಿಂಗಪ್ಪ ಹುಳಗೋಳಕರ್ ಶಹಾಬಾದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.