ಕಾರ್ಮಿಕ ಇಲಾಖೆ ನಿರೀಕ್ಷಕಿ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ

0
205
  • ಎಸಿಬಿ ಬಲೆಗೆ ಬಿದ್ದ ಕವಿತಾ ಅವರನ್ನು ಚಿತ್ತಾಪೂರ ವಲಯ ನಿಯೋಜನೆಗೆ ತೀವ್ರ ವಿರೋಧ.

ಶಹಾಬಾದ: ಲಂಚ ಪ್ರಕರಣದಲ್ಲಿ ಎಸಿಬಿ ಬಲೆಗೆ ಬಿದ್ದ ಕಾರ್ಮಿಕ ನಿರೀಕ್ಷಕಿ ಕವಿತಾ ಜೆ. ಹೊನ್ನಾಳಿ ಅವರನ್ನು ಚಿತ್ತಾಪುರ ವಲಯಕ್ಕೆ ನಿಯೋಜನೆ ಮಾಡಿರುವದನ್ನು ವಿರೋಧಿಸಿ ಹಾಗೂ ಅವರನ್ನು ಈ ಕೂಡಲೇ ಇಲ್ಲಿಂದ ಬೇರೆ ಕಡೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಾಜ್ಯ ಕಟ್ಡಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇ?ನ್ ನಗರ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ರಾಜ್ಯ ಕಟ್ಡಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡೆರೇ?ನ್ ಜಿಲ್ಲಾ ಕಾರ್ಯದರ್ಶಿ ನಾಗಯ್ಯಾಸ್ವಾಮಿ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ ಈಚೆಗೆ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ನಿರೀಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಕವಿತಾ ಜೆ. ಹೊನ್ನಳಿ ಅವರು ಕಾರ್ಮಿಕ ಇಲಾಖೆ ಯೋಜನೆಯಡಿ ಮದುವೆಯಾದ ದಂಪತಿಗೆ ಇಲಾಖೆಯಿಂದ ಸಹಾಯಧನ ನೀಡಲು ಕಾರ್ಮಿಕನಿಂದ ೪೦೦೦ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದು, ಜೈಲಿಗೆ ಹೋಗಿದ್ದರು. ಇಂತಹ ಭ್ರ?ಚಾರಿ ಅಧಿಕಾರಿಯನ್ನು ಚಿತ್ತಾಪೂರ ವಲಯದ ಶಹಾಬಾದ ಹಾಗೂ ಕಾಳಗಿ ನಗರಕ್ಕೆ ನಿಯೋಜನೆ ಮಾಡಿದ ಮೇಲಾಧಿಕಾರಿಗಳ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕರ್ನಾಟಕ ಪ್ರಾಂತ ರೈತ ಸಂಘದ ಚಿತ್ತಾಪುರ ತಾಲ್ಲೂಕು ಅಧ್ಯಕ್ಷ ಸಾಯಬಣ್ಣಾ ಗುಡುಬಾ ಮಾತನಾಡಿ, ಶಹಾಬಾದ ಮತ್ತು ಚಿತ್ತಾಪುರ ತಾಲ್ಲೂಕು ಅತಿ ಹಿಂದುಳಿದ ಪ್ರದೇಶವಾಗಿವೆ. ಇಲ್ಲಿನ ಕಾರ್ಮಿಕರು ವಿವಿಧ ಕೆಳ ಸ್ಥರದ ವಲಯಗಳಲ್ಲಿ ಕೆಲಸ ಮಾಡುತ್ತಾರೆ. ಹೀಗಿರುವಾಗ ಇಂತಹ ಕಳಂಕಿತ ಭ್ರ? ಅಧಿಕಾರಿಯನ್ನು ನೇಮಕ ಮಾಡಿರುವುದು ಕಾರ್ಮಿಕರಿಗೆ ಮೋಸ ಮಾಡಿದಂತಾಗಿದೆ. ಇದರಿಂದ ಕಾರ್ಮಿಕ ನಿರೀಕ್ಷಕಿ ಕವಿತಾ ಅವರನ್ನು ಇಲ್ಲಿಂದ ಒಂದು ವಾರದೊಳಗೆ ವರ್ಗಾವಣೆ ಮಾಡದಿದ್ದರೇ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಜಂಟಿ ಕಾರ್ಯದರ್ಶಿ ಹನುಮಂತರಾಯ ಪೂಜಾರಿ, ನಾಗಪ್ಪ ರಾಯಚೂರಕರ್ ಮಾತನಾಡಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಶಹಾಬಾದ್ ಸಂಚಾಲಕ ರಾಯಪ್ಪ ಹುರುಮುಂಜಿ, ಭೀಮ? ಹಳ್ಳಿ, ಪ್ರಕಾಶ ಇದ್ದರು.

ಕರ್ನಾಟಕ ರಾಜ್ಯ ಕಟ್ಡಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ರಾಜ್ಯ ಕಾರ್ಯದರ್ಶಿಗಳಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-೨ ತಹಸೀಲ್ದಾರ ಗುರುರಾಜ ಸಂಗಾವಿ ಅವರಿಗೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here