ಶಹಾಬಾದ : ಎಲ್ಲ ಧರ್ಮ, ಜಾತಿಗಳಿಗೆ ಸಮಾನತೆ, ಸಮಾನ ಅವಕಾಶ ನೀಡಿದ ಸಂವಿಧಾನ ಕರ್ತೃ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತೋತ್ಸವಗಳು ಕಾಟಾಚಾರಕ್ಕೆ ನಡೆಯದೆ ಅವರ ಬದುಕು, ಆದರ್ಶ, ತತ್ವಗಳ ಗಂಭೀರ ಚಿಂತನೆಗಳ ಚರ್ಚೆಗೆ ವೇದಿಕೆಯಾಗಬೇಕು ಎಂದು ಸಂಯೋಜಕ ವಿಶಾಲ ಮಹಾದೇವ ತರನಳ್ಳಿ ಹೇಳಿದರು.
ಅವರು ತಾಲೂಕಿನ ತರನಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಸಂಸ ತರನಳ್ಳಿ ಗ್ರಾಮ ಘಟಕದ ವತಿಯಿಂದ ಆಯೋಜಿಸಲಾದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ೧೩೧ನೇ ಜಯಂತೋತ್ಸವದ ನಿಮಿತ್ತ ಆಯೋಜಿಸಲಾದ ಸಂವಿಧಾನ ರಕ್ಷಣೆಗಾಗಿ ಹಾಗೂ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಇದನ್ನೂ ಓದಿ: ‘ಬುದ್ಧ ಪೂರ್ಣಿಮಾ’ದ ಇತಿಹಾಸ, ಮಹತ್ವ ಮತ್ತು ಉಲ್ಲೇಖಗಳೂ
ಬಡತನದಲ್ಲಿ ಜನಿಸಿ ಹಲವು ನೋವುಗಳ ಮಧ್ಯೆ ತಮ್ಮ ವಿದ್ಯಾಬ್ಯಾಸವನ್ನು ಪಡೆದ ಅಂಬೇಡ್ಕರ್ ಅವರು ಜಗತ್ತಿನ ಹಲವು ದೇಶಗಳ ಸಂವಿಧಾನ ಅಧ್ಯಯನ ಮಾಡಿ ಅಮೇರಿಕಾ, ಇಂಗ್ಯೆಂಡ್, ಐರ್ಲೆಂಡ್ ದೇಶದ ಪ್ರಮುಖ ಅಂಶ ತೆಗೆದುಕೊಂಡು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತ ಸಂವಿಧಾನ ನಮ್ಮ ದೇಶಕ್ಕೆ ಸಮರ್ಪಣೆ ಮಾಡಿದ ಕೀರ್ತಿ ಇದೆ ಎಂದರು.
ಕರ್ನಾಟಕ ರಾಜ್ಯ ದಸಂಸ ಸಂಘಟನಾ ಸಂಚಾಲಕ ಕೃಷ್ಣಪ್ಪ ಕರಣಿಕ್ ಮಾತನಾಡಿ, ವ್ಯವಸ್ಥಿತ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ನಾಯಕ ಅಂಬೇಡ್ಕರ್. ಇಂದು ಸಮಾಜದಲ್ಲಿ ಅಂಬೇಡ್ಕರ್ ವೇಷಧಾರಿಗಳು ಕಾಣಸಿಗುತ್ತಾರೆಯೇ ಹೊರತು, ಅವರಂತೆ ನಡೆದುಕೊಳ್ಳುವವರು ಕಡಿಮೆ. ದೇಶ, ಸಮಾಜ ಮತ್ತು ತನ್ನವರಿಗಾಗಿ ಬಾಬಾಸಾಹೇಬರು ಬಾಳಿದಂತೆ ಬಾಳು ನಡೆಸಬಾಕಾದವರು ಬೇಕಾಗಿದೆ. ಕೇವಲ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪೂಜೆ ಮಾಡುವುದಕ್ಕಿಂತಲೂ ಅವರ ಚರಿತ್ರೆಯನ್ನು ಅರಿತು ನಡೆಯಬೇಕಾಗಿದೆ.ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲ ವರ್ಗದ ಜನ, ವಿಶೇಷವಾಗಿ ದಲಿತರು ಸಾಗಬೇಕಿದೆ ಎಂದರು.
ಇದನ್ನೂ ಓದಿ: ಕಲಬುರಗಿ: ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ರೌಡಿಗಳ ಪರೇಡ್
ಕಾಂಗ್ರೆಸ್ ಮುಖಂಡರಾದ ಅಜಿತ್‌ಕುಮಾರ ಪಾಟೀಲ, ರವಿ ಚವ್ಹಾಣ, ಬಿಜೆಪಿ ಮುಖಂಡ ಬಸವರಾಜ ಮದ್ರಿಕಿ, ದಸಂಸ ತಾಲೂಕಾ ಸಂಚಾಲಕ ಮಹಾದೇವ ತರನಳ್ಳಿ, ತಾಲೂಕಾ ಸಂಘಟನಾ ಸಂಚಾಲಕ ತಿಪ್ಪಣ್ಣ ಧನ್ನೇಕರ್,ಭೀಮ ಆರ್ಮಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ ಹುಗ್ಗಿ, ಮಾಜಿ ಗ್ರಾಪಂ ಸದಸ್ಯರಾದ ವೀರಯ್ಯಸ್ವಾಮಿ ಟೆಂಗಳಿ, ಬಸವರಾಜ ಖಣದಾಳ, ಹಣಮಂತ ಕೊಂಡಯ್ಯ, ಅವಿನಾಶ ಕೊಂಡಯ್ಯ, ಶರಣು ಧನ್ನೇಕರ್ ಸೇರಿದಂತೆ ಅನೇಕರು ಇದ್ದರು.