ನ್ಯಾಯಮೂರ್ತಿ ನಾಗಮೋಹನದಾಸ ವರದಿ ಯಥಾವತ್ತಾಗಿ ಜಾರಿಗೆ ಪೂರ್ವಬಾವಿ ಸಭೆ

0
203
  • ಮೀಸಲಾತಿಗೆ ಯಾರಿಗೆ ಕೊಡಬೇಕು ? ಅರಿಯದ ಸರ್ಕಾರ !
  • ಮೇಲ್ವರ್ಗದ ಬೇಡ ಜಂಗಮ ಪರಿಶಿಷ್ಟ ಜಾತಿ/ ಪಂಗಡಕ್ಕೆ ಪಟ್ಟಿಗೆ ವಿರೋಧಿಸಿ ಉಗ್ರ ಹೋರಾಟ
  • ದಲಿತ ಸಮನ್ವಯ ಸಮಿತಿ ಖಂಡನೆ

ಜೇವರ್ಗಿ: ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಎಂದರೆ ಏನು ? ಎನ್ನುವ ಮೂಲಭೂತ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವಲ್ಲಿ ಸರಕಾರ ವಿಫಲವಾಗಿದೆ. ಸಂವಿಧಾನಬದ್ಧವಾಗಿ ಈ ಮಿಸಲಾತಿಯನ್ನು ಪಡೆಯಲು ಯಾರು ಅರ್ಹರು ಎನ್ನುವ ವಿವೇಚನೆಯನ್ನು ಸರಕಾರ ಹೊಂದಿಲ್ಲ. ಕೇವಲ ಪ್ರಚಾರಕ್ಕಾಗಿ ಹಾಗೂ ಮಠಾಧೀಶರನ್ನು ಒಲಿಸುವ ಕಾರಣಕ್ಕಾಗಿ ಬುಡಗಜಂಗಮ ಅಥವಾ ಬೇಡ ಜಂಗಮ ಜಾತಿಯನ್ನು ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿಸಲು ಹೊರಟಿರುವುದು ಸಂವಿಧಾನಾತ್ಮಕವಾಗಿ ಸರಿಯಲ್ಲ. ಇದು ಶೋಷಿತರ ಹಕ್ಕನ್ನು ಕಸಿದುಕೊಳ್ಳುವ ಹಾಗೂ ಮೇಲ್ವರ್ಗದ ಜನರ ಮತಬ್ಯಾಂಕ ಒಲೈಕೆ ಕುತಂತ್ರವಾಗಿದೆ. ಇಂದು ಇಲ್ಲಿನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಭವನದಲ್ಲಿ ಸಭೆ ಸೇರಿದ ಪರಿಶಿಷ್ಟ ಜಾತಿ ಪಂಗಡ ಹಾಗೂ ದಲಿತ ಸಮನ್ವಯ ಸಮಿತಿಯ ಎಲ್ಲಾ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ಸಮಾಜದಲ್ಲಿ ಶ್ರೇಣಿಕೃತ ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿದ್ದು, ಇತಿಹಾಸದ ಪೂರ್ವದಿಂದಲೂ ಇಲ್ಲಿಯವರೆಗೂ ಎಲ್ಲಾ ದೇವಾಲಯಗಳು, ಗುಡಿ-ಗುಂಡಾರಗಳಿಗೆ ಪ್ರವೇಶವನ್ನು ಪಡೆದ ಗುರುಗಳು, ಪಠಾಧೀಶರು ,ಜಂಗಮರು ಸೇರಿದಂತೆ ಕುಲ ಗುರುಗಳೆಂದು ಪೂಜಿಸಲ್ಪಟ್ಟು ಸಮಾಜದ ಮೇಲ್ವರ್ಗದಲ್ಲಿರುವ ಶೋಷಣೆಯ ಗಂಧ ಗಾಳಿಯನ್ನು ,ಅರಿಯದ ಸಮಾಜದಲ್ಲಿ ಎಲ್ಲರಿಂದಲೂ (ಬ್ರಾಹ್ಮಣರನ್ನು ಹೊರತುಪಡಿಸಿ) ಪಾದಪೂಜೆ ಮಾಡಿಸಿಕೊಳ್ಳುವ ಈ, ಸಮುದಾಯದ ಜನರು ತುಳಿತಕ್ಕೊಳಗಾದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಪಟ್ಟಿಗೆ ಬಂದು ನಮ್ಮ ಹಕ್ಕನ್ನು ಕಸಿದುಕೊಳ್ಳುವುದು ಯಾವ ನ್ಯಾಯ ? ಎಂದು ಸಭೆಯಲ್ಲಿ ಚರ್ಚಿಸಿ ಸರಕಾರದ ಈ ಅ ಸಂವಿಧಾನಿಕ ನೀತಿಯನ್ನು ವಿರೋಧಿಸಿದರು.

Contact Your\'s Advertisement; 9902492681

ಮಠಾಧೀಶರು ಹಾಗೂ ಸ್ವಾಮಿಗಳೆಂದರೆ ರಾಜಕಾರಣಿಗಳ ಎದೆಯಲ್ಲಿ ನಡುಕ: ಆಡಳಿತ ನಡೆಸುವ ಸರಕಾರಗಳು ಪಠಾಧೀಶರು ಸೇರಿದಂತೆ ಗುರುಗಳು ಹಾಗೂ ಜಂಗಮ ಸಮುದಾಯದ ಮೇಲೆ ಅವಿನಾಭಾವ ಭಕ್ತಿಯನ್ನು ಹೊಂದಿದ್ದು, ಆಶ್ರಮ ಸೇರಿದಂತೆ ದೇವಸ್ಥಾನಗಳಿಗೆ ,ಮಠಗಳಿಗೆ ಅನುದಾನ ನೀಡಿ ಸಮುದಾಯದ ಮತ ಬ್ಯಾಂಕಿಗೆ ಲಗ್ಗಿ ಹಾಕುವ ಉದ್ದೇಶದಿಂದ ಈ ರೀತಿ ಜಾತಿ ಪ್ರಮಾಣ ಪತ್ರ ನೀಡಲು ಮುಂದಾಗಿರುವುದು ದೇಶದ ಎಲ್ಲಾ ಶೋಷಿತ ಸಮುದಾಯದ ಜನರು ಪಕ್ಷ ಬೇಧ ಹಾಗೂ ಜಾತಿಭೇದವನ್ನು ಮರೆತು ಒಂದಾಗಿ ಖಂಡಿಸಲೇಬೇಕು. ಇಲ್ಲವಾದರೆ ನಮ್ಮ ಮುಂದಿನ ಪೀಳಿಗೆ ಅಮ್ಮನ್ನು ಕ್ಷಮಿಸುವುದಿಲ್ಲ, ಎಂದು ಸಂಘಟಿತ ಹೋರಾಟಕ್ಕೆ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ನ್ಯಾಯಮೂರ್ತಿ ನಾಗಮೋಹನದಾಸ ವರದಿ ಯಥಾವತ್ತಾಗಿ ಜಾರಿಯಾಗಬೇಕು ಹಾಗೂ ಶೋಷಿತರ ಜನಸಮುದಾಯಗಳ ಆಧಾರದ ಮೇಲೆ ಹಾಗೂ ಶೋಷಣೆಗೆ ಒಳಗಾದ ಜನರ ಆರ್ಥಿಕ ಸಾಮಾಜಿಕ ಧಾರ್ಮಿಕ ಹಾಗೂ ಶೈಕ್ಷಣಿಕ ನೆಲಗಟ್ಟಿನ ಮೇಲೆ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕು. ಸಂವಿಧಾನಬದ್ಧವಾಗಿ ಯೋಜನೆಗಳನ್ನು ಜಾರಿಗೆ ತರಬೇಕು , ಎನ್ನುವ ವರಧಿ ಆಧರಿಸಿ ಸರ್ಕಾರ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕು ಹಾಗೂ ಬೇರೆ ಯಾವುದೇ ಜಾತಿ ಪಂಗಡದವರು ಈ ಪಟ್ಟಿಯಲ್ಲಿ ನುಸುಳಿದಂತೆ ನೋಡಿಕೊಳ್ಳಬೇಕು .ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ ಪಂಗಡಗಳ ನೂರಾರು ಸಮುದಾಯದ ಜನಗಳ ಹೊಟ್ಟೆ ಮೇಲೆ ಹೊಡೆದು ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಬಾರದು .ಈ ನಿಟ್ಟಿನಲ್ಲಿ ಐತಿಹಾಸಿಕ ಹೋರಾಟ ರೂಪಿಸಲು ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹಾಗೂ ಬೋವಿ ಸಮಾಜದ ಲಂಬಾಣಿ ಸಮುದಾಯದ ಸೇರಿದಂತೆ ಹಾಗೂ ಡೋಹರ್ ಸಮುದಾಯದ ತಾಲೂಕು ಮಟ್ಟದ ಎಲ್ಲಾ ನಾಯಕರು ನೂರಾರು ಸಂಖ್ಯೆಯಲ್ಲಿ ಪಕ್ಷಾತೀತವಾಗಿ ಭಾಗವಹಿಸಿ ಮುಂದಿನ ಹೋರಾಟವನ್ನು ರೂಪಿಸುವ ಕಾರ್ಯ ಯೋಜನೆಯನ್ನು ತಯಾರಿಸಲಾಯಿತು.

ಇಡೀ ಕರ್ನಾಟಕ ರಾಜ್ಯದಲ್ಲಿಯೇ ವಿಶಿಷ್ಟ ರೀತಿಯಲ್ಲಿ ಹಾಗೂ ವ್ಯವಸ್ಥಿತವಾಗಿ ಹೋರಾಟವನ್ನು ರೂಪಿಸಲು ಸಮುದಾಯಗಳ ನಾಯಕರ ಮನವೊಲಿಸಿ, ಯಾವುದೇ ರೀತಿಯ ಮನಸ್ತಾಪ ಹಾಗೂ ಭಿನ್ನಾಭಿಪ್ರಾಯಗಳು ಉಂಟಾಗದಂತೆ ಹೋರಾಟ ರೂಪಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here