ಜಾನಪದ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

0
184
  • ಸಂಜೀವಕುಮಾರ ಶೆಟ್ಟಿ ಹೇಳಿಕೆ | ಕೆಎಚ್‌ಬಿ ಗ್ರೀನ್ ಪಾರ್ಕನಲ್ಲಿ ಗಡಿನಾಡು ಜಾನಪದ ಕಲಾವಿದರಿಗೆ ಸತ್ಕಾರ

ಕಲಬುರಗಿ: ನಮ್ಮ ದೇಶದ ಮೂಲ ಸಂಸ್ಕೃತಿ, ಪರಂಪರೆಯಾದ ಜಾನಪದ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಮುಟ್ಟಿಸುವ ಕಾರ್ಯಮಾಡುತ್ತಿರುವ ಜಾನಪದ ಕಲಾವಿದರಿಗೆ ಸರ್ಕಾರ, ಸಂಘ-ಸಂಸ್ಥೆಗಳು, ಸಾರ್ವಜನಿಕರು ಕಲೆಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಕೆಎಚ್‌ಬಿ ಗ್ರೀನ್ ಪಾರ್ಕ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಹೇಳಿದರು.

ನಗರದ ಆಳಂದ ರಸ್ತೆಯ ಸಂತೋಷ ಕಾಲನಿಯಲ್ಲಿರುವ ಬಡಾವಣೆಯ ದಕ್ಷಿಣಮುಖಿ ಹನುಮಾನ ದೇವಸ್ಥಾನದ ಆವರಣದಲ್ಲಿ ’ಕೆಎಚ್‌ಬಿ ಗ್ರೀನ್ ಪಾರ್ಕ ಬಡಾವಣೆ’ಯ ವತಿಯಿಂದ ಭಾನುವಾರ ಏರ್ಪಡಿಲಾಗಿದ್ದ ’ಶ್ರಾವಣ ಮಾಸದ ಭಜನಾ ಮಂಗಲ : ಜಾಗರಣೆ, ಪಾರಿಜಾತ ಭಜನೆ ಮತ್ತು ಗಡಿನಾಡು ಜಾನಪದ ಕಲಾವಿದರಿಗೆ ಗೌರವ ಸತ್ಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ಮುಖ್ಯ ಅತಿಥಿಯಾಗಿದ್ದ ಕನ್ನಡ ಜಾನಪ ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ ಮಾತನಾಡಿ, ಭಜನೆಯು ಜಾನಪದ ಕಲೆಯಲ್ಲಿ ಪ್ರಸಿದ್ದ ಒಂದು ವಿದವಾಗಿದೆ. ಇದು ಮನಸ್ಸಿನ ಮಲೀನತೆಯನ್ನು ತೊಳೆಯುವ, ಆಂತರಿಕವಾಗಿ ನೆಮ್ಮದಿ ನೀಡುವ, ದೇವರ ಪ್ರಾರ್ಥನೆ ಮಾಡುವ, ಸಮಾಜಕ್ಕೆ ಮೌಲ್ಯಗಳನ್ನು ನೀಡುವ ಒಂದು ಅದ್ಭುತವಾದ ಜಾನಪದ ಕಲೆಯಾಗಿದೆ. ಪ್ರಸ್ತುತವಾಗಿ ವಚನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಭಜನೆಯಲ್ಲಿ ಅಳವಡಿಸಿ ಹಾಡಬೇಕಾಗಿದೆ. ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿರುವ ಕೆಎಚ್‌ಬಿ ಬಡಾವಣೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಾಲಕೃಷ್ಣ ಕುಲಕರ್ಣಿ, ಡಿ.ವಿ.ಕುಲಕರ್ಣಿ, ಚಂದ್ರಕಾಂತ ತಳವಾರ, ಸಂಗಮೇಶ್ವರ ಸರಡಗಿ, ರಮೇಶ ಕೋರಿಶೆಟ್ಟಿ, ನ್ಯಾಯವಾದಿ ಹಣಮಂತರಾಯ ಎಸ್.ಅಟ್ಟೂರ್, ರಾಜೇಶ ನಾಗಭುಜಂಗೆ, ಡಾ.ಸುನೀಲಕುಮಾರ ಎಚ್.ವಂಟಿ, ವೀರೇಶ ಬೋಳಶೆಟ್ಟಿ ನರೋಣಾ, ದೇವೇಂದ್ರಪ್ಪ ಗಣಮುಖಿ, ಶಿವಕಾಂತ ಚಿಮ್ಮಾ, ಶ್ರೀನಿವಾಸ ಎಂ.ಬುಜ್ಜಿ, ಸೂರ್ಯಕಾಂತ ಸಾವಳಗಿ, ಬಸವರಾಜ ಹೆಳವರ ಯಾಳಗಿ, ದತ್ತಾತ್ರೇಯ ಸಾಬಣಿ, ಶಂಭುಲಿಂಗ ವಾಡಿ, ವಿನೋದ ಪಡನೂರ, ರವೀಂದ್ರ ಗುತ್ತೇದಾರ, ರಾಮದಾಸ ಪಾಟೀಲ, ಪಾಂಡುರಂಗ ಕಟಕೆ, ಕಲ್ಯಾಣರಾವ, ರಾಜಶೇಖರ ಜಕ್ಕಾ, ಕೆ.ಬಿ.ಕುಲಕರ್ಣಿ, ಮಲಕಾರಿ ಪೂಜಾರಿ, ಕುಶಾಲ್ ದರ್ಗಿ, ಸಿದ್ದರಾಮ ತಳವಾರ, ಸಿದ್ರಾಮಪ್ಪ ಬಿರಾದಾರ, ಮಲ್ಲಿನಾಥ ಮುನ್ನಳ್ಳಿ, ಸಂಜೀವಕುಮಾರ ಕೋಗ್ರೆ, ರಮೇಶ ಮೇಲಗಿರಿ ಸೇರಿದಂತೆ ಬಡಾವಣೆ ಹಾಗೂ ಸುತ್ತಲಿನ ಬಡಾವಣೆಯ ನಾಗರಿಕರು ಭಾಗವಹಿಸಿದ್ದರು.

ಆಳಂದ ತಾಲೂಕಿನ ಗಡಿಗ್ರಾಮಗಳ ಜಾನಪದ ಕಲಾವಿದರಾದ ಮಹಾರಾಷ್ಟ್ರದ ಜತ್ತ್ ತಾಲೂಕಿನ ಸೋನ್ಯಾಳ್ ಗ್ರಾಮದ ಶ್ರೀ ವಿಜಯ ವಿಠಲ ಭಜನಾ ಮಂಡಳಿ ಮತ್ತು ಇದೇ ತಾಲೂಕಿನ ಅಂಕಲಗಿ ಗ್ರಾಮದ ಶ್ರೀ ಹನುಮಾನ ಭಜನಾ ಮಂಡಳಿ ವತಿಯಿಂದ ದಿನವಿಡೀ ಪಾರಿಜಾತ ಭಜನಾ ಕಾರ್ಯಕ್ರಮ ಜರುಗಿತು. ಪುಷ್ಪಾವತಿ, ಸಿದ್ದಣಗೌಡ್, ರಾಜೇಶ್ವರಿ, ಹಾಜಿ ಮಸ್ತಾನ್ ಹಾಗೂ ಉಭಯ ತಂಡದ ಇನ್ನೂಳಿದ ಕಲಾವಿದರಿಗೆ ಸತ್ಕರಿಸಿ, ಗೌರವಿಸಲಾಯಿತು.

ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳವರೆಗೆ ಅರ್ಚಕ ಶಿವಕಾಂತ ಚಿಮ್ಮಾ ಅವರಿಂದ ದಿನನಿತ್ಯ ಬೆಳೆಗ್ಗೆ ದಕ್ಷಿಣಮುಖಿ ಆಂಜನೇಯ ಮೂರ್ತಿಗೆ ವಿಶೇಷ ಪೂಜೆ, ಕೆಎಚ್‌ಬಿ ಭಜನಾ ಮಂಡಳಿಯಿಂದ ದಿನನಿತ್ಯ ರಾತ್ರಿ ಭಜನೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಾನುವಾರ ಇವುಗಳ ಸಮಾರೋಪ ನೆರವೇರಿತು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here